ಸ್ನೇಹಿತರ ಜೊತೆ ಪಾರ್ಟಿ: ಪೊಲೀಸರು ಬಂದಿದ್ದಕ್ಕೆ ಹೆದರಿ ತಪ್ಪಿಸಿಕೊಳ್ಳುವಾಗ ಬಾಲ್ಕನಿಯಿಂದ ಬಿದ್ದು ಯುವತಿಗೆ ಗಾಯ

ಬೆಂಗಳೂರು: ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಹೋಟೆಲ್‌ವೊಂದರ ಬಾಲ್ಕನಿಯಿಂದ ಕೆಳಗೆ ಇಳಿಯಲು ಡ್ರೈನ್‌ಪೈಪ್ (ಕೊಳಾಯಿ) ಬಳಸಲು ಯತ್ನಿಸಿದ 21 ವರ್ಷದ ಯುವತಿಯೊಬ್ಬಳು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ಪಾರ್ಟಿಯ ಗದ್ದಲದ ಕುರಿತು ದೂರು ಬಂದ ನಂತರ ಪೊಲೀಸರು ಹೋಟೆಲ್‌ಗೆ ಭೇಟಿ ನೀಡಿದ್ದರಿಂದ ಆತಂಕಗೊಂಡ ಯುವತಿ ತಪ್ಪಿಸಿಕೊಳ್ಳಲು ಈ ಪ್ರಯತ್ನ ಮಾಡಿದ್ದಳು ಎನ್ನಲಾಗಿದೆ. ಭಾನುವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಯುವತಿಯ ತಂದೆ ಆಂಟೋನಿ ಅವರು ನೀಡಿರುವ ದೂರಿನ ಪ್ರಕಾರ, ಅವರ ಮಗಳು ಏಳು ಸ್ನೇಹಿತರೊಂದಿಗೆ ಲಾಡ್ಜ್‌ಗೆ ಪಾರ್ಟಿಗಾಗಿ ಹೋಗಿದ್ದರು.
ಈ ಗುಂಪು ಮೂರು ಕೊಠಡಿಗಳನ್ನು ಕಾಯ್ದಿರಿಸಿ, ಮುಂಜಾನೆ 1 ಗಂಟೆಯಿಂದ ಸುಮಾರು 5 ಗಂಟೆಯವರೆಗೆ ಪಾರ್ಟಿ ಮಾಡುತ್ತಿತ್ತು. ಪಾರ್ಟಿಯ ಸಮಯದಲ್ಲಿ ಶಬ್ದ ಮತ್ತು ಗಲಾಟೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಅವರು 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರು.

ಸ್ಥಳೀಯರ ದೂರಿನ ಮೇರೆಗೆ ಲಾಡ್ಜ್‌ಗೆ ಬಂದ ಪೊಲೀಸರು, ಗುಂಪನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅವರ ಕೂಗಾಟದಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಎಚ್ಚರಿಸಿದರು.
ಪೊಲೀಸರ ಭೇಟಿಯ ನಂತರ ಯುವತಿ ಆತಂಕಗೊಂಡು, ನಾಲ್ಕನೇ ಮಹಡಿಯ ಕೋಣೆಯ ಬಾಲ್ಕನಿಯಿಂದ ಡ್ರೈನ್‌ಪೈಪ್ ಹಿಡಿದು ಕೆಳಗೆ ಇಳಿಯಲು ಪ್ರಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.
ಈ ವೇಳೆ ಆಕೆ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ. ಪರಿಣಾಮವಾಗಿ ಯುವತಿ ಗಂಭೀರ ಗಾಯಗೊಂಡಿದ್ದಾಳೆ. ತಕ್ಷಣವೇ ಆಕೆಯ ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ.
ಯುವತಿಯ ತಂದೆ ಆಂಟೋನಿ ಅವರ ದೂರಿನ ಆಧಾರದ ಮೇಲೆ, ಪೊಲೀಸರು ಲಾಡ್ಜ್‌ನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement