ಕೇವಲ ಎರಡು ತಾಸಿನಲ್ಲೇ 5.50 ಕ್ವಿಂಟಲ್ ಜೋಳದ ಬಂಡಿ 12 ಕಿಮೀ ಎಳೆದು 5 ಗ್ರಾಂ ಬಂಗಾರ ಗೆದ್ದ ಯುವಕ..!

ಯಾದಗಿರಿ : ನಾಗರ ಪಂಚಮಿಯಂದು ಏರ್ಪಡಿಸಿದ್ದ ಶರತ್ತಿನ ಪಂದ್ಯದಲ್ಲಿ ಶಹಾಪುರ ತಾಲೂಕಿನ ಗೋಗಿಪೇಠದ ಶ್ರೀಕಾಂತ ಬದ್ದೇಳ್ಳಿ ಎಂಬ ಯುವಕ ಸಾಹಸ ಪ್ರದರ್ಶನ ಮಾಡಿ ಶರತ್ತಿನ ಪಂದ್ಯದಲ್ಲಿ ಗೆದ್ದಿದ್ದಾನೆ.
ತಮ್ಮ ಗ್ರಾಮ ಗೋಗಿ ಪೇಠದಿಂದ ಎತ್ತಿನ ಬಂಡಿಯಲ್ಲಿ ಐದುವರೆ ಕ್ವಿಂಟಲ್ ಜೋಳ ತುಂಬಿದ ಚೀಲಗಳನ್ನು ಹಾಕಿಕೊಂಡು 12 ಕಿಮೀ ಗಳ ದೂರದ ಶಹಾಪುರ ನಗರ ತಲುಪಿ ಸೈ ಎನಿಸಿಕೊಂಡಿದ್ದಾರೆ.
ನಾಗರ ಪಂಚಮಿ ಹಬ್ಬದ ಪ್ರಯುಕ್ತ ಯಾದವ ಸಮಾಜದ ಉತ್ಸಾಹಿ ತರುಣರು ಗ್ರಾಮದ ಹನುಮಾನ ಮಂದಿರದಿಂದ ಐದೂವರೆ ಕ್ವಿಂಟಲ್ ಜೋಳ ತುಂಬಿದ ಚೀಲ ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಒಂಟಿಯಾಗಿ ಎಳೆದುಕೊಂಡು ಶಹಾಪುರ ನಗರದ ಶ್ರೀ ಹನುಮಾನ ಮಂದಿರಕ್ಕೆ ತಲುಪಿಸಬೇಕು ಎಂಬ ಶರತ್ತಿನ ಪಂದ್ಯ ಏರ್ಪಡಿಸಿದ್ದರು. ಮಧ್ಯೆ ವಿರಾಮ ಪಡೆಯಲು ಐದು ಸಾರಿ ಅವಕಾಶ ಪಡೆಯಬಹುದು ಎಂಬುದು ಈ ಪಂದ್ಯದ ನಿಯಮ., ಈ ಪಂದ್ಯದಲ್ಲಿ ಗೆದ್ದವರಿಗೆ ಒಂದು 5 ಗ್ರಾಂ ಬಂಗಾರ ಕೊಡಲಾಗುವುದು ಎಂದು ತಿಳಿಸಲಾಗಿತ್ತು.
ಇದನ್ನು ಸವಾಲಾಗಿ ಸ್ವೀಕರಿಸಿದ ಯುವಕ ಶ್ರೀಕಾಂತ ಬದ್ದೇಳ್ಳಿ ಗೋಗಿ ಪೇಠ ಗ್ರಾಮದ ಹನುಮಾನ ಮಂದಿರದಿಂದ ಬೆಳಗ್ಗೆ 7 ಗಂಟೆಗೆ ಐದೂವರೆ ಕ್ವಿಂಟಲ್ ಜೋಳ ತುಂಬಿದ ಎತ್ತಿನಬಂಡಿ ಎಳೆಯಲು ಪ್ರಾರಂಭಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ಶಹಾಪುರ ನಗರದ ಹನುಮಾನ ಮಂದಿರಕ್ಕೆ ಕೇವಲ ಎರಡು ತಾಸಿನಲ್ಲಿ ಅಂದರೆ ಬೆಳಿಗ್ಗೆ 9 ಗಂಟೆಗೆ ತಲುಪಿ ಗೆಲುವಿನ ನಗೆಬೀರಿದರು. ಯುವಕನ ಸಾಮರ್ಥ್ಯಕ್ಕೆ ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯದ ಷರತ್ತಿನಂತೆ ಉಡುಗೊರೆಯನ್ನು ನೀಡಿ ಶ್ರೀಕಾಂತನಿಗೆ ಸನ್ಮಾನಿಸಲಾಯಿತು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement