2014 ರ ಯುದ್ಧದ ನಂತರದ ಭಾರೀ ವಾಯು ದಾಳಿ : ಗಾಜಾದಲ್ಲಿ 35 ಜನರು, ಇಸ್ರೇಲ್‌ನಲ್ಲಿ 5 ಜನರು ಸಾವು

ಗಾಜಾ / ಜೆರುಸಲೆಮ್: ಇಸ್ರೇಲ್ ಮತ್ತು ಹಮಾಸ್ ನಡುವಿನ ದ್ವೇಷವು ಬುಧವಾರ ಉಲ್ಬಣಗೊಂಡಿದ್ದು, ಗಾಜಾದಲ್ಲಿ ಕನಿಷ್ಠ 35 ಮತ್ತು ಇಸ್ರೇಲಿನಲ್ಲಿ ಐದು ಜನರು ಅತ್ಯಂತ ತೀವ್ರವಾದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಇಸ್ಲಾಮಿಸ್ಟ್ ಗುಂಪು ಮತ್ತು ಇತರ ಪ್ಯಾಲೇಸ್ಟಿನಿಯನ್ ಉಗ್ರರು ಟೆಲ್ ಅವೀವ್ ಮತ್ತು ಬೀರ್‌ಶೆಬಾದಲ್ಲಿ ಅನೇಕ ರಾಕೆಟ್ ಬ್ಯಾರೇಜ್‌ಗಳ ಮೂಲಕ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಬುಧವಾರ ಬೆಳಿಗ್ಗೆ ಗಾಜಾದಲ್ಲಿ ನೂರಾರು ವಾಯುದಾಳಿಗಳನ್ನು ನಡೆಸಿತು.
ಇಸ್ರೇಲಿ ವಾಯುದಾಳಿಯಿಂದ ಪದೇ ಪದೇ ಅಪ್ಪಳಿಸಿದ ನಂತರ ಗಾಜಾದ ಒಂದು ಬಹುಮಹಡಿ ವಸತಿ ಕಟ್ಟಡವು ಕುಸಿದಿದೆ ಮತ್ತು ಇನ್ನೊಂದು ಹಾನಿಗೊಳಗಾಯಿತು ಎಂದು ವರದಿಯಾಗಿದೆ.
ಬುಧವಾರ ಮುಂಜಾನೆ ತನ್ನ ಜೆಟ್‌ಗಳು ಹಲವಾರು ಹಮಾಸ್ ಗುಪ್ತಚರ ಮುಖಂಡರನ್ನು ಗುರಿಯಾಗಿಸಿ ಕೊಂದಿವೆ ಎಂದು ಇಸ್ರೇಲ್ ಹೇಳಿದೆ. ರಾಕೆಟ್ ಉಡಾವಣಾ ತಾಣಗಳು, ಹಮಾಸ್ ಕಚೇರಿಗಳು ಮತ್ತು ಹಮಾಸ್ ನಾಯಕರ ಮನೆಗಳು ಇದರಲ್ಲಿ ಸೇರಿವೆ ಎಂದು ಅದು ಹೇಳಿದೆ.
ಇದು 2014 ರ ಗಾಝಾದಲ್ಲಿ ನಡೆದ ಯುದ್ಧದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಭಾರಿ ದಾಳಿಗಳು ಪರಿಸ್ಥಿತಿಯು ನಿಯಂತ್ರಣ ತಪ್ಪಲು ಕಾರಣವಾಗಬಹುದು ಎಂದು ಅಂತಾರಾಷ್ಟ್ರೀಯವಾಗಿ ಕಳವಳ ವ್ಯಕ್ತವಾಗಿದೆ.
ಮಧ್ಯಪ್ರಾಚ್ಯ ಶಾಂತಿ ರಾಯಭಾರಿ ಟಾರ್ ವೆನ್ನೆಸ್ಲ್ಯಾಂಡ್ ಟ್ವೀಟ್ ಮಾಡಿ “ತಕ್ಷಣ ದಾಳಿಯನ್ನು ನಿಲ್ಲಿಸಿ, ನಾವು ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುತ್ತಿದ್ದೇವೆ. ಎಲ್ಲಾ ಕಡೆಯ ನಾಯಕರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಇಸ್ರೇಲಿ ವಾಯು ದಾಳಿಗಳಿಂದ ಗಾಜಾದಲ್ಲಿ ಬುಧವಾರ ಮುಂಜಾನೆ ಕೆಲವೇ ನಿಮಿಷಗಳಲ್ಲಿ ಕನಿಷ್ಠ 30 ಸ್ಫೋಟಗಳು ಕೇಳಿಬಂದವು.
ಟೆಲ್ ಅವೀವ್ ಬಳಿಯ ಮಿಶ್ರ ಅರಬ್-ಯಹೂದಿ ಪಟ್ಟಣವಾದ ಲಾಡ್‌ ನಲ್ಲಿ, ಆ ಪ್ರದೇಶದಲ್ಲಿ ರಾಕೆಟ್, ವಾಹನವೊಂದಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಗಾಜಾ ನಗರದಲ್ಲಿ ಗೋಪುರ ಕಟ್ಟಡಗಳ ಮೇಲೆ ಬಾಂಬ್ ಸ್ಫೋಟಕ್ಕೆ ಪ್ರತಿಕ್ರಿಯೆಯಾಗಿ ಬೀರ್‌ಶೆಬಾ ಮತ್ತು ಟೆಲ್ ಅವೀವ್ ಕಡೆಗೆ 210 ರಾಕೆಟ್‌ಗಳನ್ನು ಹಾರಿಸಿದೆ ಎಂದು ಹಮಾಸ್‌ನ ಸಶಸ್ತ್ರ ವಿಭಾಗ ಹೇಳಿದೆ. ಗಾಜಾದೊಳಗೆ ಇಳಿಯುವ ರಾಕೆಟ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇಸ್ರೇಲಿಗೆ ಸಂಬಂಧಿಸಿದಂತೆ, ಉಗ್ರಗಾಮಿಗಳು ಅದರ ವಾಣಿಜ್ಯ ರಾಜಧಾನಿಯಾದ ಟೆಲ್ ಅವೀವ್ ಗುರಿಯಾಗಿಸಿಕೊಂಡು ಇಸ್ರೇಲ್ ಮತ್ತು ಅಮೆರಿಕದಿಂದ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲ್ಪಟ್ಟ ಇಸ್ಲಾಮಿಸ್ಟ್ ಹಮಾಸ್ ಗುಂಪಿನೊಂದಿಗಿನ ಮುಖಾಮುಖಿಯಲ್ಲಿ ಹೊಸ ಸವಾಲನ್ನು ಒಡ್ಡಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement