ಯುವ ಕಾಂಗ್ರೆಸ್ ಚುನಾವಣಾ ಫಲಿತಾಂಶ : ದೆಹಲಿಯಲ್ಲಿ ಮತ್ತೆ ಮತ ಎಣಿಕೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಕಾಂಗ್ರೆಸ್‌ನಲ್ಲಿಯೇ ಏರ್ಪಟ್ಟಿದೆ. ಇದಕ್ಕೆ ಉತ್ತಮ ಉದಾಹರಣೆ ಯುವ ಕಾಂಗ್ರೆಸ್‌ ಚುನಾವಣೆ ಹಾಗೂ ಫಲಿತಾಂಶ.
ಪದೇಪದೇ ತಿರುವುದು ಪಡೆದುಕೊಳ್ಳುತ್ತಿರುವ ಯುವ ಕಾಮಗ್ರೆಸ್‌ ಚುನಾವನೆ ಫಲಿತಾಂಶ ಈಗ ದೆಹಲಿಯ ಹೈ ಕಮಾಂಡ್‌ ಬಾಗಿಲ ವರೆಗೂ ಹೋಗಿದೆ. ಈಗ ದೆಹಲಿಯಲ್ಲಿಯೇ ಯುವ ಕಾಂಗ್ರೆಸ್‌ ಚುನಾವಣೆಯ ಮತಗಳ ಎಣಿಕೆ ನಡೆಯಲಿದೆಯಂತೆ…! ಫೆ. ೨೧ ಹಾಗೂ ೨೨ರಂದು ಈ ಮತಗಳ ಮರು ಎಣಿಕೆ ನಡೆಯಲಿದ್ದು, ಅಲ್ಲಿ ಯಾರು ವಿಜಯೀ ಎಂದು ಘೋಷಿಸಲಾಗುತ್ತದೆಯಂತೆ.
ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆದು ಮೊದಲು ಶಾಸಕ ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪ್ಪಾಡ್‌ ಅವರನ್ನು(೬೪,೨೦೩ ಮತಗಳು) ವಿಜಯೀ ಎಂದು ಘೋಷಿಸಿ ಸಂಭ್ರಮಾಚರಣೆಯೂ ನಡೆದಿತ್ತು. ಅದಾದ ನಂತರದಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ ಅವರನ್ನು ಅನರ್ಹಗೊಳಿಸಿ 57,271 ಮತಗಳನ್ನು ಪಡೆದಿರುವ ರಕ್ಷ ರಾಮಯ್ಯ ಅವರನ್ನು ವಿಜಯೀ ಎಂದು ಘೋಷಿಸಿ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಅದರೆ ಇದಕ್ಕೆ ಸುಮ್ಮನಾಗದ  ಮೊಹಮ್ಮದ ನಲಪ್ಪಾಡ್‌, ಪಕ್ಷದ ಆಂತರಿಕ ಚುನಾವಣಾ ಸಮಿತಿಗೆ ತಮಗೆ ನ್ಯಾಯ ಕೊಡಿಸುವಂತೆ ಮೇಲ್ಮನವಿ ಸಲ್ಲಿಸಿದರು. ಪರಿಣಾಮ ಈಗ ದೆಹಲಿಯಲ್ಲಿ ಮತಗಳ ಮರು ಎಣಿಕೆ ನಡೆಯಲಿದೆಯಂತೆ.
ರಕ್ಷ ರಾಮಯ್ಯ ಮತ್ತು ನಲಪಾಡ್ ಇಬ್ಬರೂ ಅನರ್ಹಗೊಂಡಿರುವ 27 ಸಾವಿರ ಮತಗಳಲ್ಲಿ ನಮಗೆ ಬರಬೇಕಾದ ಮತಗಳ ಸಂಖ್ಯೆ ಹೆಚ್ಚಿದೆ ಎಂದು ವಾದ ಮುಂದಿಡುತ್ತಿದ್ದಾರೆ. ಹೀಗಾಗಿ ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಸಮಿತಿ ಹಾಗೂ ಹಿರಿಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಫೆ.20 ಹಾಗೂ 21ರಂದು ದೆಹಲಿಗೆ ಆಹ್ವಾನಿಸಿದ್ದಾರೆ.ಮೊಹಮ್ಮದ್ ನಲಪ್ಪಾಡ್ ಹ್ಯಾರಿಸ್, ಭವ್ಯಾ, ರಕ್ಷ ರಾಮಯ್ಯ, ಸಂದೀಪ್ ನಾಯಕ್, ಎಚ್.ಎಸ್.ಮಂಜುನಾಥ್, ಸಯ್ಯದ್ ಖಾಲಿದ್ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದು, ಎಲ್ಲರ ಜತೆ ಸಮಾಲೋಚನೆ ನಡೆಯಲಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement