ಸಿಸ್ಟಂ ವೈಫಲ್ಯದ ನಂತರ ಅಮೆರಿಕದ 5,400ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ಭಾರೀ ವಿಳಂಬ

ನವದೆಹಲಿ: ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದಿಂದಾದ ಅಭೂತಪೂರ್ವ ಅಡಚಣೆಯಿಂದ ಬುಧವಾರ ಅಮೆರಿಕದಾದ್ಯಂತ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿವೆ. ಅಪಾಯಗಳು, ವಿಮಾನ ನಿಲ್ದಾಣದ ಸೌಲಭ್ಯಗಳಲ್ಲಿನ ಬದಲಾವಣೆಗಳು ಮತ್ತು ಇತರ ಅಗತ್ಯ ಮಾಹಿತಿಯ ಬಗ್ಗೆ ವಿಮಾನ ಸಿಬ್ಬಂದಿಗೆ ಮಾಹಿತಿಯನ್ನು ಒದಗಿಸುವ ನೋಟಿಸ್ ಟು ಏರ್ ಮಿಷನ್ಸ್ ಸಿಸ್ಟಮ್ (NOTAM) ನಲ್ಲಿನ ಸಮಸ್ಯೆ ಕಾಣಿಸಿಕೊಂಡ ನಂತರ ಅಮೆರಿಕದ ಎಲ್ಲಾ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ.
ಅಮೆರಿಕ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ದೇಶಾದ್ಯಂತ ಸಾಮಾನ್ಯ ವಾಯು ಸಂಚಾರ ಕಾರ್ಯಾಚರಣೆಗಳು ಕ್ರಮೇಣ ಪುನರಾರಂಭಗೊಳ್ಳುತ್ತಿವೆ ಎಂದು ಹೇಳಿದೆ. “ಸಾಮಾನ್ಯ ವಾಯು ಸಂಚಾರ ಕಾರ್ಯಾಚರಣೆಗಳು ಅಮೆರಿಕದಾದ್ಯಂತ ಕ್ರಮೇಣ ಪುನರಾರಂಭಗೊಳ್ಳುತ್ತಿವೆ. ನಾವು ಆರಂಭಿಕ ಸಮಸ್ಯೆಯ ಕಾರಣವನ್ನು ಪರಿಶೀಲಿಸುತ್ತಿದ್ದೇವೆ ಎಂದು FAA ಟ್ವಿಟರ್‌ನಲ್ಲಿ ತಿಳಿಸಿದೆ.

ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ಅವೇರ್ ಅಮೆರಿಕದ ಒಳಗೆ ಅಥವಾ ಹೊರಗೆ ಸುಮಾರು 5,400 ವಿಮಾನಗಳು 7 ಗಂಟೆ ವಿಳಂಬವಾಗಿದೆ ಎಂದು ವರದಿ ಮಾಡಿದೆ. ಹೆಚ್ಚುವರಿ 900 ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದೆ.
ಸಲಹೆಯೊಂದರಲ್ಲಿ, ನಾಗರಿಕ ವಿಮಾನಯಾನ ನಿಯಂತ್ರಕವು ತನ್ನ NOTAM (ವಿಮಾನ ಕಾರ್ಯಾಚರಣೆಗಳಿಗೆ ಸೂಚನೆ) ವ್ಯವಸ್ಥೆಯು “ವಿಫಲವಾಗಿದೆ” ಎಂದು ಹೇಳಿದೆ. ಇದು ಯಾವಾಗ ಸರಿದಾರಿಗೆ ಬರುತ್ತದೆ ಎಂಬುದಕ್ಕೆ ತಕ್ಷಣದ ಅಂದಾಜು ಇಲ್ಲ ಎಂದು ವೆಬ್‌ಸೈಟ್ ತೋರಿಸಿದೆ, ಆದರೂ ಸ್ಥಗಿತಗೊಳ್ಳುವ ಮೊದಲು ನೀಡಲಾದ ನೋಟಮ್‌ (NOTAM)ಗಳನ್ನು ಇನ್ನೂ ವೀಕ್ಷಿಸಬಹುದಾಗಿದೆ.
ಅಮೆರಿಕದಾದ್ಯಂತ ವಿಮಾನ ವಿಳಂಬ ಮತ್ತು ನಿಲುಗಡೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಯಾಣಿಕರು ವರದಿ ಮಾಡಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ದೇಶಾದ್ಯಂತ ವಿಮಾನ ನಿಲ್ದಾಣಗಳ ಪರಿಣಾಮ ಬೀರಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement