ಅಂಕೋಲಾ ; ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ಬೆಂಜ್ ಲಾರಿ, ಚಾಲಕನಿಗಾಗಿ ಹುಡುಕಾಟ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಬೆಂಜ್ ಲಾರಿ ಮತ್ತು ಕೇರಳ ಕೋಝೀಕ್ಕೋಡ್ ನ ಚಾಲಕ ಅರ್ಜುನ್ ಪತ್ತೆಗಾಗಿ ಬಾಂಬ್ ನಿಷ್ಕ್ರೀಯ ಮೆಟಲ್ ಡಿಟೆಕ್ಟರ್‌ ಮೂಲಕ ಪತ್ತೆ ಕಾರ್ಯ ನಡೆದಿದೆ.
ನೌಕಾ ಪಡೆ ಅಧಿಕಾರಿಗಳು , ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡ , ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಮೀಪದ ನದಿಯಲ್ಲಿ ಕೂಡಾ ತಪಾಸಣೆ ನಡೆಸಿದ್ದಾರೆ. ನೆಲದಲ್ಲಿ ಶೋಧ ಕಾರ್ಯ ನಡೆಸಲು ರಾಡಾರ್ ತರಿಸಲಾಗಿದೆ.
ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ಶಿರೂರಿನ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಪರಿಶೀಲಿಸಿದರು.

ಕ್ರೇನ್ ಮೂಲಕ ಗುಡ್ಡದ ಬುಡದವರೆಗೆ ಸಾಗಿ ಮಣ್ಣಿನ ರಾಶಿ ತೆರವು ಕಾರ್ಯ ವೀಕ್ಷಿಸಿದರು.
‘ಮಣ್ಣು ತೆರವು ಮತ್ತು ಕಣ್ಮರೆಯಾದವರ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ನಡೆದ ಸ್ಥಳದಲ್ಲಿ ಮತ್ತೆ ಮಣ್ಣು ಕುಸಿಯುತ್ತಿದೆ. ಹೀಗಾಗಿ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವ ಭರವಸೆ ನೀಡಿದ್ದಾರೆ’ ಎಂದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಮೊದಲಾದವರು ಇದ್ದರು.

ಪ್ರಮುಖ ಸುದ್ದಿ :-   ಜಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement