ಪ್ರೇರಣಾದಾಯಕ..: ಕೇರಳದ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104 ವರ್ಷದ ಬೊಚ್ಚುಬಾಯಿಯ ಹಣ್ಣುಹಣ್ಣು ಮುದುಕಿ..!

ಕೇರಳದ 104 ವರ್ಷದ ಹಣ್ಣುಹಣ್ಣು ಮುದುಕಿಯೊಬ್ಬರು ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕೊಟ್ಟಾಯಂನಲ್ಲಿ ವಾಸಿಸುವ ಈ 104 ವರ್ಷದ ಮಹಿಳೆ ಕುಟ್ಟಿಯಮ್ಮ ಎಂಬವರು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ನಡೆಸಿದ ಪರೀಕ್ಷೆಯಲ್ಲಿ 00 ಕ್ಕೆ 89 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಇವರಿಗೆ ಕಿವಿ ಕೇಳಿಸುವುದಿಲ್ಲ, ಜೀವನದಲ್ಲಿ ಈ ಮೊದಲು ಶಾಲೆಗೇ ಹೋದವರಲ್ಲ. ಆದರೂ ಅವರು ಈ ಸಾಧನೆ ಮಾಡಿದ್ದಾರೆ. ಈ ಪರೀಕ್ಷೆಯನ್ನು ಸಾಕ್ಷರತಾ ಪರೀಕ್ಷೆ ಎಂದೂ ಕರೆಯುತ್ತಾರೆ ಮತ್ತು ಕೊಟ್ಟಾಯಂ ಜಿಲ್ಲೆಯ ಆಯರ್ಕುನ್ನಂ ಪಂಚಾಯತ್ ಇದನ್ನು ನಡೆಸಿತ್ತು.
ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‌ಕುಟ್ಟಿ ಮತ್ತು ಅನೇಕರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕುಟ್ಟಿಯಮ್ಮ ಅವರನ್ನು ಶ್ಲಾಘಿಸಿದ್ದಾರೆ. ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‌ಕುಟ್ಟಿ ಅವರು ನವೆಂಬರ್ 12, ಶುಕ್ರವಾರದಂದು ಅವರ ಚಿತ್ರವನ್ನು ಟ್ವೀಟ್ ಮಾಡಿ 100 ಕ್ಕೆ 89 ಅಂಕಗಳನ್ನು ಗಳಿಸಿದ್ದಕ್ಕಾಗಿ ಶುಭ ಹಾರೈಸಿದ್ದಾರೆ.

ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಟ್ವೀಟ್ ಮಾಡಿ, “ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ ಅವರು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ಪರೀಕ್ಷೆಯಲ್ಲಿ 100ಕ್ಕೆ 89 ಅಂಕಗಳನ್ನು ಗಳಿಸಿದ್ದಾರೆ. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಾನು ಕುಟ್ಟಿಯಮ್ಮ ಮತ್ತು ಎಲ್ಲಾ ಇತರ ಹೊಸ ಕಲಿಯುವವರನ್ನು ಪ್ರಶಂಸಿಸುತ್ತೇನೆ ಎಂದು ಶಿಕ್ಷಣ ಸಚಿವರು ಟ್ವೀಟ್‌ನಲ್ಲಿ ಕುಟ್ಟಿಯಮ್ಮ ಅವರ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಕುಟ್ಟಿಯಮ್ಮ ತಮ್ಮ ಜೀವನದಲ್ಲಿ ಶಾಲೆಗೆ ಹೋಗಲಿಲ್ಲ, ಹೀಗಾಗಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಸಾಕ್ಷರತಾ ಕಾರ್ಯಕ್ರಮದ ಮೂಲಕ ಬರೆಯುವುದನ್ನು ಕಲಿತರು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಮ್ಮ ಮನೆಯಲ್ಲಿಯೇ ತರಗತಿಗೆ ಹಾಜರಾಗುತ್ತಿದ್ದರು. ತರಗತಿಗಳಿಗೆ ಹಾಜರಾದ ನಂತರ ಕುಟ್ಟಿಯಮ್ಮ ನಾಲ್ಕನೇ ತರಗತಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾದರು. 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರಿಗೆ ಕಿವಿ ಕೇಳಿಸುವುದಿಲ್ಲ, ಆದ್ದರಿಂದ ಅವರು ಪರೀಕ್ಷೆ ವೇಳೆ ಗಟ್ಟಿಯಾಗಿ ಮಾತನಾಡುವಂತೆ ಇನ್ವಿಜಿಲೇಟರ್‍ಗಳಿಗೆ ಮನವಿ ಮಾಡಿದ್ದರು. ಸದ್ಯ ಕುಟ್ಟಿಯಮ್ಮ ಅವರ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅವರ ಬಗ್ಗೆ ಮೆಚ್ಚುಗೆ ಹಾಗೂ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ಪರೀಕ್ಷೆಯನ್ನು ನವೆಂಬರ್ 12, 2021 ರಂದು ನಡೆಸಲಾಯಿತು. ನವೆಂಬರ್ 11 ರಂದು ಪರೀಕ್ಷೆಯನ್ನು ನಡೆಸುವ ಒಂದು ದಿನದ ಮೊದಲು, ಕೇರಳ ಶಿಕ್ಷಣ ಸಚಿವರು 90 ವರ್ಷದ ಮಹಿಳೆಯ ಚಿತ್ರ ಹಾಗೂ ಅವರ ಬಗ್ಗೆ ಹಂಚಿಕೊಂಡಿದ್ದಾರೆ. ಟ್ವಿಟ್ ಮಾಡಿದ ಅವರು, “ವಯಸ್ಸು ಕೇವಲ ಒಂದು ಸಂಖ್ಯೆ. ಮಲಪ್ಪುರಂನ 90 ವರ್ಷದ ಸುಬೈದಾ ಅವರು ನಾಳೆ ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ಸಾಕ್ಷರತಾ ಪರೀಕ್ಷೆಯನ್ನು ಬರೆಯಲಿದ್ದಾರೆ. ಸುಬೈದಾ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರು ಮತ್ತು ಇತರ ಎಲ್ಲರಿಗೂ ನಾಳೆ ಅಕ್ಷರದ ಲೋಕಕ್ಕೆ ಪ್ರವೇಶಿಸುವ ಶುಭಾಶಯಗಳು ಎಂದು ಬರೆದಿದ್ದಾರೆ.
ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಕೇರಳ ಸರ್ಕಾರದ ಸಾಮಾನ್ಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಇದನ್ನು ‘ಸಾಕ್ಷರತೆ ಮತ್ತು ಮುಂದುವರಿದ ಶಿಕ್ಷಣವನ್ನು ಸಮನ್ವಯಗೊಳಿಸುವ ಮತ್ತು ಸಕ್ರಿಯಗೊಳಿಸುವ ಉದ್ದೇಶಕ್ಕಾಗಿ 1998 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಕೆಎಸ್‌ಎಲ್‌ಎಂಎಯು ಸಾಕ್ಷರತೆ, ಮುಂದುವರಿದ ಶಿಕ್ಷಣ ಮತ್ತು ರಾಜ್ಯವು ವಿನ್ಯಾಸಗೊಳಿಸಿದ ಕಲಿಕಾ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಕೇರಳ ಸರ್ಕಾರದಿಂದ ಸಂಪೂರ್ಣ ಹಣಕಾಸು ನೆರವು ಪಡೆಯುತ್ತದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement