ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದು ರೆಕ್ಕೆ ಮೇಲೆ ಓಡಾಡಿದ ಪ್ರಯಾಣಿಕ…!

ಮೆಕ್ಸಿಕೋ ಸಿಟಿ : ವಿಮಾನಗಳಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅವರ ಮೇಲೆ ಹಲ್ಲೆ ನಡೆಸುವುದು, ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುವುದು, ಕುಡಿದ ಮತ್ತಿನಲ್ಲಿ ಗಲಾಟೆ ಮಾಡುವುದು ಸೇರಿದಂತೆ ಹತ್ತು ಹಲವು ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ.
ಈಗ ಮತ್ತೊಂದು ಪ್ರಕರಣ ಪ್ರಯಾಣಿಕರನ್ನು ದಂಗಾಗಿಸಿದೆ. ಮೆಕ್ಸಿಕೋದಲ್ಲಿ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು, ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾನೆ…! ಈತನ ವರ್ತನೆ ಕಂಡು ವಿಮಾನದ ಪ್ರಯಾಣಿಕರು ಹಾಗೂ ಸಿಬ್ಬಂದಿ ದಂಗಾಗಿದ್ದಾರೆ.

ಮೆಕ್ಸಿಕೋ ಸಿಟಿ ವಿಮಾನ ನಿಲ್ದಾಣದಿಂದ ಏರೋಮೆಕ್ಸಿಕೋ ವಿಮಾನವು ಜನವರಿ 25ರಂದು ಬೆಳಗ್ಗೆ 8: 50ಕ್ಕೆ ಹಾರಾಟ ಆರಂಭಿಸಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ವಿಮಾನವು ಮಧ್ಯಾಹ್ನ 2 ಗಂಟೆಯಾದರೂ ಹಾರಾಟ ಆರಂಭಿಸಿರಲಿಲ್ಲ. ಇದರಿಂದ ಹತಾಶೆಗೊಂಡ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರ ತೆಗೆದಿದ್ದಾನೆ. ಅಲ್ಲದೆ, ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾನೆ. ಪ್ರಯಾಣಿಕನ ವರ್ತನೆಯಿಂದ ವಿಮಾನದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. ಬಳಿಕ ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣವು ಹೇಳಿಕೆಯಲ್ಲಿ ಗ್ವಾಟೆಮಾಲಾಗೆ ಹೋಗುವ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನ ನಿಂತಿದ್ದಾಗ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದು, ರೆಕ್ಕೆಯ ಮೇಲೆ ಓಡಾಡಿದ್ದಾನೆ. ಹಾಗೂ ಪುನಃ ಒಳಗೆ ಬಂದಿದ್ದಾನೆ. ವಿಮಾನ ಅಥವಾ ಯಾರಿಗೂ ತೊಂದರೆಯಾಗಿಲ್ಲ ಎಂದು ಹೇಳಿದೆ.

https://twitter.com/CapiSuperGirl/status/1751301195023392808?ref_src=twsrc%5Etfw%7Ctwcamp%5Etweetembed%7Ctwterm%5E1751301195023392808%7Ctwgr%5E94841e6580dc81f3012861cbd2ab4b5e61833127%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fpassenger-in-mexico-opens-emergency-exit-walks-on-planes-wing-after-flight-delay-4951212

ಅಂತಾರಾಷ್ಟ್ರೀಯ ಭದ್ರತಾ ನಿಯಮಗಳಿಗೆ ಅನುಸಾರವಾಗಿ, ಈ ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಆದಾಗ್ಯೂ, ವ್ಯಕ್ತಿಯನ್ನು ಅಧಿಕಾರಿಗಳಿಗೆ ಒಪ್ಪಿಸುವ ವಿಮಾನ ನಿಲ್ದಾಣದ ನಿರ್ಧಾರವನ್ನು ವಿರೋಧಿಸಿ ಡಜನ್ಗಟ್ಟಲೆ ಪ್ರಯಾಣಿಕರು ಲಿಖಿತ ಹೇಳಿಕೆಗೆ ಸಹಿ ಹಾಕಿದರು. ವಿಮಾನದಲ್ಲಿದ್ದ ಕನಿಷ್ಠ 77 ಪ್ರಯಾಣಿಕರಿದ್ದು, ಪ್ರಯಾಣಿಕನನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಹೇಳಿಕೆಗೆ ಸಹಿ ಹಾಕಿದರು. ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಕ್ತಿ ಕಸ್ಟಡಿಯಲ್ಲಿ ಉಳಿದಿದ್ದಾನೆಯೇ ಅಥವಾ ಆರೋಪಗಳನ್ನು ಎದುರಿಸುತ್ತಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement