ಈವರೆಗಿನ ಅತ್ಯಂತ ದೊಡ್ಡದಾದ 19 ಅಡಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಹಿಡಿದ ವ್ಯಕ್ತಿ | ವೀಕ್ಷಿಸಿ

“ಗ್ಲೇಡ್ಸ್ ಬಾಯ್ಸ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಫ್ಲೋರಿಡಾದ ಇಬ್ಬರು ಇದುವರೆಗೆ ದಾಖಲಾದ ಅತಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಇದು 19 ಅಡಿ ಉದ್ದವಿದೆ ಮತ್ತು 125 ಪೌಂಡ್ (56.6 kg) ತೂಕವನ್ನು ಹೊಂದಿದೆ.
ಜುಲೈ 10 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಿಗ್ ಸೈಪ್ರೆಸ್ ನ್ಯಾಷನಲ್ ಪ್ರಿಸರ್ವ್‌ನಲ್ಲಿ 22 ವರ್ಷದ ಜೇಕ್ ವಾಲೇರಿ ಎಂಬಾತ ಹಾವನ್ನು ಕಂಡಿದ್ದಾನೆ. ವೀಡಿಯೊದಲ್ಲಿ ವಾಲೇರಿ ಹೆಬ್ಬಾವನ್ನು ರಸ್ತೆ ಬದಿಯ ಹುಲ್ಲಿನಿಂದ ಹೊರಗೆಳೆದು ಅದರೊಂದಿಗೆ ಸೆಣಸಾಡುತ್ತಿರುವುದನ್ನು ನೋಡಬಹುದು. ಆದು ಆತನನ್ನು ಕಚ್ಚಲು ಪ್ರಯತ್ನಿಸುತ್ತದೆ.
ಯುಎಸ್‌ಎ ಟುಡೇ ಪ್ರಕಾರ, ಅಳತೆ ಮಾಡಲು ಅದನ್ನು ಸೌತ್‌ವೆಸ್ಟ್ ಫ್ಲೋರಿಡಾದ ಕನ್ಸರ್ವೆನ್ಸಿಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಅದು 19 ಅಡಿ ಉದ್ದ ಇರುವುದು ಕಂಡುಬಂದಿದೆ. ಇದಕ್ಕೂ ಮೊದಲು, ಅಕ್ಟೋಬರ್ 2020 ರಲ್ಲಿ ಫ್ಲೋರಿಡಾದಲ್ಲಿ ಹಿಡಿಯಲಾದ ಅತಿದೊಡ್ಡ ಬರ್ಮೀಸ್ ಹೆಬ್ಬಾವು 18 ಅಡಿ ಮತ್ತು ಒಂಬತ್ತು ಇಂಚುಗಳಷ್ಟು ಉದ್ದವಿತ್ತು.

ವೀಡಿಯೊದಲ್ಲಿ, ಹೆಬ್ಬಾವನ್ನು ಹಿಡಿದಾಗ ಅದು ವ್ಯಕ್ತಿಯ ಕಡೆಗೆ ನುಗ್ಗುತ್ತಿರುವುದನ್ನು ಕಾಣಬಹುದು. ಹಾವು ಹಾಗೂ ಹಿಡಿದಾತ ಇಬ್ಬರು ಮೇಲುಗೈ ಸಾಧಿಸಲು ರಸ್ತೆಯಲ್ಲಿ ಉರುಳಾಡುತ್ತಾರೆ ಮತ್ತು ಕೆಲವು ಸೆಕೆಂಡುಗಳ ನಂತರ, ಆತನಿಗೆ ಸಹಾಯ ಮಾಡಲು ಕೆಲವರು ಧಾವಿಸುತ್ತಾರೆ.
ಹೆಬ್ಬಾವಿನ ಗಾತ್ರವನ್ನು ಸೌತ್‌ವೆಸ್ಟ್ ಫ್ಲೋರಿಡಾದ ಕನ್ಸರ್ವೆನ್ಸಿ ದೃಢಪಡಿಸಿದೆ, ಅದು “ಅಧಿಕೃತವಾಗಿ ಇದುವರೆಗೆ ದಾಖಲಾದ ಅತ್ಯಂತ ಉದ್ದದ ಬರ್ಮೀಸ್ ಹೆಬ್ಬಾವಾಗಿದೆ ಎಂದು ಹೇಳಿದೆ. ಈ ಹಿಂದೆ ತಾವು ಹಿಡಿದಿದ್ದ ಅತ್ಯಂತ ಉದ್ದವಾದ ಬರ್ಮೀಸ್ ಹೆಬ್ಬಾವು 18 ಅಡಿ ಮತ್ತು 9 ಇಂಚು ಉದ್ದವಿತ್ತು ಎಂದು “ಗ್ಲೇಡ್ಸ್ ಬಾಯ್ಸ್” ಗುಂಪು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಮೋದಿ ಹೆಸರು ಹೇಳಲು ಹೆದರುವ ರಣಹೇಡಿ..ಸೇನೆಗೆ ಇವ್ರೇನು ಸಂದೇಶ ಕೊಡ್ತಾರೆ ; ಪಾಕ್‌ ಪ್ರಧಾನಿಯನ್ನು ಜರೆದ ಸಂಸದ-ವೀಕ್ಷಿಸಿ

“ಈ ಹಾವುಗಳು ಇಷ್ಟು ದೊಡ್ಡದಾಗಿವೆ ಎಂಬ ಭಾವನೆ ನಮಗಿತ್ತು ಮತ್ತು ಈಗ ನಮಗೆ ಸ್ಪಷ್ಟವಾದ ಪುರಾವೆ ದೊರೆತಂತಾಗಿದೆ ಎಂದು ಕನ್ಸರ್ವೆನ್ಸಿಯ ಜೀವಶಾಸ್ತ್ರಜ್ಞ ಇಯಾನ್ ಈಸ್ಟರ್ಲಿಂಗ್ ಹೇಳಿದ್ದಾರೆ. ನಾವು ಈ ಪರಿಸರ ವ್ಯವಸ್ಥೆಯನ್ನು ಪ್ರೀತಿಸುತ್ತೇವೆ ಮತ್ತು ಸಾಧ್ಯವಾದಷ್ಟು ಇಂಥ ಪ್ರಾಣಿಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತೇವೆ” ಎಂದು ವಾಲೇರಿ ಕನ್ಸರ್ವೆನ್ಸಿಯೊಂದಿಗೆ ಮಾತನಾಡುವಾಗ ಹೇಳಿದರು. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಬರ್ಮೀಸ್ ಹೆಬ್ಬಾವುಗಳು ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಅವುಗಳು ತಮ್ಮ ಆಹಾರವನ್ನು ಹಿಡಿದು ತಿನ್ನುವ ವಿಧಾನಕ್ಕೆ ಹೆಚ್ಚು ಹೆಸರುವಾಸಿಯಾಗಿವೆ. ಹಾವು ಬೇಟೆಯನ್ನು ಸೆರೆಹಿಡಿಯಲು ತನ್ನ ಚೂಪಾದ ಹಿಂಬದಿ-ಹಲ್ಲುಗಳನ್ನು ಬಳಸುತ್ತದೆ ಮತ್ತು ನಂತರ “ಪ್ರಾಣಿಗಳ ಸುತ್ತಲೂ ಅದರ ದೇಹವನ್ನು ಸುತ್ತುತ್ತದೆ, ಪ್ರಾಣಿ ಉಸಿರುಗಟ್ಟುವವರೆಗೆ ಬಿಗಿಯಾಗಿ ಅಮುಕುತ್ತದೆ .

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಜೊತೆ ಸಂಘರ್ಷದಿಂದ ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ : ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚಿಸ್ತಾನ ಪ್ರಾಂತ್ಯ...!

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement