ಯೋಗಿ ಆದಿತ್ಯನಾಥ ಭಾರತದ ಎರಡನೇ ಅತ್ಯಂತ ಜನಪ್ರಿಯ ಸಿಎಂ : ಭಾರತದ ನಂಬರ್‌ 1 ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಇವರು

ನವೀನ ಪಟ್ನಾಯಕ್

ನವದೆಹಲಿ: ಭಾರತದ ಮುಖ್ಯಮಂತ್ರಿಗಳ ಜನಪ್ರಿಯತೆ ಮತ್ತು ಜನರು ಅವರನ್ನು ಹೇಗೆ ಸ್ವೀಕರಿಸಿದ್ದಾರೆ ಎಂದು ನಿರ್ಧರಿಸುವ ಬಗ್ಗೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಅತ್ಯಂತ ಹೆಚ್ಚು ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.
ನವೀನ್‌ ಪಟ್ನಾಯಕ್‌ ಅವರು ಎರಡು ದಶಕಗಳಿಂದಲೂ ಒಡಿಶಾದ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾರತದ ಐದು ಜನಪ್ರಿಯ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ:
ನವೀನ ಪಟ್ನಾಯಕ್:
ಮಾರ್ಚ್ 2000ದಿಂದ ಒಡಿಶಾದ ಮುಖ್ಯಮಂತ್ರಿಯಾಗಿರುವ 77 ವರ್ಷದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಭಾರತದ ಐದು ಜನಪ್ರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಮೀಕ್ಷೆಯ ಪ್ರಕಾರ, ಅವರು 52.7% ರಷ್ಟು ಜನಪ್ರಿಯತೆಯ ರೇಟಿಂಗ್ ಪಡೆದಿದ್ದಾರೆ. ಬಿಜು ಜನತಾ ದಳದ ಮುಖ್ಯಸ್ಥರಾಗಿರುವ ಅವರು ದೇಶದ ಬಹುಕಾಲ ಮುಖ್ಯಮಂತ್ರಿಗಳಾಗಿದ್ದವರಲ್ಲಿ ಒಬ್ಬರು.
ಯೋಗಿ ಆದಿತ್ಯನಾಥ:
ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ ಎರಡನೇ ಸ್ಥಾನದಲ್ಲಿದ್ದಾರೆ. ಯೋಗಿ ಆದಿತ್ಯನಾಥ ಅವರು ಮಾರ್ಚ್ 2017 ರಿಂದ ಉತ್ತರ ಪ್ರದೇಶದ 21 ನೇ ಮುಖ್ಯಮಂತ್ರಿಯಾಗಿದ್ದಾರೆ. ಯೋಗಿ ಆದಿತ್ಯನಾಥ ಅವರು ಸಮೀಕ್ಷೆಯಲ್ಲಿ 51.3%ರಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಯೋಗಿ ಅವರು ಸುಮಾರು ಏಳು ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಮೂಲೆಗುಂಪು-ಹತಾಶ ; ʼಸಿಂಧೂ ಜಲ ಒಪ್ಪಂದ ಸಸ್ಪೆಂಡ್‌ʼ ನಿರ್ಧಾರ ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತಕ್ಕೆ ಪತ್ರ ಬರೆದ ಪಾಕಿಸ್ತಾನ

ಹಿಮಂತ ಬಿಸ್ವಾ ಶರ್ಮಾ:
ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ಅವರು 48.6% ಜನಪ್ರಿಯತೆಯೊಂದಿಗೆ ಸಮೀಕ್ಷೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಾಜಿ ಕಾಂಗ್ರೆಸ್ ಸದಸ್ಯರಾಗಿರುವ ಶರ್ಮಾ 2015 ರಲ್ಲಿ ಬಿಜೆಪಿ ಸೇರಿದರು ಮತ್ತು ಮೇ 2021 ರಲ್ಲಿ ಅಸ್ಸಾಂನ 15 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಭೂಪೇಂದ್ರ ಪಟೇಲ:
ನಾಲ್ಕನೇ ಸ್ಥಾನವನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ ಅವರು ಪಡೆದುಕೊಂಡಿದ್ದಾರೆ. ಅವರು ಶೇಕಡಾ 42.6%ರ ಜನಪ್ರಿಯತೆ ಪಡೆದಿದ್ದಾರೆ. ಅವರು ಗುಜರಾತದ 17ನೇ ಮುಖ್ಯಮಂತ್ರಿಯಾಗಿ ಸೆಪ್ಟೆಂಬರ್ 2021 ರಲ್ಲಿ ಅಧಿಕಾರ ವಹಿಸಿಕೊಂಡರು.
ಮಾಣಿಕ್ ಸಹಾ:
ತ್ರಿಪುರಾದ ಮಾಣಿಕ್ ಸಹಾ ಅವರು 41.4% ಜನಪ್ರಿಯತೆಯೊಂದಿಗೆ ಸಮೀಕ್ಷೆಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2016 ರಲ್ಲಿ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ, ಸಹಾ ಅವರು ಮೇ 2022 ರಲ್ಲಿ ತ್ರಿಪುರಾದ ಮುಖ್ಯಮಂತ್ರಿಯಾದರು. 2023ರಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡರು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ...!

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement