ಕಾಮನ್ವೆಲ್ತ್ ಗೇಮ್ಸ್‌ ನಿಂದ ಹಿಂದೆ ಸರಿದ ಭಾರತದ ಹಾಕಿ ತಂಡ

ನವದೆಹಲಿ : ಬ್ರಿಟನ್ನಿನ ಬರ್ಮಿಂಗ್‌ಹ್ಯಾಮಿಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಭಾರತದ ಹಾಕಿ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದೆ.
ಕೋವಿಡ್ -19 ಮತ್ತು ಬ್ರಿಟನ್‌ನ ತಾರತಮ್ಯದ ಕ್ಯಾರೆಂಟೈನ್ ನಿಯಮಗಳ ಕಾರಣದಿಂದಾಗಿ 2022 ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಭಾರತ ಘೋಷಣೆ ಮಾಡಿದೆ.
ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನಂದ್ರೊ ನಿಂಗೊಬಮ್ ಫೆಡರೇಶನ್ ನಿರ್ಧಾರವನ್ನ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ಘೋಷಣೆ ಮಾಡಿದ್ದಾರೆ. ಭಾರತದ ಬಗ್ಗೆ ಬ್ರಿಟನ್‌ನ ದ್ವಂದ್ವ ಧೋರಣೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಿಂದ ಹಿಂದೆ ಸರಿಯಲು ಬ್ರಿಟನ್ ಒಂದು ದಿನ ಮೊದಲೇ ನಿರ್ಧರಿಸಿದ್ದು, ಇದಕ್ಕೆ ಭಾರತ ಉತ್ತರ ಈ ಮೂಲಕ ನೀಡಿದೆ ಎಂದು ಹೇಳಲಾಗುತ್ತಿದೆ.
ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ( 28 ಜುಲೈ ನಿಂದ 8 ಆಗಸ್ಟ್) ಮತ್ತು ಏಷ್ಯನ್ ಗೇಮ್ಸ್ (10-25 ಸೆಪ್ಟೆಂಬರ್) ನಡುವೆ ಕೇವಲ 32 ದಿನಗಳ ಅಂತರವಿದೆ ಎಂದು ಹಾಕಿ ಇಂಡಿಯಾ ಹೇಳಿದೆ. ಹಾಗಾಗಿ ತಮ್ಮ ಆಟಗಾರರನ್ನ ಯುಕೆಗೆ ಕಳುಹಿಸುವ ಮೂಲಕ ಅಪಾಯವನ್ನ ತೆಗೆದುಕೊಳ್ಳಲು ತಾವು ಬಯಸುವುದಿಲ್ಲ ಎಂದಿದೆ.
ನಿಂಗೊಬಮ್ ಅವರು, ‘ಏಷ್ಯನ್ ಗೇಮ್ಸ್ 2024 ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಖಂಡಾಂತರ ಅರ್ಹತಾ ಸ್ಪರ್ಧೆ ಮತ್ತು ಏಷ್ಯನ್ ಗೇಮ್ಸ್‌ನ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗುವ ಭಾರತೀಯ ತಂಡಗಳ ಯಾವುದೇ ಅಪಾಯವನ್ನ ಹಾಕಿ ಇಂಡಿಯಾ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement