ಸಿಡಿ ಪ್ರಕರಣ ತನಿಖೆ :ಎಸ್‌ಐಟಿಗೆ ಪೂರ್ಣ ಸ್ವಾತಂತ್ರ್ಯ, ಸಮಯ ಮಿತಿ ಇಲ್ಲ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಹಿಂದೆ ಷಡ್ಯಂತ್ರವಿದೆ ಎಂದು ಪತ್ರ ಬರೆದಿದ್ದರು. ಹೀಗಾಗಿ ಎಸ್ಐಟಿ ತನಿಖೆಗೆ ಕೊಟ್ಟಿದ್ದೇವೆ. ಆದರೆ ತನಿಖೆಗೆ ಸಮಯ ನಿಗದಿ ಮಾಡಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ ಎಂದು ಶೀಘ್ರವಾಗಿ ವರದಿ ಕೊಡಿ ಎಂದು ಹೇಳಿದ್ದೇವೆ. ಎಸ್ಐಟಿಯವರು ಸಂಪೂರ್ಣ ತನಿಖೆ ನಡೆಸುತ್ತಾರೆ. ಪೊಲೀಸರಿಗೆ ಈ ವಿಷಯದಲ್ಲಿ ಪೂರ್ಣ ಸ್ವಾಂತ್ರ್ಯ ನೀಡಲಾಗಿದೆ. ಕೊಟ್ಟಿದ್ದೇವೆ ಕಬ್ಬನ್ ಪಾರ್ಕ್ ಪೊಲೀಸ್‌ ಟಾನೆಯಲ್ಲಿ ನೀಡಿದ ಬಗ್ಗೆ ಹಾಗೂ ಅದನ್ನು ವಾಪಸ್‌ ಪಡೆದ ಬಗ್ಗೆಯೂ ಎಸ್ ಐಟಿ ತನಿಖೆ ನಡೆಸಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷ ಡ.ಕೆ.ಶಿವಕುಮಾರ ಅವರು ನಕಲಿ ಸಿಡಿಯಾದರೆ ತನಿಖೆ ಯಾತಕ್ಕೆ ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಸಿಡಿ ನಕಲಿಯೋ , ಅಸಲಿಯೋ, ನಕಲಿಯಾದರೆ ಮಾಡಿದವರು ಯಾರೂ..? ಯಾವ ಕಾರಣಕ್ಕಾಗಿ ಮಾಡಲಾಯಿತು? ಇದರ ಹಿನ್ನೆಲೆಯಲ್ಲಿ ಇದ್ದವರು ಯಾರು ಎಲ್ಲೆಲ್ಲಿ ಸಿಡಿ ಯತಾರಾಗಿದೆ ಎಂಬುದರ ಕುರಿತೂ ತನಿಖೆಯಾಗಬೇಡವೇ. ಹೀಗಾಗಿ
ಎಲ್ಲಾ ಆಯಾಮದಲ್ಲಿಯೂ ಎಂದು ತನಿಖೆ ನಡೆಯಲಿದೆ ಮಾರ್ಮಿಕವಾಗಿ ಹೇಳಿದರು.
ರಮೇಶ ಜಾರಕಿಹೊಳಿ ಬರೆದ ಪತ್ರದ ಮೇಲೆ ಪ್ರಾಥಮಿಕ ತನಿಖೆ ನಡೆಯಲಿದೆ. ತನಿಖೆ ಸಂದರ್ಭದಲ್ಲಿ ಈ ಪ್ರಕರಣಕ್ಕೆ ಎಫ್‌ಐಆರ್‌ ಅವಶ್ಯಕತೆಯಿದೆ ಎಂದಾದರೆ ಎಫ್ ಐಆರ್ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement