ಬೆಂಗಳೂರು-ಮಂಡ್ಯದಲ್ಲಿ ಭೂಮಿ ಕಂಪಿಸಿದ ಅನುಭವ; ಭಾರೀ ಶಬ್ದ

ಬೆಂಗಳೂರು: ಬೆಂಗಳೂರು ಹಾಗೂ ಮಂಡ್ಯದ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ.
ಇಂದು (ಶುಕ್ರವಾರ) ಮಧ್ಯಾಹ್ನ 12 : 15ರ ಸುಮಾರಿಗೆ 15 ನಿಮಿಷಗಳ ಅಂತರದಲ್ಲಿ ಎರಡು ಸಲ ಬೆಂಗಳೂರಿನ ರಾಜರಾಜೇಶ್ವರಿ ನಗರ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಗ್ಗಲಪುರ, ಜ್ಞಾನಭಾರತಿ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ದೊಡ್ಡ ಶಬ್ದ ಉಂಟಾಗಿದೆ. ಮೊದಲ ಸಲ ಲಘುವಾಗಿ ಕಂಪಿಸಿದ ಅನುಭವವಾಗಿದ್ದು, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಎಂದು ವರದಿಯಾಗಿದೆ. ಮನೆಯಲ್ಲಿರುವ ಕೆಲವು ವಸ್ತುಗಳು ಕೆಳಕ್ಕುರುಳಿದೆ. ಇದರಿಂದಾಗಿ ಬೆಂಗಳೂರಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮತ್ತೊಂದೆಡೆ ಮಂಡ್ಯದಲ್ಲಿ ಕೂಡ ಬೆಳಗ್ಗೆ 11.50ರ ಸುಮಾರಿಗೆ ಇದೇ ರೀತಿ ಜೋರು ಶಬ್ದ ಕೇಳಿ ಬಂದಿದೆ ಎಂದು ವರದಿಯಾಗಿದೆ. ಶಬ್ದಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ನಡುಗಿದೆ.

 

0 / 5. 0

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

ನಿಮ್ಮ ಕಾಮೆಂಟ್ ಬರೆಯಿರಿ

advertisement