ಅಯೋಧ್ಯಾ ರಾಮಮಂದಿರ ಸಂಕೀರ್ಣ ವಿಸ್ತರಣೆಗೆ ಹೆಚ್ಚುವರಿ ಭೂಮಿ ಖರೀದಿ

ಅಯೋಧ್ಯೆ(ಉತ್ತರ ಪ್ರದೇಶ): ಪೂರ್ವ ಯೋಜನೆಯಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸುವ ಕಾರ್ಯ ಆರಂಭವಾಗಿದೆ.
ಇದರ ಅಂಗವಾಇಗಿ ಪ್ರಥಮ ಹೆಜ್ಜೆಯಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮಜನ್ಮಭೂಮಿ ಪಕ್ಕದಲ್ಲಿರುವ 7,285 ಚದರ ಅಡಿಯಷ್ಟು ಭೂಮಿ ಖರೀದಿ ಮಾಡಿದೆ. ರಾಮಮಂದಿರ ದೇವಾಲಯ ಸಂಕೀರ್ಣವನ್ನು 70 ಎಕರೆ ಪ್ರದೇಶದಿಂದ 107 ಎಕರೆ ಪ್ರದೇಶಕ್ಕೆ ವಿಸ್ತರಿಸಬೇಕೆಂಬ ಯೋಜನೆಗೆ ಅನುಗುಣವಾಗಿ ಅಯೋಧ್ಯೆಯ ಆಶರ್ಫಿ ಭವನದ ಪಕ್ಕದಲ್ಲಿದ್ದ 7,825 ಚದರ ಅಡಿ ಭೂಮಿಯನ್ನು ಖರೀದಿಸಲಾಗಿದೆ ಎಂದು ಟ್ರಸ್ಟಿಯೊಬ್ಬರು ತಿಳಿಸಿದ್ದಾರೆ.
ರಾಮಮಂದಿರಕ್ಕೆ ಹೆಚ್ಚಿನ ಸ್ಥಳ ಬೇಕಾಗಿರುವುದರಿಂದ, ನಾವು ಭೂಮಿ ಖರೀದಿಸಿದ್ದಾಗಿ’ ಟ್ರಸ್ಟಿ ಅನಿಲ್‌ ಮಿಶ್ರಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಜಮೀನಿನ ಮಾಲೀಕ ದೀಪ್ ನರೈನ್ ಅವರು ಭೂಮಿಯನ್ನು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೆಸರಿಗೆ ಫೆಬ್ರುವರಿ 20ರಂದು ನೋಂದಣೀ ಮಾಡಿಕೊಟ್ಟಿದ್ದಾರೆ. ಟ್ರಸ್ಟಿಗಳಾದ ಅನಿಲ್ ಮಿಶ್ರಾ ಮತ್ತು ಶಾಸಕ ಇಂದ್ರ ಪ್ರತಾಪ್ ತಿವಾರಿ ಅವರು ಸಾಕ್ಷಿಯಾಗಿ ಸಹಿ ಹಾಕಿದ್ದಾರೆ. ಫೈಜಾಬಾದ್‌ನ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಜಮೀನು ನೋಂದಣಿ ಪ್ರಕ್ರಿಯೆ ನಡೆದಿದೆ.
ಈ ಯೋಜನೆಯನ್ನು 107 ಎಕರೆಗಳಿಗೆ ವಿಸ್ತರಿಸಲು ಟ್ರಸ್ಟ್ ಬಯಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

1 / 5. 1

ಶೇರ್ ಮಾಡಿ :

  1. Geek

    ರಾಮಮಂದಿರವನ್ನೇ ದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಾ ಮೋದಿ ಸರಕಾರದವರು ತೀವ್ರ ಬಂಡವಾಳಶಾಹಿ ನೀತಿಯ ಅಡಿಯಲ್ಲಿ ಸರಕಾರಿ ಸ್ವತ್ತುಗಳನ್ನು ವಿದೇಶಿ ಕಂಪನಿಗಳಿಗೆ ಮಾರಲು ಸಿದ್ದವಾಗಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement