14 ದಿನದ ಜನತಾ ಕರ್ಫ್ಯೂ: ಯಾವುದೆಲ್ಲ ಇರುತ್ತದೆ, ಯಾವುದು ಇರುವುದಿಲ್ಲ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದ್ದು, ನಾಳೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೊರೊನಾ ಸೋಂಕು ನಿಯಂತ್ರಣಕ್ಕೆರಾಜ್ಯದಲ್ಲಿ ಮುಂದಿನ 2 ವಾರ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಬಗ್ಗೆ ಸೋಮವಾರ ಸಂಜೆ ೬ ಗಂಟೆ ಸುಮಾರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಅವರು ಹದಿನಾಲ್ಕು ದಿನಗಳ ಕರ್ಫ್ಯೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಕಳೆದ ಶನಿವಾರ ಭಾನುವಾರ ಜಾರಿಗೊಳಿಸಿದ್ದ ವೀಕೆಂಡ್ ಮಾದರಿಯ ಕರ್ಫ್ಯೂ ರೀತಿಯೇ ಮುಂದಿನ 14 ದಿನ ಜನತಾ ಕರ್ಫ್ಯೂ ರಾಜ್ಯಾದ್ಯಂತ ಇರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಯಾವೆಲ್ಲ ಇರಲಿದೆ..
*ನಾಳೆಯಿಂದ (ಏಪ್ರಿಲ್ 27) 14 ದಿನಗಳ ಕಾಲ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಅಗತ್ಯ ವಸುಗಳ ಖರೀದಿಗೆ ಮಾತ್ರ ಅವಕಾಶ
*ಎಲ್ಲ ಸಾರಿಗೆಗಳ ಸಾರಿಗೆ ಸಂಚಾರ ಸಂಪೂರ್ಣ ಬಂದ್, ಖಾಸಗಿ ವಾಹನ ಸಂಚಾರಕ್ಕೆ ನಿಷೇಧ
* ಗೂಡ್ಸ್ ಸರಕು ಸಾಗಾಟಕ್ಕೆ ಅವಕಾಶ
* ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಅವಕಾಶ
* ಮದ್ಯಗಂಡಿಗಳು ಓಪನ್, ಆದರೆ ಪಾರ್ಸೆಲ್ ಗೆ ಅವಕಾಶ
* ಮೆಟ್ರೋ ಸೇವೆ ಸ್ಥಗಿತ
* ಬ್ಯಾಂಕಿಂಗ್ ಕ್ಷೇತ್ರಕ್ಕೆ ಅವಕಾಶ
* ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣಕ್ಕೆ ಅವಕಾಶ, ಉತ್ಪಾದನಾ ವಲಯಕ್ಕೆ ಅವಕಾಶ (ಗಾರ್ಮೆಂಟ್‌ಗಳ ಹೊರತು ಪಡಿಸಿ)
*ವೈದ್ಯಕೀಯ ಸೇವೆಗಳು ಅಬಾಧಿತ
* ಚುನಾವಣೆಗಳಿಗೆ ಅವಕಾಶ ಇಲ್ಲ

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

ಸೋಮವಾರ (ಇಂದು) ಸಂಜೆ ಆರು ಗಂಟೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಅವರು ಹೊಸ  ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement