ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ, ಇತರ ಕಾಂಗ್ರೆಸ್ ಮುಖಂಡರ ಗೃಹಬಂಧನದಲ್ಲಿರಿಸಿದ ತೆಲಂಗಾಣ ಸರ್ಕಾರ

ಹೈದರಾಬಾದ್: ತೆಲಂಗಾಣ ಸರ್ಕಾರ ಕೊಕಾಪೇಟೆ ಭೂಮಿಯನ್ನು ಹರಾಜು ಹಾಕಿದ ರೀತಿಗೆ ವಿರುದ್ಧವಾಗಿ ಕಾಂಗ್ರೆಸ್ಸಿನ ಗಂಭೀರ ಆರೋಪಗಳ ನಂತರ, ತೆಲಂಗಾಣ ಪ್ರದೇಶಕಾಂಗ್ರೆಸ್‌ ಸಮಿತಿ ಮುಖ್ಯಸ್ಥ (ಟಿಪಿಸಿಸಿ) ಮುಖ್ಯಸ್ಥ ಎ ರೇವಂತ್ ರೆಡ್ಡಿ ಸೇರಿದಂತೆ ಹಲವಾರು ನಾಯಕರನ್ನು ಗೃಹಬಂಧನದಲ್ಲಿರಿಸಲಾಯಿತು.
ಇಂದಿನಿಂದ (ಸೋಮವಾರ) ಪ್ರಾರಂಭವಾಗುವ ಸಂಸತ್ ಅಧಿವೇಶನಗಳಲ್ಲಿ ಪಾಲ್ಗೊಳ್ಳಲು ಸಂಸದ ರೇವಂತ್ ನವದೆಹಲಿಗೆ ಹೊರಟಿದ್ದರು. ಮಾಜಿ ಸಚಿವ ಆರ್ ದಾಮೋದರ್ ರೆಡ್ಡಿ, ಟಿಪಿಸಿಸಿ, ಪ್ರಧಾನ ಕಾರ್ಯದರ್ಶಿ ವಿನೋದ್ ರೆಡ್ಡಿ, ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ ಅನಿಲ್ ಕುಮಾರ್ ಯಾದವ್, ಮತ್ತು ಎನ್‌ಎಸ್‌ಯುಐ ರಾಜ್ಯ ಅಧ್ಯಕ್ಷ, ಬಲ್ಮೂರ್ ವೆಂಕಟ್ ಅವರು ಧರಣಿ ಆಯೋಜಿಸಿದ್ದ ಕೊಕಾಪೇಟೆಗೆ ತೆರಳುತ್ತಿದ್ದರು,
ಏತನ್ಮಧ್ಯೆ, ಟಿಪಿಸಿಸಿ ಉಪಾಧ್ಯಕ್ಷ ಶಬ್ಬೀರ್ ಅಲಿ, ವೆಮ್ ನರೇಂದರ್ ರೆಡ್ಡಿ ಸೇರಿದಂತೆ ಹಿರಿಯ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ, ಮತ್ತು ಇದು ಜನರ ಧ್ವನಿಗಳನ್ನು ನಿಗ್ರಹಿಸುವ ನಿರಂಕುಶಾಧಿಕಾರಿ ಮಾರ್ಗವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ದುಷ್ಕೃತ್ಯಗಳಿಗೆ ಸಹಾಯ ಮಾಡುವ ಉನ್ನತ ಅಧಿಕಾರಿಗಳನ್ನು ಕಾಂಗ್ರೆಸ್ ಹೆಸರಿಸಿದ್ದರಿಂದ ಪೊಲೀಸರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಮದು ಆರೋಪಿಸಿದರು. ಮತ್ತು ರೇವಂತ್ ಅವರು ಕೇಂದ್ರ ಗೃಹ ಸಚಿವಾಲಯದಲ್ಲಿ ದೂರು ದಾಖಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement