‘ಈಗ ಅನುಮತಿ ನೀಡಲು ಸಾಧ್ಯವಿಲ್ಲ: ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸುವ ರೈತರ ಮನವಿ ತಿರಸ್ಕರಿಸಿದ ದೆಹಲಿ ಪೊಲೀಸರು

ನವದೆಹಲಿ: ಪ್ರತಿಭಟನಾ ನಿರತ ರೈತರಿಗೆ ನಾಳೆಯಿಂದ (1ಜುಲೈ 19) ಮಾನ್ಸೂನ್ ಅಧಿವೇಶನದ ಸಂದರ್ಭದಲ್ಲಿ ಮೂರು ಕೃಷಿ ಕಾನೂನು ವಿರೋಧಿಸಿ ಸಂಸತ್ತಿನ ಹೊರಗೆ ಪ್ರದರ್ಶನ ನಡೆಸಲು ರೈತರಿಗೆ ದೆಹಲಿ ಅನುಮತಿ ನಿರಾಕರಿಸಿದ್ದಾರೆ.
ರೈತರ ನಿಯೋಗ ಇಂದು (ಭಾನುವಾರ) ದೆಹಲಿ ಪೊಲೀಸರನ್ನು ಭೇಟಿಯಾಗಿ ಪ್ರತಿಭಟನೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳನ್ನು ತಿಳಿಸಿದೆ. ರೈತ ಸಂಘಗಳು ನೀಡುವ ಪಾಸ್‌ಗಳೊಂದಿಗೆ ಸಂಸತ್ತಿಗೆ ಹತ್ತಿರದ ಹಂತದಲ್ಲಿ ಆಂದೋಲನ ನಡೆಸಲು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಅವರ ಮನವಿಗೆ ಪೊಲೀಸರು ತಮ್ಮ ಪ್ರತಿಭಟನಾ ಯೋಜನೆಯನ್ನು ಸಂಸತ್ತಿನ ಬಳಿ ಮರುಪರಿಶೀಲಿಸುವಂತೆ ಸಲಹೆ ನೀಡಿದರು ಮತ್ತು ಅವರಿಗೆ ಅನುಮತಿ ನಿರಾಕರಿಸಿದರು.
ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಏಳು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಜಾಗರೂಕತೆ ಮತ್ತು ಅಗತ್ಯವಿದ್ದರೆ ಅವುಗಳನ್ನು ಮುಚ್ಚುವಂತೆ ಪೊಲೀಸರು ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಡಿಎಂಆರ್‌ ಸಿ) ಪತ್ರ ಬರೆದಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಮತ್ತು ಎಂಎಸ್‌ಪಿಗೆ ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ರೈತ ಸಂಘಗಳು ಜುಲೈ 22 ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ನಿಗದಿತ ಅಂತ್ಯದವರೆಗೆ ಪ್ರತಿಭಟನೆಗಳನ್ನು ನಡೆಸಲು ಯೋಜಿಸುತ್ತಿವೆ.
ಇದು ಶಾಂತಿಯುತ ಪ್ರತಿಭಟನೆಯಾಗಲಿದೆ. ನಾವು ಸಂಸತ್ತಿನ ಹೊರಗೆ ಕುಳಿತುಕೊಳ್ಳುತ್ತೇವೆ,ಎಂದು ಟಿಕೈಟ್ ಮಾಧ್ಯಮಗಳಿಗೆ ತಿಳಿಸಿದರು.
200 ಜನರು ಬಸ್ ಮೂಲಕ ಸಂಸತ್ತಿಗೆ ಹೋಗುತ್ತಾರೆ . ನಾವು ಬಸ್ ಶುಲ್ಕವನ್ನು ಪಾವತಿಸುತ್ತೇವೆ” ಎಂದು ಬಿಕೆಯು ನಾಯಕ ಹೇಳಿದರು.
ಮಾನ್ಸೂನ್ ಅಧಿವೇಶನದ ನಿಗದಿತ ದಿನಾಂಕಗಳ ನಡುವೆ ಪ್ರತಿಭಟನೆ ನಡೆಯಲಿದ್ದು, ಇದು ಜುಲೈ 19 ರಂದು ಪ್ರಾರಂಭವಾಗಲಿದ್ದು ಆಗಸ್ಟ್ 13 ರೊಳಗೆ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement