ನವ ದೆಹಲಿ: ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗಾಗಿ ಡಾ.ರೆಡ್ಡಿ’ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (ಡಿಆರ್‌ಎಲ್) ಜೊತೆ ಕರ್ನಾಟಕದ ಧಾರವಾಡದಲ್ಲಿರುವ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ.
ಕರ್ನಾಟಕದ ಧಾರವಾಡದಲ್ಲಿರುವ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ತನ್ನ ಸಮಗ್ರ ಜೈವಿಕ ವಿಜ್ಞಾನ ಆರ್ & ಡಿ ಕಮ್ ಉತ್ಪಾದನಾ ಕೇಂದ್ರದಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ-ಪೂರೈಕೆಗಾಗಿ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಶಿಲ್ಪಾ ಬಯೋಲಾಜಿಕಲ್ಸ್ (ಎಸ್‌ಬಿಪಿಎಲ್) ಡಾ. ರೆಡ್ಡಿ ಅವರೊಂದಿಗೆ ಮೂರು ವರ್ಷಗಳ ಖಚಿತ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ಸೋಮವಾರ ಪ್ರಕಟಿಸಿದೆ.
ವಾಣಿಜ್ಯ ಉತ್ಪಾದನೆಯ ಪ್ರಾರಂಭದ ದಿನಾಂಕದಿಂದ ಮೊದಲ 12 ತಿಂಗಳುಗಳ ವರೆಗೆ ಡ್ಯುಯಲ್ ವೆಕ್ಟರ್ ಸ್ಪುಟ್ನಿಕ್ ವಿ ಉದ್ದೇಶಿತ ಉತ್ಪಾದನೆಯು 50 ಮಿಲಿಯನ್ ಡೋಸ್ (ಕಾಂಪೊನೆಂಟ್ 1 ರ 50 ಮಿಲಿಯನ್ ಮತ್ತು ಕಾಂಪೊನೆಂಟ್ 2 ರ 50 ಮಿಲಿಯನ್) ಆಗಿದೆ ಎಂದು ಶಿಲ್ಪಾ ಮೆಡಿಕೇರ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ ಎಂದು ಲೈವ್‌ಮಿಂಟ್.ಕಾಮ್ ವರದಿ ಮಾಡಿದೆ.
ಲಸಿಕೆಯ ಕ್ಲಿನಿಕಲ್ ಅಭಿವೃದ್ಧಿಗಾಗಿ ಡಾ.ರೆಡ್ಡಿ ಲ್ಯಾಬ್ ಎಚ್‌ವಿಐ/ ಆರ್‌ಡಿಐಎಫ್ ಜೊತೆ ಪಾಲುದಾರಿಕೆ ಹೊಂದಿದೆ ಮತ್ತು ಭಾರತ ಸೇರಿದಂತೆ ಭೌಗೋಳಿಕಗಳಲ್ಲಿ ವಿತರಣಾ ಹಕ್ಕುಗಳನ್ನು ಹೊಂದಿದೆ. ಸ್ಪುಟ್ನಿಕ್ ತಂತ್ರಜ್ಞಾನವನ್ನು ಎಸ್‌ಬಿಪಿಎಲ್‌ಗೆ ವರ್ಗಾಯಿಸಲು ಡಾ.ರೆಡ್ಡಿ ಲ್ಯಾಬ್‌ಗೆ ಅನುಕೂಲವಾಗಲಿದೆ.
ಒಪ್ಪಂದದ ಪ್ರಕಾರ, ಶಿಲ್ಪಾ ಬಯೋಲಾಜಿಕಲ್ಸ್ (ಎಸ್‌ಬಿಪಿಎಲ್) ಲಸಿಕೆ ತಯಾರಿಕೆಯ ಜವಾಬ್ದಾರಿ ಹೊಂದಿದ್ದರೆ, ಡಿಆರ್‌ಎಲ್ ತನ್ನ ಮಾರುಕಟ್ಟೆ ಪ್ರದೇಶಗಳಲ್ಲಿ ಲಸಿಕೆ ವಿತರಣೆ / ಮಾರಾಟದ ಜವಾಬ್ದಾರಿ ಹೊಂದಿರುತ್ತದೆ.ಲಸಿಕೆಯ ಒಂದೇ ಡೋಸ್ ಆವೃತ್ತಿಯಾದ ಸ್ಪುಟ್ನಿಕ್ ಲೈಟ್ ಅನ್ನು ಮುಂದಿನ ದಿನಗಳಲ್ಲಿ ತಯಾರಿಸುವ ಆಯ್ಕೆಯನ್ನು ಕಂಪನಿಗಳು ಅನ್ವೇಷಿಸುತ್ತಿವೆ ಎಂದು ಅದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ