“ನಿಮ್ಮ ಬೌಲರ್ ಯಾರು?”: ಕಾಶ್ಮೀರದ ಗುಲ್ಮಾರ್ಗ ರಸ್ತೆಯಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ | ವೀಕ್ಷಿಸಿ

ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರಸ್ತುತ ಕಾಶ್ಮೀರ ಮೊದಲ ಪ್ರವಾಸದಲ್ಲಿದ್ದು, ಅವರು ಅಲ್ಲಿನ ಗುಲ್ಮಾರ್ಗ್‌ನಲ್ಲಿ ಸ್ಥಳೀಯರೊಂದಿಗೆ ಗಲ್ಲಿ ಕ್ರಿಕೆಟ್ ಆಟದಲ್ಲಿ ತೊಡಗಿರುವ ವೀಡಿಯೊ ವೈರಲ್‌ ಆಗಿದೆ.
ಗುಲ್ಮಾರ್ಗ್‌ದ ಸುಂದರವಾದ ಪರಿಸರದ ನಡುವೆ ಸಚಿನ್ ಒಂದು ಓವರ್ ಕ್ರಿಕೆಟ್‌ ಆಡಿದರು. ಸಾಮಾಜಿಕ ಮಾಧ್ಯಮದಲ್ಲಿ ತೆಂಡೂಲ್ಕರ್ ಅವರು ಸ್ಥಳೀಯರೊಂದಿಗೆ ಪಾಲ್ಗೊಂಡ ಮತ್ತು ಗಲ್ಲಿ ಕ್ರಿಕೆಟ್ ಆಟವನ್ನು ಆನಂದಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಸಚಿನ್ ಸ್ಥಳೀಯರೊಂದಿಗೆ ಕೆಲವು ಚಿತ್ರಗಳನ್ನು ಸಹ ಕ್ಲಿಕ್ ಮಾಡಿದ್ದಾರೆ. ತನ್ನ ಬ್ಯಾಟ್ ಅನ್ನು ತಲೆಕೆಳಗಾಗಿ ಹಿಡಿದಿದು ಕೊನೆಯ ಎಸೆತದಲ್ಲಿ ತನ್ನನ್ನು ಔಟ್‌ ಮಾಡಲು ಬೌಲರ್‌ಗೆ ಸವಾಲು ಹಾಕಿದರು. ಆದರೆ, ಕೊನೆಯ ಚೆಂಡನ್ನು ಬ್ಯಾಟ್‌ನ ಹ್ಯಾಂಡಲ್‌ನಿಂದ ಹೊಡೆದಿದ್ದು, ಸಚಿನ್ ಅವರನ್ನು ಔಟ್ ಮಾಡಲು ಬೌಲರ್ ವಿಫಲರಾದರು.

“ಕ್ರಿಕೆಟ್ ಮತ್ತು ಕಾಶ್ಮೀರ: ಸ್ವರ್ಗದಲ್ಲಿ ಪಂದ್ಯ!, ಎಂದು ಸಚಿನ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಬುಧವಾರ, ತೆಂಡೂಲ್ಕರ್ ಅವರು ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆಯ ಕೊನೆಯ ಬಿಂದುವಾದ ಅಮನ್ ಸೇತುವೆಗೆ ಭೇಟಿ ನೀಡಿದರು. ಸಚಿನ್ ಅವರು ಅಮನ್ ಸೇತು ಬಳಿಯ ಕಮಾನ್ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿದರು, ಅವರು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಟಲ್ ಮಾಸ್ಟರ್ ಅಲ್ಲಿ ಸ್ಥಳೀಯರ ಗುಂಪಿನೊಂದಿಗೆ ರಸ್ತೆ ಬದಿ ಕ್ರಿಕೆಟ್ ಆಡಿದರು. ಹುಡುಗರು ತೆಂಡೂಲ್ಕರ್ ಅವರ ಕೈಳಕವನ್ನು ಮತ್ತು ಅವರು ಹೇಗೆ ಹೊಡೆತಗಳನ್ನು ಆಡುತ್ತಾರೆ ಎಂಬುದನ್ನು ಕುತೂಹಲದಿಂದ ವೀಕ್ಷಿಸಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಕಳೆದ ಕೆಲವು ದಿನಗಳಿಂದ ಸಚಿನ್ ಕಾಶ್ಮೀರಕ್ಕೆ ಭೇಟಿ ಪ್ರವಾಸದಲ್ಲಿದ್ದಾರೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚುರ್ಸೋದಲ್ಲಿ ಕ್ರಿಕೆಟ್ ಬ್ಯಾಟ್ ತಯಾರಿಕಾ ಘಟಕಕ್ಕೆ ಅವರು ಭೇಟಿ ನೀಡಿದರು. ಅವರು ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣಕ್ಕೂ ಭೇಟಿ ನೀಡಿದರು.
50 ವರ್ಷ ವಯಸ್ಸಿನ ತೆಂಡೂಲ್ಕರ್‌ ಹೋದಲ್ಲೆಲ್ಲಾ ಅವರನ್ನು ‘ಸಚಿನ್ ಸಚಿನ್’ ಎಂದು ಸ್ವಾಗತಿಸುವ ಬೃಹತ್ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸಚಿನ್ ವಿಮಾನದಲ್ಲಿದ್ದಾಗ ಅವರ ಸಹ ಪ್ರಯಾಣಿಕರು ಭೇಟಿ ಸಮಯದಲ್ಲಿ ಚಪ್ಪಾಳೆ ತಟ್ಟಿ ಅವರ ಹೆಸರನ್ನು ಕೂಗುತ್ತ ಅವರನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ಇದು ನಿವೃತ್ತಿಯ ನಂತರವೂ ಸಚಿನ್‌ ಅವರ ಶಾಶ್ವತ ಜನಪ್ರಿಯತೆಗೆ ಪುರಾವೆಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement