ಕಲಬುರಗಿ: ಬಿಜೆಪಿ ಸೇರಿದ ಪಾಲಿಕೆ ಪಕ್ಷೇತರ ಸದಸ್ಯ

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಜೊತೆ ಮೈತ್ರಿಗೆ ಕೈಚಾಚಿರುವ ಬಿಜೆಪಿ ಕಲಬುರಗಿಯ ಪಕ್ಷೇತರ ಕಾರ್ಪೊರೇಟರ್ ಒಬ್ಬರನ್ನು ಕಮಲ  ಪಕ್ಷ ತನ್ನ ಪಾಳಯಕ್ಕೆ ಸೆಳೆದಿದೆ. ಕಲಬುರಗಿಯ 36ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಾ. ಶಂಭುಲಿಂಗ ಬಳಬಟ್ಟಿ ಶಾಸಕ ದತ್ತಾತ್ರೇಯ ಪಾಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು ವರದಿಯಾಗಿದೆ.
ಪಕ್ಷದ ಜಗನ್ನಾಥ ಭವನದಲ್ಲಿ ಪಾಲಿಕೆಗಳ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಡಾ.ಶಂಭುಲಿಂಗ ಬಳಬಟ್ಟಿ ಅವರನ್ನು ಬಿಜೆಪಿ ಬರಮಾಡಿಕೊಂಡರು. ಶಂಭುಲಿಂಗ ಬಳಬಟ್ಟಿ ಬಿಜೆಪಿ ಸೇರ್ಪಡೆಯಾದ್ದರಿಂದ ಕಲಬುರಗಿಯಲ್ಲಿ ಬಿಜೆಪಿ ಸ್ಥಾನ 23 ರಿಂದ 24 ಕ್ಕೆ ಏರಿದೆ.
ಶಾಸಕ ದತ್ತಾತ್ರೇಯ ಪಾಟೀಲ್ ಮಾತನಾಡಿ, ಕಲಬುರಗಿ ಪಾಲಿಕೆಗೆ ಮೇಯರ್ ಬಿಜೆಪಿಯವರೇ ಆಗುತ್ತಾರೆ. ಈಗಾಗಲೇ ಜೆಡಿಎಸ್ ಜೊತೆ ನಮ್ಮ ನಾಯಕರು ಮಾತನಾಡಿದ್ದಾರೆ. ನಮ್ಮ ಮುಂದೆ ಜೆಡಿಎಸ್ ಯಾವುದೇ ಬೇಡಿಕೆ ಇಟ್ಟಿಲ್ಲ. ಮೇಯರ್ ಹುದ್ದೆ ಜೆಡಿಎಸ್‌ ಕೇಳಿಲ್ಲ. ನಮ್ಮ ನಾಯಕರು ಕುಮಾರಸ್ವಾಮಿ ಜೊತೆ ಮಾತುಕತೆ ಮಾಡಿದ್ದಾರೆ ಎಂದರು.
ಬಿಜೆಪಿ ಸೇರ್ಪಡೆ ಬಳಿಕ ಶಂಭುಲಿಂಗ ಪಾಟೀಲ್ ಮಾತನಾಡಿ, ಈ ಮೊದಲು ಬಿಜೆಪಿಯಲ್ಲೇ ಇದ್ದೇ. ಕಾರಣಾಂತರಗಳಿಂದ ಟಿಕೇಟ್ ತಪ್ಪಿತ್ತು. ಬಳಿಕ ಸ್ವತಂತ್ರವಾಗಿ ನಿಂತು ಗೆದ್ದಿದ್ದೆ. ಈಗ ಮತ್ತೆ ಬಿಜೆಪಿಗೆ ಬಂದಿದ್ದೇನೆ. ನನಗೆ ಬಿಜೆಪಿ ಅನಿವಾರ್ಯ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement