ಶಿಕ್ಷೆ ಕೊಟ್ಟ ಮಹಿಳಾ ನ್ಯಾಯಾಧೀಶರ ಹುಡುಕುತ್ತಿದ್ದಾರೆ ಶಿಕ್ಷೆಗೊಳಗಾದ ತಾಲಿಬಾನಿಗಳು..!

ಕಾಬೂಲ್: ತಾಲಿಬಾನಿ ಕ್ರಿಮಿನಲ್‌ಗಳು ತಮಗೆ ಶಿಕ್ಷೆ ಕೊಟ್ಟ ನ್ಯಾಯಾಧೀಶರನ್ನು ಹುಡುಕುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಬೂಲ್‌ನಿಂದ ಓಡಿ ಯುರೋಪ್‌ಗೆ ಓಡಿ ಬಂದು ಜೀವ ಉಳಿಸಿಕೊಂಡಿರುವ ಮಹಿಳಾ ನ್ಯಾಯಾಧೀಶರೊಬ್ಬರು ತಮಗಾದ ಅನುಭವ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ದೇಶದಲ್ಲಿ ಹಲವು ಕೃತ್ಯಗಳನ್ನು ನಡೆಸಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ತಾಲಿಬಾನಿ ಕ್ರಿಮಿನಲ್‌ಗಳು ತಮಗೆ ಶಿಕ್ಷ ಕೊಟ್ಟ ಮಹಿಳಾ ನ್ಯಾಯಾಧೀಶರನ್ನು ಹತ್ಯೆ ಮಾಡಲು ಹುಡುಕುತ್ತಿದ್ದರು ಎನ್ನುವ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.
ನಾಲ್ಕೈದು ತಾಲಿಬಾನಿ ಕ್ರಿಮಿನಲ್‌ಗಳು ಮನೆಯ ಬಳಿ ಬಂದು ಮಹಿಳಾ ನ್ಯಾಯಾಧೀಶರು ಎಲ್ಲಿ ಎಂದು ವಿಚಾರಿಸಿದ್ದರು. ಅಫ್ಘಾನಿಸ್ತಾನದಲ್ಲಿ ಸುಮಾರು 250 ಮಹಿಳಾ ನ್ಯಾಯಾಧೀಶರಿದ್ದಾರೆ. ಇತ್ತೀಚಿನ ವಾರಗಳಲ್ಲಿ ಕೆಲವರು ಪಲಾಯನ ಮಾಡಲು ಸಾಧ್ಯವಾಯಿತು, ಆದರೆ ಹೆಚ್ಚಿನವರು ಹಿಂದುಳಿದಿದ್ದಾರೆ ಮತ್ತು ಇನ್ನೂ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರು ನೆಟ್‌ವರ್ಕ್‌ಗಳನ್ನು ರೂಪಿಸಿಕೊಂಡಿದ್ದು ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದರು.
2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ಸಂದರ್ಭ ಒಸಾಮಾ ಬಿನ್ ಲ್ಯಾಡನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ಸಮರ ಸಾರಿದ್ದ ಅಮೆರಿಕ ಇದೇ ಉದ್ದೇಶದಿಂದ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತ್ತು.
ಆಗ ದೇಶದಲ್ಲಿ ಅಧಿಕಾರ ನಡೆಸಿದ್ದ ತಾಲಿಬಾನ್ ಅಲ್ ಖೈದಾ ನಾಯಕರಿಗೆ ಆಶ್ರಯ ನೀಡಿತ್ತು. ತನ್ನ ದೇಶದಲ್ಲಿ ಮೋಸ್ಟ್ ವಾಂಟೆಡ್ ಉಗ್ರರಿಗೆ ತಾಲಿಬಾನ್ ಆಶ್ರಯ ನೀದಿದ್ದನ್ನು ಸಹಿಸದ ಅಮೆರಿಕ ತಾಲಿಬಾನ್ ಅನ್ನು ಹೊಡೆದೋಡಿಸಿತ್ತು. ಅಲ್ಲದೆ ತನಗೆ ಬೇಕಾದ ಆಫ್ಘನ್ ನಾಯಕರನ್ನು ಒಳಗೊಂಡ ಸರ್ಕಾರವನ್ನು ಪ್ರತಿಷ್ಠಾಪನೆ ಮಾಡಿತ್ತು.
ತಾಲಿಬಾನ್ ಹಾಗೂ ಇತರೆ ಉಗ್ರ ಸಂಘಟನೆಗಳು ದೇಶದಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಹಲವು ಕುಕೃತ್ಯಗಳಲ್ಲಿ ತೊಡಗಿತ್ತು.
ಅಮೆರಿಕ ಕೊನೆಗೂ ಅಫಗಾನಿಸ್ತಾನ ಬಿಡಲು ನಿರ್ಧರಿಸಿತ್ತು. ತಾಲಿಬಾನ್ ಜೊತೆಗೆ ಹಲವು ಸುತ್ತುಗಳ ಶಾಂತಿ ಮಾತುಕತೆ ನಡೆದ ಬಳಿಕ ಅಮೆರಿಕ ದೇಶದಿಂದ ಕಾಲ್ತೆಗೆದರೆ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಷರತ್ತು ವಿಧಿಸಿದರು. ಅದರಂತೆ ತಾನು ದೇಶದಿಂದ ಕಾಲ್ತೆಗೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು.
ಅಮೆರಿಕದ ಕಟ್ಟ ಕಡೆಯ ಸೇನಾ ತುಕಡಿ ದೇಶವನ್ನು ತೊರೆದಿರುವುದನ್ನು ತಾಲಿಬಾನ್ ಸ್ವಾಗತಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ತಾಲಿಬಾನ್ ‘ದೇಶಪ್ರೇಮಿಗಳಿಗೆ, ಮುಜಾಹಿದೀನ್ ಗಳಿಗೆ ಅಭಿನಂದನೆಗಳು. ಇಂದು ಎಲ್ಲಾ ವಿದೇಶಿ ಸೈನಿಕರು ದೇಶದ ಪವಿತ್ರ ನೆಲದಿಂದ ಕಾಲ್ತೆಗೆದಿದ್ದಾರೆ.’ಎಂದು ಬರೆದುಕೊಂಡಿದೆ.
ಅಮೆರಿಕದ ಕಟ್ಟಕಡೆಯ ಸೇನಾ ತುಕಡಿ ಕಾಬೂಲಿನಿಂದ ಸ್ವದೇಶಕ್ಕೆ ವಾಪಸ್ ಆಗುವುದರೊಂದಿಗೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಅಮೆರಿಕ ಸೈನಿಕರ ಸ್ಥಳಾಂತರ ಕಾರ್ಯಾಚರಣೆ ಪೂರ್ತಿಗೊಂಡಿದೆ. ಇದರೊಂದಿಗೆ 20 ವರ್ಷಗಳ ಸುದೀರ್ಘ ಯುದ್ಧಕ್ಕೆ ಅಮೆರಿಕ ತೆರೆ ಎಳೆದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement