ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ : ಕೋಲ್ಕತ್ತಾ ಪೊಲೀಸ್‌ ಆಯುಕ್ತ, ಮಾಜಿ ಪ್ರಾಂಶುಪಾಲರ ‘ಕಸ್ಟಡಿ ವಿಚಾರಣೆ’ಗೆ ಟಿಎಂಸಿ ಸಂಸದ ಒತ್ತಾಯ

ಕೋಲ್ಕತ್ತಾ : ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ಅವರನ್ನು ಸಿಬಿಐ “ಕಸ್ಟಡಿ ವಿಚಾರಣೆ”ಗೆ ಒಳಪಡಿಸಬೇಕು ಎಂದು ಆಡಳಿತಾರೂಢ ಟಿಎಂಸಿ ಸಂಸದ ಸುಖೇಂದು ಶೇಖರ ರೇ ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಸಿಬಿಐ, ವೈದ್ಯಕೀಯ ಸಂಸ್ಥೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನೂ ಕಸ್ಟಡಿ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಸಿಬಿಐ ನ್ಯಾಯಯುತವಾಗಿರಬೇಕು ಮತ್ತು ಪ್ರಕರಣದ ಪ್ರಮುಖ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ರೇ ಹೇಳಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಮೊದಲು 31 ವರ್ಷದ ವೈದ್ಯರ ಸಾವನ್ನು ಆತ್ಮಹತ್ಯೆ ಎಂದು ಏಕೆ ಕರೆದರು..? ಶವ ಪತ್ತೆಯಾದ ಸೆಮಿನಾರ್ ಹಾಲ್ ಗೋಡೆಯನ್ನು ಏಕೆ ಕೆಡವಲಾಯಿತು ..? ಮತ್ತು ಪ್ರಮುಖ ಆರೋಪಿ, ನಾಗರಿಕ ಪೊಲೀಸ್ ಸ್ವಯಂಸೇವಕ ಸಂಜಯ ರಾಯ್, ಇತರರನ್ನು ಬೆಂಬಲಿಸದವರು ಯಾರು..? 3 ದಿನಗಳ ನಂತರ ಸ್ನಿಫರ್ ಡಾಗ್ ಅನ್ನು ಏಕೆ ಬಳಸಿದರು..? ಇತ್ಯಾದಿ ಪ್ರಮುಖ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕೇಂದ್ರೀಯ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಆಗಸ್ಟ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರೇ ಪತ್ರ ಬರೆದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

https://twitter.com/Sukhendusekhar/status/1824881368654111140?ref_src=twsrc%5Etfw%7Ctwcamp%5Etweetembed%7Ctwterm%5E1824881368654111140%7Ctwgr%5E3abfacda8cc5f237148ce03e27b04682ff532d92%7Ctwcon%5Es1_&ref_url=https%3A%2F%2Fwww.news18.com%2Fpolitics%2Fsukhendu-sekhar-ray-cbi-kolkata-police-commissioner-custodial-interrogation-rg-kar-doctor-rape-murder-make-them-speak-9019025.html

ತನಗೂ ಒಬ್ಬ ಮಗಳು ಮತ್ತು ಮೊಮ್ಮಗಳು ಇದ್ದಾರೆ ಎಂದು ಹೇಳಿ ಆಗಸ್ಟ್ 14 ರಂದು ಮಧ್ಯರಾತ್ರಿ ಪ್ರತಿಭಟನೆಗೆ ಬೆಂಬಲಿಸಿ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಅವರು ಧರಣಿ ಕುಳಿತಿದ್ದರು.
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಆಶ್ರಯಧಾಮಗಳು, ಶಾಪಿಂಗ್ ಮಾಲ್‌ಗಳು, ಸಾರ್ವಜನಿಕ ಸಾರಿಗೆ, ಟ್ರಾಮ್‌ಗಳು, ಸರ್ಕಾರಿ-ಅರೆ ಸರ್ಕಾರ, ಖಾಸಗಿ ಕೆಲಸದ ಸ್ಥಳಗಳು ಸೇರಿದಂತೆ ಇತರ ಸಂಸ್ಥೆಳು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕಾಯಿದೆಯು ಜಾರಿ ಮಾಡಬೇಕು ಎಂದು ಎಂದು ಅವರು ಶಾಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಹಾಗೂ ತಮ್ಮ ವೈಯಕ್ತಿಕ ಅಭಿಪ್ರಾಯಗಳಿಗೂ ಅವರ ರಾಜಕೀಯ ಸಂಬಂಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement