ಪಾರ್ಶ್ವವಾಯು ರೋಗದ ಖ್ಯಾತ ನಾಟಿ ವೈದ್ಯ ಬೆಳಂಬಾರ ಹನುಮಂತ ಗೌಡರಿಗೆ ಸನ್ಮಾನ

ಅಂಕೋಲಾ : ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಆದಮಾರು ಮಠದಿಂದ ನೀಡಲ್ಪಡುವ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾಗಿರುವ ಇಲ್ಲಿಯ ಬೆಳಂಬಾರದ  ಪಾರ್ಶ್ವವಾಯು ರೋಗದ ಖ್ಯಾತ ನಾಟಿ ವೈದ್ಯ ಹನುಮಂತ ಗೌಡ ಅವರನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದಿಂದ ಶುಕ್ರವಾರ ಸನ್ಮಾನಿಸಲಾಯಿತು.
ಹನುಮಂತ ಗೌಡರ ಚಿಕಿತ್ಸಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಕಲಾವಿದ ದೇವಿದಾಸ ಸುವರ್ಣ, ಹನುಮಂತ ಗೌಡರು ರೋಗಿಗಳ ಪಾಲಿಗೆ ದೇವರಿದ್ದಂತೆ. ಚಿಕಿತ್ಸೆಯ ಹೆಸರಲ್ಲಿ ಲೂಟಿ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಸರಳ ಜೀವನ ನಡೆಸುತ್ತ ಬಂದ ಪಾರ್ಶ್ವವಾಐಉ ಪೀಡಿತ ರೋಗಿಗಳಿಗೆ ಆರ್ಥಿಕ ಭಾರವಾಗದಂತೆ ಚಿಕಿತ್ಸೆ ನೀಡಿ ನಗುಮೊಗದಿಂದ ಗುಣಮುಖರಾಗಿ ಮನೆಗೆ ಹೋಗುವಂತೆ ಮಾಡುತ್ತಿದ್ದಾರೆ ಎಂದರು.
ಇನ್ನೋರ್ವ ಅತಿಥಿ, ಕೆಎಲ್‌ಇ ಮಹಿಳಾ ಕಾಲೆಜಿನ ಪ್ರಾಚಾರ್ಯೆ ಸ್ಮಿತಾ ಫಾತರಪೇಕರ್ ಮಾತನಾಡಿ, ಹನುಮಂತ ಗೌಡರು ತಮ್ಮ ಸೇವೆಯ ಮೂಲಕ ರಾಜ್ಯ ಹೊರ ರಾಜ್ಯಗಳಲ್ಲಿ ಹೆಸರು ಮಾಡಿದ್ದಾರೆ. ಇಂಥವರನ್ನು ಸನ್ಮಾನಿಸುವುದು ಅವರ ಸೇವಾ ಕಾರ್ಯತತ್ಪರತೆಗೆ ಸಲ್ಲುವ ಗೌರವ ಎಂದರು.
ಅ.ಭಾ.ಸಾಹಿತ್ಯ ಪರಿಷದ್ ಜಿಲ್ಲಾ ಕಾರ್ಯದರ್ಶಿ ವಿಠ್ಠಲದಾಸ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಭಾವಿಪ ಪ್ರಮುಖ ಪ್ರವೀಣ ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ವರದಿಗಾರರಾದ ರವಿ ಗೌಡ, ಅಕ್ಷಯ ನಾಯ್ಕ, ಪ್ರಮುಖರಾದ ಸಂದೀಪ ಗಾಂವಕರ್ , ಪ್ರಜ್ಞಾ ಪ್ರದೀಪ ಆಚಾರಿ, ಲತಾ ವಿ. ಕಾಮತ್ , ಆಸ್ಪತ್ರೆ ಸಿಬ್ಬಂದಿಗಳಾದ ಮೇಘನಾ ಎಸ್, ಲಕ್ಷ್ಮಿ ಪಿ ಮತ್ತಿತರರು ಇದ್ದರು.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

3.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement