ಶರದ್ ಪವಾರ್ ಬಣಕ್ಕೆ ನೂತನ ಚಿಹ್ನೆ ಬಳಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ :ಮುಂಬರುವ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗೆ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್ ಬಣವು ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿತ್ರ ಒಳಗೊಂಡ ನೂತನ ಚಿಹ್ನೆಯನ್ನು ಬಳಸಲು ಇಂದು, ಮಂಗಳವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಶರದ್ ಪವಾರ್ ಬಣಕ್ಕೆ ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿತ್ರ ಒಳಗೊಂಡ ಚಿಹ್ನೆಯನ್ನು ಕಾಯ್ದಿರಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಮಾಧ್ಯಮಗಳಲ್ಲಿ ಸಾರ್ವಜನಿಕ ಜಾಹೀರಾತುಗಳನ್ನು ನೀಡುವಂತೆ ಅದು ಸೂಚಿಸಿದೆ.

ಪಕ್ಷದ ವಿಭಜನೆಯ ಬಳಿಕ ಮುಖಂಡ ಅಜಿತ್ ಪವಾರ್ ನೇತೃತ್ವದ ಬಣವು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸೇರ್ಪಡೆಯಾಗಿತ್ತು. ಚುನಾವಣಾ ಆಯೋಗವು ಇತ್ತೀಚೆಗೆ ಅಜಿತ್ ಪವಾರ್‌ ನೇತೃತ್ವದ ಬಣ ನಿಜವಾದ ಎನ್‌ಸಿಪಿ ಎಂದು ಮಾನ್ಯ ಮಾಡಿತ್ತು. ಪಕ್ಷದ ಚಿಹ್ನೆಯನ್ನು ಅದಕ್ಕೆ ನೀಡಿದ್ದರಿಂದ ಎನ್‌ಸಿಪಿಯ ಮೂಲ ಚಿಹ್ನೆ ಗೋಡೆ ಗಡಿಯಾರವು ಅಜಿತ್ ಪವಾರ್ ನೇತೃತ್ವದ ಬಣದಲ್ಲಿಯೇ ಉಳಿದಿತ್ತು. ಅಲ್ಲದೆ, ಶರದ್ ಪವಾರ್ ನೇತೃತ್ವದ ಬಣಕ್ಕೆ ‘ರಾಷ್ಟ್ರೀ ಯವಾದಿ ಕಾಂಗ್ರೆಸ್ ಪಾರ್ಟಿ –ಶರದ್ ಚಂದ್ರ ಪವಾರ್’ ಎಂಬ ಹೆಸರನ್ನು ಅಂತಿಮಗೊಳಿಸಿದ್ದ ಆಯೋ ಗ ಈ ಬಣಕ್ಕೆ ತುತ್ತೂರಿ ಊದುತ್ತಿರುವ ಮನುಷ್ಯನ ಚಿತ್ರವನ್ನು ಚಿಹ್ನೆಯಾಗಿ ಹಂಚಿಕೆ ಮಾಡಿತ್ತು.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement