ಆರ್‌ ಎಸ್‌ ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ : ತಲೆಮರೆಸಿಕೊಂಡಿದ್ದ ಪ್ರಮುಖ ಪಿಎಫ್‌ಐ ಸದಸ್ಯನ ಬಂಧಿಸಿದ ಎನ್‌ಐಎ

ನವದೆಹಲಿ: 2022ರಲ್ಲಿ ಕೇರಳದಲ್ಲಿ ನಡೆದ ಆರ್‌ಎಸ್‌ಎಸ್‌ ಮುಖಂಡ ಶ್ರೀನಿವಾಸನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಯ ತಲೆಮರೆಸಿಕೊಂಡಿದ್ದ ಪ್ರಮುಖ ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಬಂಧಿಸಿದೆ.
ಆರೋಪಿಯನ್ನು ಶಫೀಖ್ ಎಂದು ಗುರುತಿಸಲಾಗಿದ್ದು, 2022 ರ ಏಪ್ರಿಲ್ 16 ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ. ಮಲಪ್ಪುರಂ ನಿವಾಸಿಯನ್ನು ಕೊಲ್ಲಂ ಜಿಲ್ಲೆಗೆ ಎನ್‌ಐಎಯ ಅಬ್ಸ್ಕಂಡರ್ ಟ್ರ್ಯಾಕಿಂಗ್ ತಂಡವು ಪತ್ತೆಹಚ್ಚಿದೆ, ನಂತರ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಆತ ಶ್ರೀನಿವಾಸನ್ ಹತ್ಯೆಗೆ ಸಂಚು ರೂಪಿಸಿದ ಮತ್ತು ನಡೆಸಿದ ದಾಳಿಯ ಸ್ಕ್ವಾಡ್‌ಗಳ ಭಾಗವಾಗಿದ್ದ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟು 71 ಜನರನ್ನು ಈ ಭೀಕರ ಪಿತೂರಿಯ ಭಾಗವೆಂದು ಗುರುತಿಸಲಾಗಿದೆ
ಎನ್‌ಐಎ ಪ್ರಕರಣದ ಸಂಬಂಧ ಈಗಾಗಲೇ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ ಮತ್ತು ಪಿತೂರಿಯಲ್ಲಿ ಭಾಗಿಯಾಗಿರುವ 71 ಜನರನ್ನು ಗುರುತಿಸಿದೆ.

ಆರೋಪಿಗಳಲ್ಲಿ ಒಬ್ಬನನ್ನು ಅಬ್ದುಲ್ ನಾಸರ್ ಎಂದು ಗುರುತಿಸಲಾಗಿದ್ದು, ಜನವರಿ 2, 2023 ರಂದು ಸಾವಿಗೀಡಾಗಿದ್ದಾನೆ. ಇತರ ಇಬ್ಬರು, ಸಾಹೀರ್ ಕೆ.ವಿ. ಮತ್ತು ಜಾಫರ್ ಭೀಮಂತವಿಡ, ಇಬ್ಬರೂ ತಲೆಮರೆಸಿಕೊಂಡಿದ್ದರು, ಅವರನ್ನು ಕ್ರಮವಾಗಿ ಅಕ್ಟೋಬರ್ 19, 2023 ಮತ್ತು ಈ ವರ್ಷ ಫೆಬ್ರವರಿ 12 ರಂದು ಬಂಧಿಸಲಾಯಿತು.
ಪಿಎಫ್‌ಐ (PFI) ನಾಯಕತ್ವದ ನಿರ್ದೇಶನದ ಮೇರೆಗೆ, ಪಿತೂರಿಯನ್ನು ಕಾರ್ಯಗತಗೊಳಿಸಲು ನಿಷೇಧಿತ ಸಂಘಟನೆಯ ಇತರ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಂಚು ರೂಪಿಸಿದ್ದ ಅಶ್ರಫ್ ಕೆ.ಪಿ.ಗೆ ಶಫೀಖ್ ಆಶ್ರಯ ನೀಡಿದ್ದ ಎಂದು ಎನ್‌ಐಎ (NIA) ತನಿಖೆಗಳು ಬಹಿರಂಗಪಡಿಸಿವೆ.
ಹಲ್ಲೆಗೊಳಗಾದ ಶ್ರೀನಿವಾಸನ್ ಅವರ ತಲೆಯ ಮೇಲೆ ಮೂರು ಗಾಯಗಳು ಸೇರಿದಂತೆ 10 ಆಳವಾದ ಗಾಯಗಳಿತ್ತು ಎಂದು ವಿಚಾರಣೆ ವರದಿಯಲ್ಲಿ ತಿಳಿಸಲಾಗಿದೆ.
ಪಾಲಕ್ಕಾಡ್‌ನ ಎಲಪುಲ್ಲಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತ ಸುಬೈರ್ ಎಂಬಾತನ ಹತ್ಯೆಗೆ ಪ್ರತೀಕಾರವಾಗಿ ಶ್ರೀನಿವಾಸನ್ ಹತ್ಯೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement