ತನ್ನ ಸಹೋದರನ ಜೊತೆ ಸಂಬಂಧ ಕಡಿದುಕೊಂಡ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ…! ಕಾರಣವೇನೆಂದರೆ…

ಕೋಲ್ಕತ್ತಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೌರಾ ಲೋಕಸಭಾ ಕ್ಷೇತ್ರಕ್ಕೆ ಪ್ರಸೂನ್ ಬ್ಯಾನರ್ಜಿ ಅವರಿಗೆ ಪುನಃ ಟಿಕೆಟ್‌ ನೀಡಿರುವ ತೃಣಮೂಲ ಕಾಂಗ್ರೆಸ್‌ನ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ತಮ್ಮ ಸಹೋದರ ಬಾಬುನ್ ಬ್ಯಾನರ್ಜಿ ಅವರ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
“ನನ್ನ ಕುಟುಂಬ ಮತ್ತು ನಾನು ಬಬುನ್ ಜೊತೆಗಿನ ಎಲ್ಲಾ ಸಂಬಂಧವನ್ನು ತ್ಯಜಿಸುತ್ತೇವೆ…” ಎಂದು ಅವರು ತಿಳಿಸಿದ್ದಾರೆ. ಪ್ರತಿ ಚುನಾವಣೆಗೂ ಮುನ್ನ ಬಾಬುನ್ ಬ್ಯಾನರ್ಜಿ ಸಮಸ್ಯೆ ಸೃಷ್ಟಿಸುತ್ತಾರೆ. ನಾನು ದುರಾಸೆಯವರನ್ನು ಇಷ್ಟಪಡುವುದಿಲ್ಲ ಮತ್ತು ವಂಶ ರಾಜಕಾರಣದಲ್ಲಿ ನನಗೆ ನಂಬಿಕೆ ಇಲ್ಲ, ಹಾಗಾಗಿ ನಾನು ಆತನಿಗೆ ಟಿಕೆಟ್‌ ನೀಡಿಲ್ಲ. ಮತ್ತು ಆತನೊಂದಿಗಿನ ಎಲ್ಲ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
ಮಮತಾ ಬ್ಯಾನರ್ಜಿ ಕುಟುಂಬಕ್ಕೆ ಸಂಬಂಧ ಇಲ್ಲದ ಪ್ರಸೂನ್ ಬ್ಯಾನರ್ಜಿ ಮೂರು ಬಾರಿ ಹೌರಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. 2009ರಲ್ಲಿ ಅಂಬಿಕಾ ಬ್ಯಾನರ್ಜಿ ಕಮ್ಯುನಿಸ್ಟ್ ಪಕ್ಷದಿಂದ ಗೆದ್ದ ನಂತರದಲ್ಲಿ ಈವರೆಗೂ ತೃಣಮೂಲ ಕಾಂಗ್ರೆಸ್‌ ನಿಂದ ಪ್ರಸೂನ್‌ ಬ್ಯಾನರ್ಜಿ ಈ ಸ್ಥಾನವನ್ನು ಗೆಲ್ಲುತ್ತ ಬಂದಿದೆ.

ಬುಧವಾರ, ಪ್ರಸ್ತುತ ನವದೆಹಲಿಯಲ್ಲಿರುವ ಬಾಬುನ್ ಅವರು ಹೌರಾ ಲೋಕಸಭಾ ಸ್ಥಾನಕ್ಕೆ ಪ್ರಸೂನ್ ಬ್ಯಾನರ್ಜಿ ಅವರಿಗೆ ಪುನಃ ಟಿಕೆಟ್‌ ನೀಡಿದ್ದಕ್ಕೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. “ಹೌರಾ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆ ಮಾಡಿದ್ದು ನನಗೆ ಸಂತೋಷ ತಂದಿಲ್ಲ. ಪ್ರಸೂನ್ ಬ್ಯಾನರ್ಜಿ ಸರಿಯಾದ ಆಯ್ಕೆಯಲ್ಲ. ಅನೇಕ ಸಮರ್ಥ ಅಭ್ಯರ್ಥಿಗಳನ್ನು ಕಡೆಗಣಿಸಲಾಯಿತು ಎಂದು ಬಾಬುನ್ ಅವರು ಟಿಎಂಸಿ ಪ್ರಮುಖರನ್ನು ಟೀಕಿಸಿದರು. “ಪ್ರಸೂನ್ ನನಗೆ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಮಮತಾ ಬ್ಯಾನರ್ಜಿಯವರ ಕಿರಿಯ ಸಹೋದರರಲ್ಲಿ ಒಬ್ಬರಾದ ಬಾಬುನ್ ಅವರು ತಾವು ಹೌರಾದ ನೋಂದಾಯಿತ ಮತದಾರರು ಎಂದು ಹೇಳಿದರು. “ದೀದಿ (ಮಮತಾ ಬ್ಯಾನರ್ಜಿ) ನನ್ನ ಮಾತನ್ನು ಒಪ್ಪುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ಅಗತ್ಯವಿದ್ದರೆ ನಾನು ಹೌರಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಮಮತಾ ಅವರ ಕಿರಿಯ ಸಹೋದರ ಬಾಬೂನ್‌ ಬ್ಯಾನರ್ಜಿ ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹಗಳ ನಡುವೆಯೂ ಮಮತಾ ಅವರು ಆತನೊಂದಿಗೆ ಎಲ್ಲ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಆದಾಗ್ಯೂ, ಬಿಜೆಪಿಗೆ ಸೇರುವ ವದಂತಿಗಳನ್ನು ತಳ್ಳಿಹಾಕಿದ ಬಾಬುನ್, ಲೋಕಸಭೆ ಚುನಾವಣೆಯಲ್ಲಿ ಹೌರಾ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಮ್ಮ ಕಿರಿಯ ಸಹೋದರನ ಮೇಲೆ ಮಮತಾ ಬ್ಯಾನರ್ಜಿ ಇದು ಸಾರ್ವಜನಿಕವಾಗಿ ತೋರ್ಪಡಿಸಿದ ಮೊದಲ ಭಿನ್ನಾಭಿಪ್ರಾಯವಲ್ಲ. ಮಮತಾ ಅವರು ಈ ಹಿಂದೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷತಾ ನಿಯಮಗಳನ್ನು ಕಡೆಗಣಿಸಿದ್ದಕ್ಕಾಗಿ ಬಾಬುನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಜನವರಿ 2022 ರಲ್ಲಿ, ಬಂಗಾಳವು 14,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡುವುದರೊಂದಿಗೆ ಕೋವಿಡ್‌ ಸೋಂಕಿನ ಉಲ್ಬಣವನ್ನು ಎದುರಿಸುತ್ತಿದ್ದಾಗ ಮಮತಾ ತನ್ನ ಸಹೋದರನ ʼಮನೆಯಲ್ಲಿ ಕೋವಿಡ್ ಪ್ರಕರಣಗಳಿದ್ದರೂ ಸುತ್ತಾಡಿದ್ದಕ್ಕಾಗಿ” ಸಾರ್ವಜನಿಕವಾಗಿ ಖಂಡಿಸಿದ್ದರು.
ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಬ್ಲಾಕ್‌ನ ಸದಸ್ಯರಾಗಿರುವ ತೃಣಮೂಲ ಕಾಂಗ್ರೆಸ್ ಇತ್ತೀಚೆಗೆ ರಾಜ್ಯದ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ವಿವಾದಾತ್ಮಕವಾಗಿ ಸಂಸತ್ತಿನಿಂದ ಅಮಾನತುಗೊಂಡಿರುವ ಮಹುವಾ ಮೊಯಿತ್ರಾ ಅವರಿಗೆ ಕೃಷ್ಣನಗರದಿಂದ ಸ್ಪರ್ದಿಸಲು ಮತ್ತೆ ಟಿಕೆಟ್‌ ನೀಡಲಾಗಿದೆ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ಡೈಮಂಡ್ ಹಾರ್ಬರ್ ಸ್ಥಾನದಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement