
ಮುಂಬೈ: ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ, ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಬಿಸಿಸಿಐ ನೇಮಿಸಿದೆ.
ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ಅನೌಪಚಾರಿಕವಾಗಿ ವಜಾಗೊಳಿಸಿದ್ದಕ್ಕಾಗಿ ಇನ್ನೂ ಅಸಮಾಧಾನಗೊಂಡಿರುವಂತೆ ತೋರುತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ತಯಾರಿಯಲ್ಲಿದೆ. ಪ್ರವಾಸದ ಮೊದಲು, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಮೂರು ದಿನಗಳ ಕ್ವಾರಂಟೈನ್‌ಗೆ ಹೋಗುವ ಮೊದಲು ಆಟಗಾರರಿಗಾಗಿ ಶಿಬಿರ ಆಯೋಜಿಸಲಾಗಿತ್ತು. ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್, ರಿಷಭ್ ಪಂತ್ ಮತ್ತು ಇತರರು ಶಿಬಿರದಲ್ಲಿ ಭಾಗವಹಿಸಿದ್ದರು, ಕೊಹ್ಲಿ ಅದನ್ನು ತಪ್ಪಿಸಿಕೊಂಡಿದ್ದಾರೆ.
ಹೀಗಾಗಿ ಕೊಹ್ಲಿ ನಡೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಗೆ ಕೆಳಗಿಳಿಯಲು ಅಸಮಾಧಾನವಿತ್ತು. ಆದರೆ ಬಿಸಿಸಿಐ ಮಾತ್ರ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್‍ಗೆ ಪಟ್ಟ ಕಟ್ಟಿದೆ. ಹಾಗಾಗಿ ಕೊಹ್ಲಿ ಮುನಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿಯೂ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ, ಬಿಸಿಸಿಐ ಅಧಿಕಾರಿಗಳು ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರು. ಕೊಹ್ಲಿ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ವರದಿಯಾಗಿದೆ
ವಿರಾಟ್ ಕೊಹ್ಲಿ ಶಿಬಿರಕ್ಕೆ ಗೈರಾಗುವ ಬಗ್ಗೆ ಮೊದಲೇ ತಿಳಿಸಿದ್ದರು. ಮೂರು ದಿನಗಳ ಶಿಬಿರಕ್ಕೆ ನಾಳೆ ಕೊಹ್ಲಿ ಆಗಮಿಸುತ್ತಾರೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ಮುನ್ನ ಮೂರು ದಿನಗಳ ಕಾಲ ಬಯೋ ಬಬಲ್‍ನಲ್ಲಿ ಇದ್ದು ಜೋಹನ್‍ಬರ್ಗ್ ಗೆ ಪ್ರಯಾಣ ಬೆಳೆಸಲಿದೆ ಹಾಗಾಗಿ ಮುಂಬೈನಲ್ಲಿ ಸೇರಿದೆ ಅಷ್ಟೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ