ಗರ್ಭಿಣಿ ಸಹೋದರಿಯ ತಲೆ ಕಡಿದ ನಂತರ ರುಂಡದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಸಹೋದರ..!

ಔರಂಗಬಾದ್: ತನ್ನ ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣಕ್ಕೆ 19 ವರ್ಷದ ಗರ್ಭಿಣಿಯನ್ನು ಭಾನುವಾರ ತಾಯಿಯ ಜೊತೆ ಸೇರಿಕೊಂಡು ಆಕೆಯ ಸಹೋದರ ಶಿರಚ್ಛೇದ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
38 ವರ್ಷದ ತಾಯಿ ಮತ್ತು 18 ವರ್ಷದ ಸಹೋದರ ಗರ್ಭಿಣಿಯ ಶಿರಚ್ಛೇದ ಮಾಡಿದ ತಲೆಯನ್ನು ಹಿಡಿದುಕೊಂಡು ಹೋಗಿ ನೆರೆಹೊರೆಯವರ ಮುಂದೆ ಪ್ರದರ್ಶಿಸಿದರು ಎಂದು ವರದಿಯಾಗಿದೆ. ನಮ್ಮ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣಕ್ಕೆ ನಾವು ತಮ್ಮ ಮಗಳನ್ನು ಕೊಂದಿರುವುದಾಗಿ ಆರೋಪಿಗಳು ನೆರೆಹೊರೆಯವರ ಮುಂದೆ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ. ಆರು ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯ ತಲೆಯೊಂದಿಗೆ ಅವರು ಸೆಲ್ಫಿ ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ತಾಯಿ ಮತ್ತು ಸಹೋದರ ಮಹಿಳೆಯೊಂದಿಗೆ ರಾಜಿ ಮಾಡಿಕೊಳ್ಳುವ ನೆಪದಲ್ಲಿ ಆಕೆಯ ಮನೆಗೆ ಹೋಗಿದ್ದರು. ಪತ್ನಿ ತನ್ನ ಸಹೋದರ ಮತ್ತು ತಾಯಿ ಜತೆ ಮುಕ್ತವಾಗಿ ಮಾತನಾಡಲಿ ಎಂದು ಸಂತ್ರಸ್ತೆಯ ಪತಿ ಕೊಠಡಿಯಿಂದ ಹೊರ ಬಂದಿದ್ದರು. ಮಹಿಳೆ ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ, ಹರಿತವಾದ ಆಯುಧವನ್ನು ಹಿಡಿದಿದ್ದ ಸಹೋದರ ಆಕೆಯ ಮೇಲೆ ದಾಳಿ ಮಾಡಿ ಕತ್ತು ಕೊಯ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯ ಪತಿ ರಕ್ಷಿಸಲು ಬರುವಷ್ಟರಲ್ಲಿ ಸಂತ್ರಸ್ತೆಯ ಸಹೋದರ ಆಕೆಯ ಶಿರಚ್ಛೇದ ಮಾಡಿದ್ದಾನೆ ಎಂದು ಅವರು ಹೇಳಿದರು. ಸಂತ್ರಸ್ತೆಯ ಪತಿ ತನ್ನ ಮೇಲೆಯೂ ಹಲ್ಲೆ ನಡೆಸಬಹುದೆಂಬ ಭಯದಿಂದ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಸಂತ್ರಸ್ತೆಯ ತಾಯಿ ಮತ್ತು ಸಹೋದರ ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಏಷ್ಯನ್‌ ಗೇಮ್ಸ್‌ 2026 : ಬಿಲ್ಲುಗಾರಿಕೆಯಲ್ಲಿ 2, ಮಹಿಳಾ ರಿಲೇ ಓಟದಲ್ಲಿ 1 ಚಿನ್ನದ ಪದಕ ಗೆದ್ದ ಭಾರತ

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement