ಸಿಡಿ ಹಗರಣ: ಈಗ ಮತ್ತೊಂದು ಸಿಡಿ ಬಿಡುಗಡೆ ಮಾಡಿದ ಯುವತಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯದ್ದು ಎನ್ನಲಾದ ಮತ್ತೊಂದು ವಿಡಿಯೋ ಹೊರಗೆ ಬಂದಿದೆ.
ನನ್ನ ತಂದೆ-ತಾಯಿ ಸ್ವ ಇಚ್ಛೆಯಿಂದ ಪೊಲೀಸ್ ದೂರು ನೀಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ಸ್ವಇಚ್ಛೆಯಿಂದ ದೂರು ನೀಡಲು ಸಾಧ್ಯವೇ ಇಲ್ಲ ಎಂದು ಅವಳಿ ಈ ವಿಡೊಯೋದಲ್ಲಿ ಹೇಳಿದ್ದಾಳೆ.
ನನಗೆ ನನ್ನ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸುರಕ್ಷಿತವಾಗಿದ್ದಾರೆ ಎಂದು ನನಗೆ ಗೊತ್ತಾದ ತಕ್ಷಣ ನಾನು ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಮದು ವಿಡೊಯೊದಲ್ಲಿ ಹೇಳಿದ್ದಾಳೆ.
ಜೊತೆಗೆ ನನ್ನ ತಂದೆ-ತಾಯಿಯವರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ರಮೇಶ ಕುಮಾರ್ ಹಾಗೂ ಮಹಿಳೆ ಸಂಘಟನೆಗಳ ಬಳಿ ಈ ಯುವತಿ ವಿನಂತಿಸಿಕೊಂಡಿದ್ದಾಳೆ.
ಜೊತೆಗೆ ಪೊಲೀಸರ ಮೇಲೆಯೂ ಈ ವಿಡೊಯೊದಲ್ಲಿ ಆರೋಪ ಹೊರಿಸಿದ್ದಾಳೆ. ನಾನು ಮಾ.12ರಂದು ಪೊಲೀಸ್ ಕಮಿಷನರ್ ಕಚೇರಿಗೆ ವಿಡಿಯೋ ಕಳುಹಿಸಿದ್ದೆ. ಅದನ್ನು ಮಾ.13ರಂದು ರಮೇಶ ಜಾರಕಿಹೊಳಿ ತರಾತುರಿಯಲ್ಲಿ ದೂರು ಕೊಟ್ಟ ಅರ್ಧ ಗಂಟೆ ನಂತರ ಹೊರ ಬಿಡಲಾಗಿದೆ ಎಂದು ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾಳೆ.
ಎಸ್ಐಟಿಯವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಹೇಳಿರುವ ಅವಳು ತನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾಳೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement