ಇಬ್ಬರು ಮಕ್ಕಳಿಗೆ ಬಂದ ಆನುವಂಶಿಕ ಕಣ್ಣಿನ ಕಾಯಿಲೆ ; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ…!

ಹೈದರಾಬಾದ್‌ : ಹೈದರಾಬಾದ್‌ನ ಉಪನಗರದಲ್ಲಿ 32 ವರ್ಷದ ಮಹಿಳೆಯೊಬ್ಬರು ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಹಿಳೆ ಆರು ಪುಟಗಳ ಡೆತ್‌ ನೋಟ್‌ ಸಹ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಹೈದರಾಬಾದಿನ ಗಜುಲರಾಮರಂ ಪ್ರದೇಶದ ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತೇಜಸ್ವಿನಿ ಎಂಬ ಮಹಿಳೆ ತೆಂಗಿನಕಾಯಿ ಕತ್ತರಿಸಲು ಬಳಸುವ ಕತ್ತಯಿಂದ ತನ್ನ ಗಂಡು ಮಕ್ಕಳನ್ನು ಕೊಂದು ನಂತರ ಐದನೇ ಮಹಡಿಯಿಂದ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದೀರ್ಘಕಾಲದಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ತೇಜಸ್ವಿನಿ ಅವರ ಇಬ್ಬರು ಮಕ್ಕಳಾದ ಅರ್ಶಿತ್ ರೆಡ್ಡಿ ಮತ್ತು ಆಶಿಶ್ ರೆಡ್ಡಿಗೆ ಈ ಆನುವಂಶಿಕ ಕಾಯಿಲೆ ಬಂದಿತ್ತು.

ಈ ಸ್ಥಿತಿಯಿಂದಾಗಿ ಅವರು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಕಣ್ಣಿಗೆ ಡ್ರಾಪ್‌ ಬಿಟ್ಟುಕೊಳ್ಳಬೇಕಾಗಿತ್ತು. ಅದು ಇಲ್ಲದೆ ಅವರು ನೋಡಲು ಕಷ್ಟಪಡಬೇಕಾಗಿತ್ತು. ಮುಗಿಯದ ಈ ಸಮಸ್ಯೆಯಿಂದ ತೇಜಸ್ವಿಗೆ ಅಸಹನೀಯವಾಯಿತು, ಇದು ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹತಾಶರಾಗುವಂತೆ ಮಾಡಿತು.
ಈ ಸಮಸ್ಯೆಯಿಂದಾಗಿ ಮನೆಯಲ್ಲಿ ನಿರಂತರ ಜಗಳಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ. ತೇಜಸ್ವಿನಿ ತನ್ನ ಆತ್ಮಹತ್ಯೆ ಪತ್ರದಲ್ಲಿ, ತನ್ನ ಪತಿ ತೀವ್ರ ವಾಗ್ವಾದದ ಸಮಯದಲ್ಲಿ “ಬೇಕಿದ್ದರೆ ಸಾಯಿರಿ” ಎಂದು ಕೋಪದಿಂದ ಹೇಳುತ್ತಿದ್ದರು, ಆ ಒತ್ತಡವು ಸಹಿಸಲು ತುಂಬಾ ಕಷ್ಟವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆ ಪತ್ರದಲ್ಲಿ, ತೇಜಸ್ವಿನಿ ತನ್ನ ನೋವು ಮತ್ತು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ನಂತರ ಅವರು ತೆಂಗಿನಕಾಯಿ ಕತ್ತರಿಸುವ ಆಯುಧ ತೆಗೆದುಕೊಂಡು ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು, ತನ್ನ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೇಜಸ್ವಿನಿ ಮತ್ತು ಅರ್ಷಿತ್ ಇಬ್ಬರೂ ತಕ್ಷಣವೇ ಸಾವಿಗೀಡಾಗಿದ್ದಾರೆ. ಇಬ್ಬರಲ್ಲಿ ಕಿರಿಯ ಆಶಿಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement