ಪಹಲ್ಗಾಮ್‌ ದಾಳಿ: ತಮ್ಮ ಪ್ರಾಣ ಪಣಕ್ಕಿಟ್ಟು ಭಯೋತ್ಪಾದಕರಿಂದ ಪ್ರವಾಸಿಗರನ್ನು ಕಾಪಾಡಿದ ಕುದರೆ ಸವಾರಿ ನಿರ್ವಾಹಕರು, ಸ್ಥಳೀಯರು…

ನವದೆಹಲಿ: ನವದೆಹಲಿ: ತನ್ನ ತಾಯ್ನಾಡಿಗೆ ಭೇಟಿ ನೀಡುವವರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಪೋನಿವಾಲಾ (ಕುದುರೆ ರೈಡರ್), 11 ಜನರ ಕುಟುಂಬವನ್ನು ರಕ್ಷಿಸಿದ ಟೂರಿಸ್ಟ್‌ ಗೈಡ್‌, ಅಸಂಖ್ಯಾತ ಸ್ಥಳೀಯರು ಮಂಗಳವಾರ ಮಧ್ಯಾಹ್ನ ಪಹಲ್ಗಾಮ್ನಲ್ಲಿ ಭಯೋತ್ಪಾದನೆ ಸಂಭವಿಸಿದಾಗ ಪ್ರವಾಸಿಗರ ನೆರವಿಗೆ ಧಾವಿಸಿ ಕಾಶ್ಮೀರದ ಆತಿಥ್ಯಕ್ಕೆ ಮತ್ತೊಂದು ಆಯಾಮವನ್ನು ತಂದುಕೊಟ್ಟವರಲ್ಲಿ ಸೇರಿದ್ದಾರೆ.
.2019 ರಲ್ಲಿ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿಯಲ್ಲಿ, ಕಾಶ್ಮೀರದ ಪಹಲ್ಗಾಮ್ನ ಮೇಲ್ಭಾಗದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದರು. ಇವರೆಲ್ಲ ಹೆಚ್ಚಾಗಿ ಹೆಚ್ಚಾಗಿ ಇತರ ರಾಜ್ಯಗಳಿಂದ ಬಂದ ಪ್ರವಾಸಿಗರು.
ದೇಶಾದ್ಯಂತದ ಪ್ರವಾಸಿಗರು ಮತ್ತು ಮೃತರ ಕುಟುಂಬಗಳು ಕಾಶ್ಮೀರದಿಂದ ಮನೆಗೆ ತಲುಪಿದ ನಂತರ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆಯೇ ಭಯಾನಕ ಅಗ್ನಿಪರೀಕ್ಷೆಯಲ್ಲಿ ಸಿಲುಕಿದ್ದವರಿಗೆ ಸ್ಥಳೀಯರು ಸಹಾಯ ಮಾಡಿದ ಕತೆಗಳು ಸಹ ವ್ಯಾಪಕವಾಗಿ ಹರಿದಾಡುತ್ತಿವೆ.
ಮೃತರ ಆರಂಭಿಕ ಪಟ್ಟಿಯನ್ನು ಸಾರ್ವಜನಿಕಗೊಳಿಸಿದಾಗ, ಸೈಯದ್ ಆದಿಲ್ ಹುಸೇನ್ ಶಾ ಎಂಬ ಸ್ಥಳೀಯರ ಹೆಸರು ಅದರಲ್ಲಿತ್ತು. ಅವರ ಸಾಹಸಗಾಥೆಯು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ನೂರಾರು ಜನರನ್ನು ಪಹಲ್ಗಾಮ್ನ ಹಪತ್ನಾರ್ಡ್ ಗ್ರಾಮದಲ್ಲಿ ಬುಧವಾರ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿತು.
ಮೃತರಾದ ಇಬ್ಬರಾದ ಕೌಸ್ತುಭ ಗನ್ಬೋಟೆ ಮತ್ತು ಸಂತೋಷ ಜಗದಾಳೆ ಅವರ ಕುಟುಂಬಗಳು ಸಶಸ್ತ್ರ ಭಯೋತ್ಪಾದಕರೊಂದಿಗೆ ಮುಖಾಮುಖಿಯಾಗಿ ನಿಂತಾಗ, 30 ವರ್ಷದ ಕುದುರೆ ರೈಡರ್ಸೈಯದ್ ಆದಿಲ್ ಹುಸೇನ್ ಶಾ ಭಯೋತ್ಪಾದಕರನ್ನು ಎದುರಿಸಿ ನೀವು ಮುಗ್ಧ ಜನರನ್ನು ಏಕೆ ಕೊಲ್ಲುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ

ಪ್ರವಾಸಿಗರನ್ನು ರಕ್ಷಿಸುವ ಧೈರ್ಯಶಾಲಿ ಪ್ರಯತ್ನದಲ್ಲಿ, ಅವರು ಭಯೋತ್ಪಾಕನಿಂದ ಆಯುಧವನ್ನು ಕಸಿದುಕೊಳ್ಳಲು ಪ್ರಯತ್ನಿಸಿದನು. ಮತ್ತೊಬ್ಬ ಭಯೋತ್ಪಾದಕ ಶಾ ಅವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿದರು. ಗಾಯಗೊಂಡ ಸೈಯದ್ ಆದಿಲ್ ಹುಸೇನ್ ಶಾ ಅಸುನೀಗಿದರು.
ತನ್ನ ತಂದೆ ಸಂತೋಷ ಜಗದಾಳೆ ಮತ್ತು ಚಿಕ್ಕಪ್ಪ ಕೌಸ್ತುಭ ಗನ್ಬೋಟೆಯನ್ನು ಕಳೆದುಕೊಂಡ ಅಸವಾರಿ ಜಗದಾಳೆ, ಅವರು ಈ ದಾಳಿಯಿಂದ ಪಾರಾಗುವಾಗ ಮತ್ತೊಬ್ಬ ಪೋನಿ (ಕುದುರೆ) ಸವಾರ ಸಹಾಯಕ್ಕೆ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ.
“ನಾನು ಧೈರ್ಯ ಮಾಡಿ ನನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಕೆಳಗೆ ಬರುವಾಗ, ನನ್ನ ತಾಯಿಗೆ ಕಾಲಿಗೆ ಗಾಯಗಳಾಗಿದ್ದವು. ಒಬ್ಬ ಪೋನಿ ಸವಾರ ನಮಗೆ ಬೆಂಬಲ ಮತ್ತು ಭರವಸೆಯನ್ನು ನೀಡಿದರು. ಅವರು ನಮ್ಮ ಚಾಲಕನಿಗೆ ಪೋನಿ ಸವಾರಿ ನೀಡಿದರು” ಎಂದು ಪುಣೆಯಿಂದ ಪ್ರಯಾಣಿಸಿದ್ದ ಅಸಾವರಿ ವಿವರಿಸಿದರು.
ನಮ್ಮ ಸ್ಥಳೀಯ ಕ್ಯಾಬ್ ಚಾಲಕ ಮತ್ತು ಕುದುರೆ ಸವಾರಿ ನಿರ್ವಾಹಕ “ದಾಳಿಯ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದು, ನಮಗೆ ದೇವರಿಂದ ಕಳುಹಿಸಲ್ಪಟ್ಟ ದೇವತೆಗಳಂತೆ” ಎಂದು ಅವರು ಹೇಳಿದರು.

“ಕುದುರೆ ಸವಾರಿ ಆಪರೇಟರ್ ನಮ್ಮನ್ನು ಬಿಟ್ಟು ಹೋಗಲಿಲ್ಲ, ಅವರು ನಮ್ಮೊಂದಿಗಿದ್ದರು. ಅವರು ನನ್ನ ಚಿಕ್ಕಮ್ಮ, ತಾಯಿ ಮತ್ತು ನನ್ನನ್ನು ಆ ಸ್ಥಳದಿಂದ ಪಾರು ಮಾಡಿದರು” ಎಂದು ಅಸಾವರಿ ತಿಳಿಸಿದರು. ನಾವು ಶ್ರೀನಗರವನ್ನು ತೊರೆದ ನಂತರವೂ ಕ್ಯಾಬ್ ಚಾಲಕ ನಮ್ಮ ಸಂಪರ್ಕದಲ್ಲಿಯೇ ಇದ್ದರು ಮತ್ತು “ಸಾಧ್ಯವಾದ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ಮುಂದಾದರು ಎಂದು ಅವರು ನೆನಪಿಸಿಕೊಂಡರು.
“ನಮಗೆ ಬೇಕಾದ ಯಾವುದೇ ಸಹಾಯ ತಮ್ಮಿಂದ ಕೇಳಬಹುದು , ಅದು ಹಣವಾಗಿರಬಹುದು ಎಂದು ಚಾಲಕ ದೂರವಾಣಿಯಲ್ಲಿ ಹೇಳಿದರುಅವರು ದೂರವಾಣಿಯ ಕರೆಯಲ್ಲಿ ಘಟನೆಗಾಗಿ ಅಳುತ್ತಿದ್ದರು, ನಾನು ಅವರಿಗೆ ಧನ್ಯವಾದ ಹೇಳುತ್ತಿದ್ದೆ, ಅವರು ನಮ್ಮ ಕುಟುಂಬಕ್ಕಾದ ನಷ್ಟಕ್ಕೆ ದುಃಖಿತನಾಗಿದ್ದೇನೆ ಎಂದು ಹೇಳಿ ಅಳುತ್ತಿದ್ದರು. ಅವರು ದೇವರು ಕಳುಹಿಸಿದ ದೇವತೆಗಳಂತೆ ಇದ್ದರು ಎಂದು ಅಸಾವರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

ಮೃತ ಕುದುರೆ ಸವಾರಿ ನಿರ್ವಾಹಕ ಸೈಯದ್ ಆದಿಲ್ ಹುಸೇನ್ ಶಾ ಅವರ ಸೋದರಸಂಬಂಧಿ ನಜಾಕತ್ ಅಹ್ಮದ್ ಶಾ ಕೂಡ ಹತ್ಯಾಕಾಂಡದ ಸ್ಥಳದಲ್ಲಿದ್ದರು ಮತ್ತು ಮೂವರು ಮಕ್ಕಳು ಸೇರಿದಂತೆ 11 ಪ್ರವಾಸಿಗರ ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
28 ವರ್ಷದ ನಜಾಕತ್ ಅಹ್ಮದ್ ಶಾ ನಾಲ್ಕು ದಂಪತಿಗಳು ಮತ್ತು ಮೂವರು ಮಕ್ಕಳನ್ನು ಬೈಸರನ್ಗೆ ಕರೆದೊಯ್ದಿದ್ದರು. ಗುಂಪು ಸ್ಥಳದಿಂದ ಹೊರಡುವ ಮುನ್ನ, ಗುಂಡಿನ ಸದ್ದು ಕೇಳಿ ನಜಾಕತ್ ತಕ್ಷಣವೇ ಇಬ್ಬರು ಮಕ್ಕಳೊಂದಿಗೆ ನೆಲಕ್ಕೆ ಉರುಳಿದರು.
“ನನ್ನ ಮೊದಲ ಕಾಳಜಿ ಪ್ರವಾಸಿ ಕುಟುಂಬಗಳ ಸುರಕ್ಷತೆಯಾಗಿತ್ತು. ನಾನು ಲಕ್ಕಿಯ ಮಗು ಮತ್ತು ಇನ್ನೊಂದು ಮಗುವನ್ನು ಕರೆದುಕೊಂಡು ನೆಲದ ಮೇಲೆ ಮಲಗಿದೆ. ಆ ಪ್ರದೇಶವು ಬೇಲಿಯಿಂದ ಸುತ್ತುವರಿದಿತ್ತು, ಆದ್ದರಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ನಾನು ಬೇಲಿಯಲ್ಲಿ ತೆರೆದ ಒಂದು ಒಂದು ಸಣ್ಣ ಜಾಗವನ್ನು ಗಮನಿಸಿದೆ ಮತ್ತು ಕುಟುಂಬಗಳು ಅದರ ಮೂಲಕ ಹೊರಗೆ ಹೋಗುವಂತೆ ಕೇಳಿಕೊಂಡೆ. ಅವರು ಮೊದಲು ಮಕ್ಕಳನ್ನು ಉಳಿಸಲು ನನ್ನನ್ನು ಕೇಳಿದರು. ನಾನು ಇಬ್ಬರು ಮಕ್ಕಳೊಂದಿಗೆ ಅದರ ಮೂಲಕ ಜಾರಿಕೊಂಡು ಪಹಲ್ಗಾಮ್ ಪಟ್ಟಣದ ಕಡೆಗೆ ಓಡಿದೆ” ಎಂದು ನಜಾಕತ್ ಹೇಳಿದ್ದಾರೆ.

ಮಕ್ಕಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿದ ನಂತರ, ತಾನು ಮತ್ತೆ ಅದೇ ಸ್ಥಳಕ್ಕೆ ಹಿಂತಿರುಗಿ ಇತರರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದೆ. “ದೇವರಿಗೆ ಧನ್ಯವಾದಗಳು, ನಾನು ನಮ್ಮ 11 ಅತಿಥಿಗಳನ್ನು ಸುರಕ್ಷಿತವಾಗಿ ಪಹಲ್ಗಾಮ್ಗೆ ಕರೆದೊಯ್ದೆ” ಎಂದು ಅವರು ಹೇಳಿದರು.
ಪ್ರವಾಸಿಗರಲ್ಲಿ ಒಬ್ಬರಾದ ಅರವಿಂದ ಅಗರ್ವಾಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಜಾಕತ್ ಅಹ್ಮದ್ ಶಾ ಮತ್ತು ಮಗಳೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದಾಗ ನಜಾಕತ್ ಅವರ ನಿಸ್ವಾರ್ಥದ ಕಾರ್ಯದ ಕಥೆ ಹೊರಬಂದಿತು. “ನೀವು ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಜೀವಗಳನ್ನು ಉಳಿಸಿದ್ದೀರಿ, ನಾವು ಎಂದಿಗೂ ನಜಾಕತ್ ಭಾಯ್ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ” ಎಂದು ಅವರು ಬರೆದಿದ್ದಾರೆ.
ಮತ್ತೊಬ್ಬ ಪ್ರವಾಸಿ ಕುಲದೀಪ್ ಸ್ಥಾಪಕ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದಿದ್ದಾರೆ. “ನಜಾಕತ್ ಭಾಯ್, ನೀವು ಆ ದಿನ ನನ್ನ ಜೀವವನ್ನು ಉಳಿಸಿದ್ದಲ್ಲದೆ, ನೀವು ಮಾನವೀಯತೆಯನ್ನು ಜೀವಂತವಾಗಿರಿಸಿದ್ದೀರಿ. ನನ್ನ ಜೀವನದುದ್ದಕ್ಕೂ ನಾನು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಕರುಣೆಯ ಅಳಿಸಲಾಗದ ಮುಖವೆಂದರೆ ಪ್ರವಾಸಿ ಗೈಡ್ಸಜಾದ್ ಅಹ್ಮದ್ ಭಟ್. ಅವರು ಮಗುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಪರ್ವತದ ಇಳಿಜಾರಿನಲ್ಲಿ ಓಡುತ್ತಿರುವ ವೀಡಿಯೊಗಳು ವ್ಯಾಪಕವಾಗಿ ಪ್ರಸಾರವಾದವು ಮತ್ತು ಈ ಧೈರ್ಯಶಾಲಿ, ಈ ಸಹಾಯಕ ವ್ಯಕ್ತಿ ಯಾರೆಂದು ಅನೇಕರು ತಿಳಿದುಕೊಳ್ಳಲು ಬಯಸಿದ್ದರು. “ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ… ಇದು ಮಾನವೀಯತೆಯ ಕೊಲೆ” ಎಂದು ಭಟ್ ತಿಳಿಸಿದರು. ಅವರು ಹುಲ್ಲುಗಾವಲು ತಲುಪಿದಾಗ, ಅನೇಕರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು.
“ನಾವು ಗಾಯಾಳುಗಳನ್ನು ನಮ್ಮ ಕುದುರೆಗಳ ಮೇಲೆ ಹೊತ್ತುಕೊಂಡು ಪಹಲ್ಗಾಮ್ ಆಸ್ಪತ್ರೆಗೆ ಕರೆದೊಯ್ದೆವು. ಕನಿಷ್ಠ 18-20 ಗಾಯಾಳುಗಳನ್ನು ಕುದುರೆಗಳ ಮೇಲೆ ಕರೆದೊಯ್ದೆವು. ಜನರನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋದ ಇತರ ಇಬ್ಬರು-ಮೂರು ಪುರುಷರು ಇದ್ದರು. ನಾನು ಒಂದು ಮಗುವನ್ನು ನನ್ನ ಬೆನ್ನಿನ ಮೇಲೆ ಹೊತ್ತುಕೊಂಡು, ನೀರು ನೀಡಿ, ಆಸ್ಪತ್ರೆಗೆ ಕರೆದೊಯ್ದೆ” ಎಂದು ಶಾಲು ಮಾರಾಟಗಾರ ಮತ್ತು ಪ್ರವಾಸಿ ಗೈಡ್ಸಜಾದ್ ಅಹ್ಮದ್ ಭಟ್ ಹೇಳಿದರು.
ಈ ದಾಳಿಯನ್ನು ಮಾನವೀಯತೆಯ ಮೇಲಿನ ಕಳಂಕ ಎಂದು ಬಣ್ಣಿಸಿದ ಅವರು, ಇಡೀ ಕಾಶ್ಮೀರ ಶೋಕದಲ್ಲಿದೆ ಎಂದು ಹೇಳಿದರು. “ಅವರು ನಮ್ಮನ್ನು ಕೊಲ್ಲಬೇಕಿತ್ತು, ಅದು ಅವರಿಗೆ (ಪ್ರವಾಸಿಗರಿಗೆ) ಸಂಭವಿಸಬಾರದಿತ್ತು. ನಾವು ಪ್ರವಾಸಿಗರೊಂದಿಗೆ ನಿಲ್ಲುತ್ತೇವೆ ಎಂದು ಎಲ್ಲಾ ಭಾರತೀಯರಿಗೂ ಹೇಳಲು ಬಯಸುತ್ತೇವೆ… ನಾವೆಲ್ಲರೂ ಭಾರತೀಯರು” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ 23 ಕೋವಿಡ್-19 ಪ್ರಕರಣಗಳು ವರದಿ; ಹೆದರುವ ಅಗತ್ಯ ಇಲ್ಲ ; ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ

ಜಾಗರೂಕ ಸ್ಥಳೀಯರು ರಕ್ಷಿಸಿದ್ದಾರೆ…
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಐವರು ಸದಸ್ಯರ ಕುಟುಂಬವು ಈ ದುರದೃಷ್ಟಕರ ದಿನದಂದು ಪಹಲ್ಗಾಮ್ನಲ್ಲಿ ಸ್ಥಳೀಯ ದೃಶ್ಯ ವೀಕ್ಷಣೆಗೆ ಹೊರಡುವ ಹಂತದಲ್ಲಿತ್ತು, ಭಯೋತ್ಪಾದಕ ದಾಳಿಯ ಬಗ್ಗೆ ಅವರಿಗೆ ತಿಳಿದಿರಲಿಲ್ಲ, ಆದರೆ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅವರ ಹೋಟೆಲ್ನ ಮಾಲೀಕರು ಮತ್ತು ಸಿಬ್ಬಂದಿ ಹೊರಗೆ ಹೋಗದಂತೆ ಅವರನ್ನು ತಡೆದರು.
ಮಹಾರಾಷ್ಟ್ರದ ಮತ್ತೊಂದು ದಂಪತಿ ಸ್ಥಳದಿಂದ ಬೇಗನೆ ಹೋಗಿ ತಮ್ಮ ಹೋಟೆಲ್ ಅನ್ನು ಸುರಕ್ಷಿತವಾಗಿ ತಲುಪಲು ಸ್ಥಳೀಯರು ಸಹಾಯ ಮಾಡಿದರು.
ಮಹಾರಾಷ್ಟ್ರದ ನಾಂದೇಡ್ನ ಸಾಕ್ಷಿ ಮತ್ತು ಕೃಷ್ಣ ಲೋಲ್ಗೆ, ಬಂದೂಕುಧಾರಿಗಳು ಗುಂಡು ಹಾರಿಸುವ ಸುಮಾರು 15 ನಿಮಿಷಗಳ ಮೊದಲು ಬೈಸರನ್ ಹುಲ್ಲುಗಾವಲಿನಲ್ಲಿದ್ದರು. “ನಾವು ಸ್ಥಳದಿಂದ ಸ್ವಲ್ಪ ದೂರ ಹೋದ ನಂತರ ಗುಂಡು ಹಾರಿಸುವ ಶಬ್ದ ಕೇಳಿಸಿತು” ಎಂದು ಸಾಕ್ಷಿ ಹೇಳಿದರು, “ಸ್ಥಳೀಯರು ನಮಗೆ ವೇಗವಾಗಿ ಅಲ್ಲಿಂದ ಹೋಗಲು ಸಹಾಯ ಮಾಡಿದರು ಎಂದು ಅವರು ತಮ್ಮ ಹೋಟೆಲ್ನಿಂದ ಚಿತ್ರೀಕರಿಸಿದ ವೀಡಿಯೊದಲ್ಲಿ ಹೇಳಿದ್ದಾರೆ. ಅವರ ಪತಿ ಕೃಷ್ಣ ಅವರ ಪೋನಿ ರೈಡ್ ನಿರ್ವಾಹಕರು ಬೇಗನೆ ಅವರನ್ನು ಬೆಟ್ಟದ ಕೆಳಗೆ ಓಡಿಸಿದರು ಎಂದು ನೆನಪಿಸಿಕೊಂಡರು.
“ನಮ್ಮ ಪ್ರವಾಸ ಸಂಯೋಜಕರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸ್ಥಳೀಯ ಜನರು ನಮ್ಮನ್ನು ತಕ್ಷಣ ನಮ್ಮ ಹೋಟೆಲ್ಗೆ ಕರೆದೊಯ್ದರು. ಭಯೋತ್ಪಾದಕ ದಾಳಿ ನಡೆದಿರುವುದು ಹೋಟೆಲ್ನಲ್ಲಿ ನಮಗೆ ತಿಳಿಯಿತು. ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ದಾಳಿ ಸ್ಥಳದ ಕಡೆಗೆ ತೆರಳುತ್ತಿರುವುದನ್ನು ನಾವು ನೋಡಿದ್ದೇವೆ” ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement