ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ವರುಣ್ ಗಾಂಧಿ, ಲಕ್ನೋದಲ್ಲಿ ಹಗಲಿನಲ್ಲಿ ಕಿಕ್ಕಿರಿದ ಸಮಾವೇಶ ನಡೆಸಿ ರಾತ್ರಿ ಕರ್ಫ್ಯೂ ಹೇರಿದ ಉತ್ತರ ಪ್ರದೇಶದ ಸರ್ಕಾರದ ನಡೆ ಬಗ್ಗೆ ಪ್ರಶ್ನಿಸಿದ್ದಾರೆ.
ಓಮಿಕ್ರಾನ್ನ ಉದಯದ ಮಧ್ಯೆ ಇಂತಹ ಸಮಾವೇಶಗಳನ್ನು ನಡೆಸುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಓಮಿಕ್ರಾನ್ ಅನ್ನು ನಿಯಂತ್ರಿಸುವ ಬದಲು ಚುನಾವಣೆಗೆ ಆದ್ಯತೆ ನೀಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ರಾಜ್ಯದ ಒಂದು ಕೋಟಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ಗಳು ಮತ್ತು ಸ್ಮಾರ್ಟ್ಫೋನ್ಗಳನ್ನು ವಿತರಿಸುವ ಅಭಿಯಾನಕ್ಕೆ ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚಾಲನೆ ನೀಡಿದರು. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಇಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ 60,000 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ಗಳು ಮತ್ತು ಸ್ಮಾರ್ಟ್ಫೋನ್ಗಳನ್ನು ವಿತರಿಸಲಾಯಿತು.
ರಾತ್ರಿ ಕರ್ಫ್ಯೂ ಹೇರಿ ಬೆಳಗ್ಗೆ ಸಮಾವೇಶ ನಡೆಸುವ ಮೂಲಕ ಓಮಿಕ್ರಾನ್ ಆತಂಕವನ್ನು ಕಡೆಗಣಿಸಿದ್ದಕ್ಕಾಗಿ ಗುಡುಗಿದ ವರುಣ್ ಗಾಂಧಿ ರಾತ್ರಿಯಲ್ಲಿ ಕರ್ಫ್ಯೂ ಹೇರುವುದು ಮತ್ತು ಹಗಲಿನಲ್ಲಿ ಲಕ್ಷಾಂತರ ಜನರನ್ನು ಸಮಾವೇಶಕ್ಕೆ ಕರೆಯುವುದು. ಇದು ಸಾಮಾನ್ಯ ಜನರಿಗೆ ಗ್ರಹಿಕೆಗೆ ಮೀರಿದೆ. ಉತ್ತರ ಪ್ರದೇಶದ ಸೀಮಿತ ಆರೋಗ್ಯ ರಕ್ಷಣಾ ವ್ಯವಸ್ಥೆ ಗಮನಿಸಿದರೆ, ಭಯಾನಕ ಓಮಿಕ್ರಾನ್ ಹರಡುವುದನ್ನು ತಡೆಯುವುದೇ ಅಥವಾ ಚುನಾವಣಾ ಶಕ್ತಿಯನ್ನು ತೋರಿಸುವುದೇ ನಮ್ಮ ಆದ್ಯತೆಯೇ ಎಂಬುದನ್ನು ನಾವು ಪ್ರಾಮಾಣಿಕವಾಗಿ ನಿರ್ಧರಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ, ವರುಣ್ ಗಾಂಧಿ ರೈತರ ಸಮಸ್ಯೆಗಳು, ಉತ್ತರ ಪ್ರದೇಶ ಪೊಲೀಸರ ಅತಿಯಾದ ಕ್ರಮ, ಅಪರಾಧಗಳ ಹೆಚ್ಚಳ ಮೊದಲ ಸಮಸ್ಯೆಗಳ ಬಗ್ಗೆ ತಮ್ಮದೇ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ವರುಣ ಗಾಂಧಿ 2009 ರಿಂದ ಲೋಕಸಭಾ ಸಂಸದ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು – ಪಕ್ಷದಲ್ಲಿ ಆ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ. ಆದಾಗ್ಯೂ, 2014 ರಲ್ಲಿ ಕೇಸರಿ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅವರು ಕ್ರಮೇಣ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳಲು ಪ್ರಾರಂಭಿಸಿದರು. ಅವರು ರೈತರ ಪ್ರತಿಭಟನೆ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿದ ನಂತರ ಅವರನ್ನು ಮತ್ತು ಅವರ ತಾಯಿ ಮೇನಕಾ ಗಾಂಧಿ ಅವರನ್ನು ಪುನರ್ರಚಿಸಲಾದ 80 ಸದಸ್ಯರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ