ತುಮಕೂರು :ಎಲ್ಲೆಡೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಈ ಸಂಭ್ರಮದ ಮಧ್ಯೆಯೇ ತುಮಕೂರಿನಲ್ಲಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಕಟೌಟ್ಗೆ ಅಭಿಷೇಕ ಮಾಡಿದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಕೆಲ ಅಭಿಮಾನಿಗಳು ಅವರ ಕಟೌಟ್‌ಗೆ ಮದ್ಯಾಭಿಷೇಕ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಅವರ ಅಭಿಮಾನಿ ವಲಯದಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ತುಮಕೂರು ನಗರದ ತ್ರಿಮೂರ್ತಿ ಚಿತ್ರಮಂದಿರದಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಟೌಟ್ ಗೆ ದರ್ಶನ್ ಅಭಿಮಾನಿಗಳು ಮದ್ಯದ ಅಭಿಷೇಕ ಮಾಡಿದ ವರ್ತನೆಗೆ ಸಾರ್ವಜನಿಕರು ಆಕ್ರೋಶ ವಕ್ತಪಡಿಸಿದ್ದಾರೆ.
ದರ್ಶನ್ ಅಭಿಮಾನಿಗಳು ತ್ರಿಮೂರ್ತಿ ಚಿತ್ರಮಂದಿರದ ಹತ್ತಿರ ಹಾಕಲಾಗಿದ್ದ ದರ್ಶನ್ ಅವರ ಬೃಹತ್ ಕಟೌಟ್ ಗೆ ಮದ್ಯದ ಅಭಿಷೇಕ ಮಾಡಿದ್ದಾರೆ. ಅಲ್ಲದೆ ತಾವೂ ಮದ್ಯದ ಅಮಲಿನಲ್ಲಿ ಚಿತ್ರಮಂದಿರದ ಆವರಣದಲ್ಲೇ ಕುಣಿದು ಕುಪ್ಪಳಿಸಿದ್ದಾರೆ ಎಂದು ವರದಿಯಾಗಿದೆ. ನಟ ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆಯಿಂದಾಗಿ ಚಿತ್ರಮಂದಿರಕ್ಕೆ ಆಗಮಿಸಿದ ಸಾರ್ವಜನಿಕರು ಕೂಡ ಕಿರಿಕಿರಿ ಅನುಭವಿಸುವಂತಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ