ಅಮೆರಿಕದಲ್ಲಿ ಜನ್ಮದಿನಾಚರಣೆ ಸಂಭ್ರಮಾಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿ ಸಾವು

ಭಾರತದ 23 ವರ್ಷದ ವಿದ್ಯಾರ್ಥಿಯೊಬ್ಬ ಅಮೆರಿಕದಲ್ಲಿ ತನ್ನ ಜನ್ಮದಿನ ಆಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ನವೆಂಬರ್ 13 ರಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಆರ್ಯನ್ ರೆಡ್ಡಿ ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಮನೆಯಲ್ಲಿ ಸ್ನೇಹಿತರೊಂದಿಗೆ ತಮ್ಮ ಜನ್ಮದಿನ ಸಂಬ್ರಮಾಚಾರಣೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಜನ್ಮದಿನದ ಆಚರಣೆಯ ಸಮಯದಲ್ಲಿ, ಆರ್ಯನ್‌ ರೆಡ್ಡಿ ಅದನ್ನು ಸ್ವಚ್ಛಗೊಳಿಸಲು ಹೊಸದಾಗಿ ಖರೀದಿಸಿದ್ದ ಬಂದೂಕನ್ನು ಕೈಎಗತ್ತಿಕೊಂಡಿದ್ದರು. ಆದರೆ, ಈ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು ಅವರ ಎದೆಗೆ ತಗುಲಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡೇಟಿನ ಶಬ್ದ ಕೇಳಿದ ನಂತರ, ಮತ್ತೊಂದು ಕೋಣೆಯಲ್ಲಿ ಕುಳಿತಿದ್ದ ರೆಡ್ಡಿ ಸ್ನೇಹಿತರು. ಅವರ ಕೋಣೆಗೆ ಧಾವಿಸಿದರು. ಆಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಆರ್ಯನ್‌ ರೆಡ್ಡಿ ಅವರು ಅಟ್ಲಾಂಟಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು, ಮಾಸ್ಟರ್ ಆಫ್ ಸೈನ್ಸ್ ಓದುತ್ತಿದ್ದರು. ಅವರು ತೆಲಂಗಾಣದ ಭುವನಗಿರಿ ಜಿಲ್ಲೆಯ ಪೆದ್ದರಾವ್ ಪಲ್ಲಿ ಗ್ರಾಮದವರು. ಆದರೆ ಅವರ ಕುಟುಂಬ ಪ್ರಸ್ತುತ ಉಪ್ಪಲ್ ಜಿಲ್ಲೆಯಲ್ಲಿ ನೆಲೆಸಿದೆ. ಅವರ ಮೃತದೇಹವನ್ನು ಶುಕ್ರವಾರ ರಾತ್ರಿ ಅವರ ಸ್ವಗ್ರಾಮಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement