ವೀಡಿಯೊ..| ಜಾಗ್ರೆಬ್‌ : ಭಾರತೀಯ ಉಡುಗೆ ತೊಟ್ಟು ಗಾಯತ್ರಿ ಮಂತ್ರ-ಸಂಸ್ಕೃತ ಶ್ಲೋಕದ ಮೂಲಕ ಮೋದಿಗೆ ಸ್ವಾಗತಕೋರಿದ ಕ್ರೊಯೇಷಿಯನ್ನರು…!

ಜಾಗ್ರೆಬ್‌: ಕೆನಡಾದ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಕ್ರೊಯೇಷಿಯಾದ ಜಾಗ್ರೆಬ್‌ಗೆ ಭೇಟಿ ನೀಡಿದ್ದಾರೆ. nIwiಬೆಳಸಿದ್ದಾರೆ. ಪ್ರಧಾನಿ ಮೋದಿಗೆ ಅಲ್ಲಿ ಆತ್ಮೀಯ ಸ್ವಾಗತ ದೊರೆಯಿತು.
ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅವರು ಹೊಟೇಲಿಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರನ್ನು ವಂದೇ ಮಾತರಂ ” ಮತ್ತು ” ಭಾರತ್ ಮಾತಾ ಕಿ ಜೈ ” ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಕ್ರೊಯೇಷಿಯಾದ ಪ್ರಜೆಗಳು ಗಾಯತ್ರಿ ಮಂತ್ರದ ಮೂಲಕ ಪ್ರಧಾನಿ ಮೋದಿ ಅವರಿಗೆ ‘ಗಾಯತ್ರಿ ಮಂತ್ರ’ ಮತ್ತು ಇತರ ಸಂಸ್ಕೃತ ಶ್ಲೋಕಗಳ ಮೂಲಕ ಸ್ವಾಗತಿಸಿ ಗಮನಸೆಳೆದಿದ್ದಾರೆ.

ಪ್ರಧಾನಿ ಮೋದಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಭಾರತ ಹಾಗೂ ಕ್ರೊಯೇಷಿಯಾ ನಡುವೆ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಇದು ಎತ್ತಿ ತೋರಿಸಿದೆ. ಭಾರತೀಯ ಸಂಸ್ಕೃತಿಗೆ ಇಷ್ಟೊಂದು ಗೌರವವಿದೆ ಎಂದು ನೋಡಿ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.
ಕ್ರೊಯೇಷಿಯಾದ ಭಾರತೀಯ ಸಮುದಾಯವು ಬಾಲ್ಕನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದೆ ಮತ್ತು ಭಾರತದಲ್ಲಿನ ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಜಾಗ್ರೆಬ್‌ನಲ್ಲಿ, ನಾನು ಭಾರತೀಯ ಸಮುದಾಯದ ಕೆಲವು ಸದಸ್ಯರೊಂದಿಗೆ ಸಂವಹನ ನಡೆಸಿದೆ, ಅವರು ನನಗೆ ಮರೆಯಲಾಗದ ಸ್ವಾಗತ ನೀಡಿದ್ದಾರೆ. ಈ ಭೇಟಿಯು ಎರಡೂ ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಬಲಪಡಿಸುವಲ್ಲಿ ಇಲ್ಲಿನ ಭಾರತೀಯ ಸಮುದಾಯದ ಪ್ರಭಾವವಿದೆ ಎಂದು ಮೋದಿ ಹೇಳಿದ್ದಾರೆ.

ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆದ 51 ನೇ ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ಮೋದಿ ತಮ್ಮ ಮೂರು ರಾಷ್ಟ್ರಗಳ ಭೇಟಿಯ ಕೊನೆಯ ದೇಶವಾದ ಕ್ರೊಯೇಷಿಯಾದ ರಾಜಧಾನಿ ಜಾಗ್ರೆಬ್‌ಗೆ ಆಗಮಿಸಿದರು. ಪ್ರವಾಸದ ಭಾಗವಾಗಿ ಅವರು ಆರಂಭದಲ್ಲಿ ಸೈಪ್ರಸ್‌ಗೆ ಭೇಟಿ ನೀಡಿದ್ದರು. ನಂತರ ಜಿ 7 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಕೆನಡಾಕ್ಕೆ ತೆರಳಿದ್ದರು.
ಕ್ರೊಯೇಷಿಯಾದ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಪ್ರಧಾನಿ ಮೋದಿ ದೇಶದ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಮದ್ಯ ಹಗರಣ ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಆಪ್ತನ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement