ಕೇಂದ್ರ ಸಚಿವ ಪ್ರಹ್ಲಾದ ಪಟೇಲಗೆ ಕರೆ ಮಾಡಿ ಅಶ್ಲೀಲ ವೀಡಿಯೊ ಪ್ಲೇ ಮಾಡಿದ ಸೈಬರ್‌ ವಂಚಕರು: ಇಬ್ಬರ ಬಂಧನ

ನವದೆಹಲಿ: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಸುಲಿಗೆ ಮಾಡಲು ಕರೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.
ಸಚಿವರು ತಕ್ಷಣವೇ ಘಟನೆಯನ್ನು ದೆಹಲಿ ಪೊಲೀಸ್ ಕಮಿಷನರ್‌ಗೆ ಅವರಿಗೆ ತಿಳಿಸಿದ್ದಾರೆ, ನಂತರ ಅಪರಾಧ ವಿಭಾಗವು ಈ ಸಂಬಂಧ ರಾಜಸ್ಥಾನದ ಭರತಪುರದಿಂದ ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಅವರನ್ನು ಬಂಧಿಸಿದೆ, ಆದರೆ ಪ್ರಮುಖ ಶಂಕಿತ ಸಬೀರ್ ತಲೆಮರೆಸಿಕೊಂಡಿದ್ದಾನೆ.
ಬಂಧಿತ ವ್ಯಕ್ತಿಗಳು ಸುಲಿಗೆ ಕರೆಗಳು ಮತ್ತು ಬ್ಲ್ಯಾಕ್‌ಮೇಲ್ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟಿತ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಅಪರಾಧ ವಿಭಾಗದ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ಕುರಿತು ಪಟೇಲ್ ಅವರ ಆಪ್ತ ಕಾರ್ಯದರ್ಶಿ ಅಲೋಕಮೋಹನ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ನೇರವಾಗಿ ಸಚಿವ ಪ್ರಹ್ಲಾದ್ ಪಟೇಲ್ ಅವರ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡಿ ಟಾರ್ಗೆಟ್ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಫೋನ್‌ ಕರೆ ಸಮಯದಲ್ಲಿ, ಅವರು ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಅಶ್ಲೀಲ ವೀಡಿಯೊವನ್ನು ಪ್ಲೇ ಮಾಡಿದ್ದಾರೆ. ಆದರೆ, ಸಚಿವರು ತಕ್ಷಣವೇ ಕರೆಯನ್ನು ಅಂತ್ಯಗೊಳಿಸಿದರು ಮತ್ತು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement