ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ವ್ಯವಸ್ಥೆ : ರಾಜ್ಯ ಸರ್ಕಾರದ ಮಹತ್ವದ ಘೋಷಣೆ

ಬೆಂಗಳೂರು : ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಮಹತ್ವದ ಘೋಷಣೆ ಮಾಡಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (Karnataka Public School) ಎಲ್‌ಕೆಜಿ (LKG)ಯಿಂದ ಪಿಯುಸಿ ವರೆಗೆ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಒತ್ತು ನೀಡಲು ನಿರ್ಧರಿಸಿದೆ.

ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ ವ್ಯವಸ್ಥೆಯನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದ್ದಾರೆ.

ಎಲ್‌ಕೆಜಿಯಿಂದ ಪಿಯುಸಿ ವರೆಗೆ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲ ನೀಡಲು ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯೂ ಇದಾಗಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ: ಪತ್ರಕರ್ತ ರವಿ ನಾಯ್ಕರಿಗೆ ʼಮಾಧ್ಯಮ ಶ್ರೀʼ ಪ್ರಶಸ್ತಿ- ನಾಲ್ವರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ

5 / 5. 4

ಶೇರ್ ಮಾಡಿ :

  1. Manju

    ಬಸ್ ವ್ಯವಸ್ಥೆ ಗಿಂತ ಮುಖ್ಯ ಇರೋದು ಶಾಲಾ ಶಿಕ್ಷಕರು ಯಾವರೀತಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಅನ್ನೋದು ಮುಖ್ಯ….

    ಹೇಗೆ ಕಲಿಸಿದರೂ ತಮ್ಮ ಸ್ಯಾಲರಿಗೆ ಎನೂ ಕೊರತೆ ಆಗೋದಿಲ್ಲ ಅನ್ನೋದು … ಸರ್ಕಾರಿ ಶಾಲೆಗಳಲ್ಲಿಯ ಬಯಕೆ….. ಯಾವ ಶಾಲೆಯಲ್ಲಿ ಅತೀ ಕಡಿಮೆ ಶೆಕಡವಾರು ಅಂಕ ಗಳಿಸಿರುತ್ತಾರೆ ಅವರಿಗೆ…. ಶಾಲಾ ಮಕ್ಕಳ ಶೆಕಡಾವಾರು ಅಂಕಪಟ್ಟಿ ಆದರಿಸಿ ಸ್ಯಾಲರಿ ನೀಡಿದರೆ…. ತಮ್ಮ ಜೇಬಿಗೆ ಕತ್ತರಿ ಬೀಳುತ್ತದೆ ಅನ್ನೋ ಸಲುವಾಗಿ ಆದರೂ ಚೆನ್ನಾಗಿ ಪಾಠ ಮಾಡಬಹುದು.

    ಇಲ್ಲವಾದಲ್ಲಿ ಸ್ಟಾಪ್ ರೂಂ ನಲ್ಲಿ ಊರಿನ ಪಂಚಾಯಿತಿ ಶುರುವಾಗುತ್ತದೆ.ಶಾಲಾ ಶಿಕ್ಷಕರು ಸಾಧ್ಯವಾದಷ್ಟು ಹೊರಗಿನ ಊರಿನವರಾದಷ್ಟು ಒಳ್ಳೆಯದು.

ನಿಮ್ಮ ಕಾಮೆಂಟ್ ಬರೆಯಿರಿ

advertisement