ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಬೃಹತ್ ಆನೆ ದಾಳಿ‌, ವಾಹನ ನುಜ್ಜುಗುಜ್ಜು.. ವಿಡಿಯೊದಲ್ಲಿ ಸೆರೆ

ಪ್ರಿಟೋರಿಯಾ: ಆನೆ ತಾನಾಗಿ ಯಾರ ಸುದ್ದಿಗೂ ಹೋಗುವುದಿಲ್ಲ, ಆದರೆ ಅದನ್ನು ಕೆಣಕಿದರೆ ಅಥವಾ ಅದಕ್ಕೆ ಕಿರಿಕಿರಿ ಮಾಡಿದರೆ ಅದು ಸಿಟ್ಟಿಗೇಳುತ್ತದೆ. ಅದು ಸಿಟ್ಟಿಗೆದ್ದರೆ ಏನೂ ಬೇಕಾದರೂ ಆಗಬಹುದು.
ಇಂಥದ್ದೇ ಒಂದು ಘಟನೆ ನಡೆದಿದೆ. ಆನೆ ಕಿರಿಕಿರಯಾಗಿ ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಗ್ಲೋವೆಲೆಟ್ ಮತ್ತು ಫಲಬೋರ್ವಾ ಪಟ್ಟಣಗಳ ನಡುವೆ ಇರುವ ವನ್ಯಜೀವಿ ಪ್ರದೇಶದಲ್ಲಿ ಆನೆ ಸಫಾರಿ ವಾಹನದ ಮೇಲೆ ದಾಳಿ ಮಾಡಿ ವಾಹನ ಜಖಂ ಮಾಡಿದೆ. ಅದರಲ್ಲಿದ್ದವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಭಯಭೀತರಾದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಸಫಾರಿ ವಾಹನದಿಂದ ಇಳಿದು ಓಡುತ್ತಿರುವ ದೃಶ್ಯವನ್ನು ನಾವು ವಿಡಿಯೋದಲ್ಲಿ ನೋಡಬಹುದು.
ಆನೆಗಳ ಜೀವನ ಕ್ರಮದ ಬಗ್ಗೆ ತಿಳಿಯಲು ಬಂದ ವಾಹನ ವಿದ್ಯಾರ್ಥಿಗಳು ಸಂತಾನೋತ್ಪತ್ತಿ ಸಮಯದಲ್ಲಿ ಹಿಂಡಿನ ಜೊತೆಯಲ್ಲಿದ್ದ ಗಂಡಾನೆಯತ್ತ ಹೋಗಿದೆ. ಅದು ಒಂದು ಸಲ ಎಚ್ಚರಿಕೆ ನೀಡಿದೆ. ಆದರೆ ಇವರು ಮುಂದುವರಿಸಿದ್ದರಿಂದ ಕೋಪಗೊಂಡು ದಾಳಿ ನಡೆಸಿದೆ. ವಾಹನದೊಂದಿಗೆ ನೇರ ಸಂಪರ್ಕಕ್ಕೆ ಬಂದು ಅದನ್ನು ರಸ್ತೆಯಿಂದ ತಳ್ಳಿದೆ.. ಈ ವಿಡಿಯೊದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಬಳಿ ಇದ್ದ ವಸ್ತುಗಳನ್ನು ಬಿಟ್ಟು ಓಡಿರುವುದು ಸೆರೆಯಾಗಿದೆ. ಸಫಾರಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್‌ ಆನೆಯ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ.
ಸೆಲಾಟಿ ಗೇಮ್ ರಿಸರ್ವ್ ಜನರಲ್ ಮ್ಯಾನೇಜರ್ ಬ್ರಿಯಾನ್ ಹ್ಯಾವ್‌ಮನ್ ಅವರು “ವಾಹನವು ಕೆಟ್ಟದಾಗಿ ಹಾನಿಗೊಳಗಾಗಿದ್ದರೂ, ಅದೃಷ್ಟವಶಾತ್ ವಾಹನದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಫ್ಘಾನಿಸ್ತಾನದಲ್ಲಿ 45 ವರ್ಷದ ವ್ಯಕ್ತಿ ಜೊತೆ 6 ವರ್ಷದ ಬಾಲಕಿಯ ವಿವಾಹ...! ಮನೆಗೆ ಬಾಲಕಿಯನ್ನು ಕರೆದೊಯ್ಯದಂತೆ ತಡೆದ ತಾಲಿಬಾನ್‌

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement