ದಯವಿಟ್ಟು ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ

ಬೆಂಗಳೂರು: ದಯವಿಟ್ಟು ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಧ್ಯಮದವರಿಗೆ ಮನವಿ ಮಾಡಿದರು.
ಸಿಡಿ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ  ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮನವಿ ಮಾಡಿಕೊಂಡಿದ್ದಾರೆ. ​ ಸಿಡಿ ಪ್ರಕರಣ ಸಂಬಂಧ ನೀಡಿದ್ದ ದೂರನ್ನು ದಿನೇಶ್​ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ. ಹೀಗಾಗಿ ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ ಎಂದು ಕೇಳಿಕೊಂಡರು.
ತಮ್ಮ ಸಹೋದರನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂಬುದು ಈ ಸಿಡಿ ಉದ್ದೇಶ. ಹೀಗಾಗಿ ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸುತ್ತೇನೆ. ನಮಗೆ ತಿಳಿದಿರುವ ಮೂಲಗಳ ಪ್ರಕಾರ ಈ ಸಿಡಿಗಾಗಿ ಯುವತಿಗೆ 50 ಲಕ್ಷ ರೂ. ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಜೊತೆಗೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಈ ಎಲ್ಲದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ದಿನೇಶ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಹೋದ ಮಾನ ತನಿಖೆಯಿಂದ ಮಾತ್ರ ವಾಪಸ್ ಬರುತ್ತದೆ. ಮುಂದಿನ ಹೋರಾಟದ ಕುರಿತು ಕಾನೂನು ಪರಿಣತರ ಜತೆ ಚರ್ಚಿಸಿ ಮುಂದುವರಿಯುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪ್ರಮುಖ ಸುದ್ದಿ :-   ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು : ಮಂಟಪದಲ್ಲೇ ಮುರಿದು ಬಿತ್ತು ಮದುವೆ…!

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement