ಭಾರತದಲ್ಲಿ 1.72 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು, 1,008 ಸಾವುಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,72,433 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಗುರುವಾರ ತಿಳಿಸಿವೆ.
ಗುರುವಾರ ದಾಖಲಾದ ದೈನಂದಿನ ಸೋಂಕು ಬುಧವಾರ ದಾಖಲಾಗಿದ್ದಕ್ಕಿಂತ 6.8 ಶೇಕಡಾ ಹೆಚ್ಚಾಗಿದೆ. ಭಾರತದಲ್ಲಿ ಒಟ್ಟಾರೆ ಪ್ರಕರಣ ಈಗ 4,18,03,318ಕ್ಕೆ ಹೆಚ್ಚಿದೆ.ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ -19 ನಿಂದ 1,008 ಸಾವುಗಳು ವರದಿಯಾಗಿವೆ, ಇದು ರಾಷ್ಟ್ರವ್ಯಾಪಿ ಸಂಖ್ಯೆಯನ್ನು 4,98,983ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,59,107 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,97,70,414 ಕ್ಕೆ ತಲುಪಿದೆ.ಇದಲ್ಲದೆ, ಭಾರತದ ಚೇತರಿಕೆಯ ದರವು ಈಗ 95.14 ಶೇಕಡಾಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ ದೇಶದ ಸಕ್ರಿಯ ಪ್ರಕರಣ 87,682 ರಷ್ಟು ಕಡಿಮೆಯಾಗಿದೆ ಮತ್ತು ಪ್ರಸ್ತುತ 15,33,921 ರಷ್ಟಿದೆ.
ಗರಿಷ್ಠ ಸಂಖ್ಯೆಯ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಾದ ಕೇರಳದಲ್ಲಿ 52,199 ಪ್ರಕರಣಗಳು, ಕರ್ನಾಟಕದಲ್ಲಿ 20,505 ಪ್ರಕರಣಗಳು, ಮಹಾರಾಷ್ಟ್ರ 18,067 ಪ್ರಕರಣಗಳು, ತಮಿಳುನಾಡು 14,013 ಪ್ರಕರಣಗಳು ಮತ್ತು ಗುಜರಾತ್ 8,934 ಪ್ರಕರಣಗಳು ದಾಖಲಾಗಿವೆ. 65.95%ರಷ್ಟು ಹೊಸ ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾಗಿವೆ, ಕೇರಳ ಮಾತ್ರ 30.27 ರಷ್ಟು ಹೊಸ ಪ್ರಕರಣಗಳಿಗೆ ಕಾರಣವಾಗಿದೆ.
ಏತನ್ಮಧ್ಯೆ, ಭಾರತವು ಇದುವರೆಗೆ ಒಟ್ಟು 1,67,87,93,137 ಕೋವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಿದೆ

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement