ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸಿಎ, ಐಬಿಪಿಎಸ್, ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ

ಕುಮಟಾ: ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಸಮಯದ ಸದುಪಯೋಗದ ಅರಿವಿರಬೇಕು. ಯಾವ ಶಿಕ್ಷಣ ಸಂಸ್ಥೆಗಳೂ ಉದ್ಯೋಗ ಭರವಸೆ ನೀಡ ಬಾರದು, ಬದುಕುವ ದಾರಿ ತೋರಿಸಬೇಕು ಎಂದು ಉಡುಪಿಯ ತ್ರಿಷಾ ಸಂಸ್ಥೆಯ ಸಿಇಒ ಗೋಪಾಲಕೃಷ್ಣ ಭಟ್ಟ ಹೇಳಿದರು.
ಅವರು ನಗರದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರಂಭವಾದ ಸಿಎ, ಐಬಿಪಿಎಸ್ ಮತ್ತು ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ಉತ್ತರಕನ್ನಡದವರು ಬುದ್ಧಿವಂತರು. ಆದರೆ ವಿದ್ಯಾರ್ಥಿಗಳು ಸಮಯದ ಪ್ರಜ್ಞೆ ಬೆಳೆಸಿಕೊಳ್ಳದೆ ಹಿಂದೆ ಬೀಳುತ್ತಾರೆ. ಶೇ.೧೦ ರಷ್ಟು ಜನರು ಗುರಿ ಇಟ್ಟುಕೊಂಡು ಬದುಕುತ್ತಾರೆ. ಗುರಿ ಮತ್ತು ಆತ್ಮ ವಿಶ್ವಾಸವಿಶ್ವಾಸದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಲು ರ‍್ಯಾಂಕ್ ಬರಬೇಕೆಂದಿಲ್ಲ. ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೂ ತರಬೇತಿ ಪಡೆದಲ್ಲಿ ಅದ್ಭುತ ಸಾಧನೆ ಮಾಡುತ್ತಾರೆ. ಗುರಿ ಮುಟ್ಟುವ ಛಲದಿಂದ ಧೀರೂಬಾಯಿ ಅಂಬಾನಿಯಂತವರು ಜಾಗತಿಕವಾಗಿ ಮನೆಮಾತಾದರು ಎಂದು ಅನೇಕ ಉದಾಹರಣೆ ಮೂಲಕ ವಿಶ್ಲೇಷಿಸಿದರು. ವಾಣಿಜ್ಯ ವಿಷಯದೊಂದಿಗೆ ಸಿಎ ಮಾಡುವ ಅವಕಾಶವಿದೆ. ಸಮಯದ ಬಳಕೆ ವಿದ್ಯಾರ್ಥಿಗಳ ಕೈಯಲ್ಲಿದೆ. ಬಾಳಿಗಾ ಕಾಲೇಜಿನಲ್ಲಿ ಆರಂಭವಾದ ತರಬೇತಿಯ ಅವಕಾಶವನ್ನು ಕೌಶಲ್ಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಡಾ.ಎ.ವಿ.ಬಾಳಿಗಾ ವಾಣಿಜ್ಯ ಕಾಲೇಜ್‌ ಪ್ರಾಚಾರ್ಯ ಎಸ್.ವಿ.ಶೇಣ್ವಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಆರಂಭಿಸಿದ್ದೇವೆ. ಬಾಳಿಗಾ ಕಾಲೇಜಿನ ಇತಿಹಾಸದಲ್ಲಿ ಈ ಪ್ರಯತ್ನ ಇದೇ ಪ್ರಥಮವಾಗಿದೆ. ಈ ಹಿಂದೆ ವಿದ್ಯಾರ್ಥಿಗಳು ತರಬೇತಿಗಾಗಿ ದೂರದ ಪಟ್ಟಣಕ್ಕೆ ಹೋಗಬೇಕಿತ್ತು. ಈಗ ಅದರ ಬದಲು ನಮ್ಮ ಮಹಾವಿದ್ಯಾಲಯದಲ್ಲಿಯೇ ಕೆನಾರಾ ಕಾಲೇಜು ಆಡಳಿತ ಮಂಡಳಿ ಸಿಎ ತರಬೇತಿ ಫೌಂಡೇಶನ್‌ ಸ್ಥಾಪಿಸಿದೆ. ಈ ಅವಕಾಶವನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ಕಾಲೆಜು ಸಂಸ್ಥೆಯ ಉಪಾಧ್ಯಕ್ಷ ಪುರುಷೋತ್ತಮ ಶ್ಯಾನಭಾಗ, ಕಾರ್ಯದರ್ಶಿ ಹನುಮಂತ ಶ್ಯಾನಭಾಗ,ವಿ ನಾಯಕ ಹೆಗಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಾಸುದೇವ ನಾಯಕ ಬೆಣ್ಣೆ, ಎ.ಪಿ.ಶ್ಯಾನಭಾಗ, ಎನ್,ಆರ್.ಎಸ್.ಅತುಲ್‌ ಕಾಮತ್ ಮುಂತಾದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಪರ್ಧಾತ್ಮಕ ತರಬೇತಿಗೆ ಬೇಕಾದ ಎಲ್ಲ ಸೌಲಭ್ಯ ಹಾಗೂ ಸಹಕಾರ ನೀಡುವುದಾಗಿ ತಿಳಿಸಿದರು
ಕೆನರಾ ಕಾಲೇಜ್‌ ಸೊಸೈಟಿ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ್ ಸ್ವಾಗತಿಸಿದರು. ಸಂತೋಷ ಶ್ಯಾನಭಾಗ ವಂದಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement