ಕಾಡಿನ ಜಿಂಕೆ ಅಕ್ರಮವಾಗಿ ಮನೆಯಲ್ಲಿರಿಸಿಕೊಂಡಿದ್ದ ವ್ಯಕ್ತಿ ಬಂಧನ

ಶಿರಸಿ: ಕಾಡಿನ ಜಿಂಕೆ ಹಿಡಿದು ಆರು ತಿಂಗಳ ಕಾಲ ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀರ್ನಳ್ಳಿ ಕಲಗಾರು ಬಳಿ ಘಟನೆ ಬೆಳಕಿಗೆ ಬಂದಿದ್ದು, ಸಂಚಾರಿ ಅರಣ್ಯ ಘಟಕ ದಳದವರು ಅಕ್ರಮವಾಗಿ ಇದನ್ನು ಇಟ್ಟುಕೊಂಡ ಆರೋಪದ ಮೇರೆಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಬೀಬ್ ರೆಹಮಾನ ಮಹ್ಮದ್ ಸಾಬ್(46) ಬಂಧಿತ ಆರೋಪಿ. ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳಿಂದ ಅರಣ್ಯ ಇಲಾಖೆಗೆ ತಿಳಿಸದೆ ಈತ ಮನೆಯಲ್ಲಿ ಇಟ್ಟುಕೊಂಡಿದ್ದ.
ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ದಳ ಆರೋಪಿಯನ್ನು ಆರಣ್ಯ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದು, ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಜಿಂಕೆಯನ್ನು ವಶಪಡಿಸಿಕೊಂಡು ಶಿರಸಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ದು, ಕಾರ್ಯಾಚರಣೆಯಲ್ಲಿ ದಾಂಡೇಲಿ ಸಿ.ಐ.ಡಿ ಅರಣ್ಯ ಘಟಕದ ಪಿ.ಎಸ್.ಐ. ಮಂಜುನಾಥ ಬೋರಕರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement