ಕರ್ನಾಟಕ ಕಾಂಗ್ರೆಸ್ಸಿನ ‘ಕೆಪಿಸಿಸಿ ಕನೆಕ್ಟ್ ಸೆಂಟರ್‌ʼಗೆ ಪದಾಧಿಕಾರಿಗಳ ನೇಮಕ

ಬೆಂಗಳೂರು: ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಮತ್ತು ಬೂತ್ ಮಟ್ಟದವರೆಗೂ ನಿರಂತರ ಸಂಪರ್ಕ ಜಾಲ ರೂಪಿಸಲು ‘ಕೆಪಿಸಿಸಿ ಕನೆಕ್ಟ್ ಸೆಂಟರ್’ ಸ್ಥಾಪಿಸಲಾಗಿದ್ದು, ಈ ಕೇಂದ್ರದ ನಿರ್ವಹಣೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಈ ಹಿಂದೆ ‘ವಾರ್‌ ರೂಂ’ ಎಂದು ಕರೆಯಲಾಗುತ್ತಿದ್ದ ವಿಭಾಗವನ್ನು ಈಗ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ‘ಕನೆಕ್ಟ್ ಸೆಂಟರ್’ ಎಂದು ಮರುನಾಮಕರಣ ಮಾಡಿದೆ. ದೇಶಾದ್ಯಂತ ಪಕ್ಷವನ್ನು ಬಲಪಡಿಸಲು ಆರಂಭಿಸಿರುವ ‘ಕನೆಕ್ಟ್  ಸೆಂಟರ್’ ಮಾದರಿಯಲ್ಲೇ ಕರ್ನಾಟಕದಲ್ಲೂ ಈ ವಿಶೇಷ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬೂತ್ ಮಟ್ಟದವರೆಗಿನ ಪಕ್ಷದ ಎಲ್ಲ ನಾಯಕರ ಜೊತೆ ಸಮನ್ವಯ ಕಾಯ್ದುಕೊಳ್ಳುವುದು, ನಿರಂತರ ಸಂವಹನ ನಡೆಸುವುದು ಹಾಗೂ ಅಗತ್ಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮುನ್ನಡೆಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರ ಅನುಮೋದನೆಯೊಂದಿಗೆ ಈ ನೇಮಕ ಮಾಡಲಾಗಿದ್ದು, ನೂತನ ತಂಡವು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದೆ.
ʼಕೆಪಿಸಿಸಿ ಕನೆಕ್ಟ್ ಸೆಂಟರ್’ ಪದಾಧಿಕಾರಿಗಳು
ಅಧ್ಯಕ್ಷರು: ಸಿ. ಬಿ. ಶಶಿಧರ್ (TUDA), ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ (ತಿಪಟೂರು, ತುಮಕೂರು ಜಿಲ್ಲೆ)
ಸಹ-ಅಧ್ಯಕ್ಷರು: ಕಿರಣಜಿತ್‌ ಎಸ್. ಎಂ. (ಡಾಲರ್ಸ್ ಕಾಲೋನಿ, ಬೆಂಗಳೂರು)
ಸಂಚಾಲಕರು:  ವಸಂತ ಕವಿತಾ (ಕೆ.ಸಿ.ರೆಡ್ಡಿ) (ಸದಾಶಿವನಗರ, ಬೆಂಗಳೂರು)
ಸಂಚಾಲಕರು: ಧ್ರುವ ಜತ್ತಿ (ಸದಾಶಿವನಗರ, ಬೆಂಗಳೂರು ಉತ್ತರ)
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement