16 ವರ್ಷದ ಅಪ್ರಾಪ್ತ ಹುಡುಗನ ಮದುವೆಯಾದ 25 ವರ್ಷದ ಶಿಕ್ಷಕಿ…!

ಉತ್ತರಾಖಂಡದ  ಡೆಹ್ರಾಡೂನ್‌ನ 25 ವರ್ಷದ ಶಿಕ್ಷಕಿಯೊಬ್ಬರು 16 ವರ್ಷದ ಅಪ್ರಾಪ್ತ ಹುಡುಗನನ್ನು ಮದುವೆಯಾದ ಘಟನೆ ವರದಿಯಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಕಿ ಘಾಜಿಯಾಬಾದ್‌ನಲ್ಲಿ ಅಪ್ರಾಪ್ತ ಹುಡುಗನನ್ನು ವಿವಾಹವಾಗಿದ್ದಾಳೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆದ ನಂತರ ಅದು ಪ್ರೇಮಕ್ಕೆ ತಿರುಗಿ ಡೆಹ್ರಾಡೂನ್‌ನ 25 ವರ್ಷದ ಶಿಕ್ಷಕಿ ಕಾರಿನಲ್ಲಿ ಬಂದು ಮೀರತ್‌ನ 16 ವರ್ಷದ ಅಪ್ರಾಪ್ತ ಹುಡುಗನನ್ನು ಕರೆದೊಯ್ದು ಘಾಜಿಯಾಬಾದ್‌ನಲ್ಲಿ ಮದುವೆಯಾಗಿದ್ದಾಳೆ ಎಂದು ಹುಡುಗನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಅಪ್ರಾಪ್ತ ಹುಡುಗನನ್ನು ಪತ್ತೆ ಹಚ್ಚಿ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಎಡಿಜಿ ತನಿಖೆಗೆ ಆದೇಶಿಸಿದ್ದಾರೆ. ಈಗ ಹುಡುಗನ ವಯಸ್ಸಿನ ಪ್ರಮಾಣಪತ್ರವು ಶಿಕ್ಷಕಿ ಮತ್ತು ಆತನ ಮದುವೆಯ ಭವಿಷ್ಯವನ್ನು ನಿರ್ಧರಿಸುತ್ತದೆ.

ಮೀರತ್‌  ಪೊಲೀಸ್ ಠಾಣೆಯ ಲಿಸಾಡಿ ಗೇಟ್ ಪ್ರದೇಶದಲ್ಲಿ ವಾಸಿಸುವ ಕುಟುಂಬ ಸದಸ್ಯರು ತಮ್ಮ ಅಪ್ರಾಪ್ತ ಮಗ ಡೆಹ್ರಾಡೂನ್‌ನ ಹುಡುಗಿಯೊಂದಿಗೆ ಕೆಲವು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಆಕೆ ಡೆಹ್ರಾಡೂನ್‌ನ ಶಾಲೆಯೊಂದರಲ್ಲಿ ಶಿಕ್ಷಕಿ. ಇಬ್ಬರೂ ಮೊಬೈಲ್ ನಂಬರ್ ಹಂಚಿಕೊಂಡು ಮಾತನಾಡುತ್ತಿದ್ದರು. ಅವರ ಸಂಭಾಷಣೆ ಪ್ರೀತಿಗೆ ತಿರುಗಿತು. ಸುಮಾರು 10 ದಿನಗಳ ಹಿಂದೆ ಶಿಕ್ಷಕಿ ಕಾರಿನಲ್ಲಿ ಮೀರತ್‌ಗೆ ಬಂದು ಬಾಲಕನನ್ನು ಕರೆದುಕೊಂಡು ಹೋಗಿದ್ದಳು. ನಂತರ ಅವರು  ಅಲ್ಲಿ ರಜಿಸ್ಟರ್‌ ಮದುವೆಯಾದರು ಎಂದು ಕುಟುಂಬಸ್ಥರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಗಾಜಿಯಾಬಾದ್‌ನಲ್ಲಿ ಇಬ್ಬರ ಮದುವೆಯ ವಿಚಾರ ತಿಳಿದ ಕುಟುಂಬಸ್ಥರು ಮದುವೆ ನೋಂದಣಿ ರದ್ದುಪಡಿಸಲು ಯತ್ನಿಸಿದರಾದರೂ ಕೈಗೂಡಲಿಲ್ಲ. ನೋಂದಣಿ ರದ್ದುಗೊಳಿಸಲು, ಹುಡುಗನ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಕೇಳಲಾಯಿತು. ಕುಟುಂಬದವರು ಶಾಲೆಗೆ ಹೋಗಿ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕೇಳಿದಾಗ ಪೊಲೀಸರ ಸೂಚನೆಯಿಲ್ಲದೆ ಟಿಸಿ ಮತ್ತು ಇತರ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಶಾಲೆಯ ಆಡಳಿತವು ಹೇಳಿತು. ನಂತರ ಕುಟುಂಬಸ್ಥರು ಮೀರತ್‌ ಎಡಿಜಿಗೆ ದೂರು ನೀಡಿದರು.
ಎಡಿಜಿ ಧ್ರುವಕಾಂತ ಠಾಕೂರ್ ಅವರು ಲಿಸಾಡಿ ಗೇಟ್ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದಾದ ಬಳಿಕ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement