ಚರಂಡಿ ಸ್ವಚ್ಛಗೊಳಿಸದ ಕಾರಣ ಕ್ಯಾಮರಾ ಮುಂದೆಯೇ ಗುತ್ತಿಗೆದಾರನ ಮೇಲೆ ಕಸ ಚೆಲ್ಲಿ ಶಿಕ್ಷೆ ವಿಧಿಸಿದ ಶಿವಸೇನಾ ಶಾಸಕ..!

ಮುಂಬೈ: ಶಿವಸೇನೆ ಶಾಸಕರೊಬ್ಬರು ಚರಂಡಿಗಳನ್ನು ಸರಿಯಾಗಿ ಸ್ವಚ್ ಚ್ಛಗೊಳಿಸಲಿಲ್ಲ ಎಂಬ ಆರೋಪದ ಮೇಲೆ ಗುತ್ತಿಗೆದಾರನಿಗೆ ಶಿಕ್ಷೆ” ವಿಧಿಸಲು ಆತನನ್ನು ಮುಂಬೈನ ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು ಮತ್ತು ಜನರು ಆತನ ಮೇಲೆ ಕಸವನ್ನು ಎಸೆಯುವಂತೆ ಸೂಚಿಸಿದರು..!
ವೈರಲ್ ಆದ ಘಟನೆಯ ದೃಶ್ಯಗಳಲ್ಲಿ, ಉತ್ತರ ಮುಂಬೈನ ಕಂಡಿವಲಿ ಕ್ಷೇತ್ರದ ಶಾಸಕ ದಿಲೀಪ್ ಲ್ಯಾಂಡೆ ಮತ್ತು ಇನ್ನೂ ಅನೇಕರು ಗುತ್ತಿಗೆದಾರನನ್ನು ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದಾರೆ. ಗುತ್ತಿಗೆದಾರ ಕುಳಿತುಕೊಳ್ಳುತ್ತಿದ್ದಂತೆ, ಒಬ್ಬ ವ್ಯಕ್ತಿಯು ಅವನ ಬಳಿಗೆ ನಡೆದು ಅತನನ್ನು ತಳ್ಳುತ್ತಾನೆ. ಶಾಸಕರು ಇಬ್ಬರಿಗೆ ಕಸದ ರಾಶಿಯನ್ನು ಎತ್ತುವಂತೆ ಮತ್ತು ಗುತ್ತಿಗೆದಾರರ ಮೇಲೆ ಸುರಿಯುವಂತೆ ನಿರ್ದೇಶಿಸುತ್ತಿದ್ದಾರೆ.

ಚರಂಡಿಗಳನ್ನು ಸ್ವಚ್ಛಗೊಳಿಸಲು ಗುತ್ತಿಗೆದಾರನು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರೀ ಮಾನ್ಸೂನ್ ಮಳೆಯಾಗುತ್ತಿದ್ದಂತೆ, ಚರಂಡಿಗಳು ತುಂಬಿದ್ದರಿಮದ ರಸ್ತೆಯಲ್ಲಿ ನೀರು ಹರಿಯಲು ಕಾರಣವಾಯಿತು.
ನಂತರ ಮಾಧ್ಯಮಗಳೊಂದಿಗೆ ಹಂಚಿಕೊಂಡ ಹೇಳಿಕೆಯಲ್ಲಿ, ಶಾಸಕ ಲ್ಯಾಂಡೆ ಅವರು, ಈ ಪ್ರದೇಶದಲ್ಲಿ ನೀರು ತುಂಬುದನ್ನು ತಡೆಗಟ್ಟುವ ಜವಾಬ್ದಾರಿ ಹೊಂದಿರುವವರು ತಮ್ಮ ಕೆಲಸವನ್ನು ಮಾಡಲು ಅಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿದರು.
ಜನರು ತಮ್ಮ ನಂಬಿಕೆಯನ್ನು ಇಟ್ಟುಕೊಂಡು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದ್ದರಿಂದ ನನ್ನ ಕರ್ತವ್ಯವನ್ನು ಪೂರೈಸಲು ನಾನು ಸ್ಥಳೀಯ ಪಕ್ಷದ ಘಟಕದ ಮುಖ್ಯಸ್ಥ ಮತ್ತು ಶಿವ ಸೈನಿಕರೊಂದಿಗೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಈ ಕೆಲಸವನ್ನು ಗುತ್ತಿಗೆದಾರನಿಗೆ ವಹಿಸಲಾಗಿತ್ತು ಆದರೆ ಅವನು ಅದನ್ನು ಮಾಡಲಿಲ್ಲ. ಅದಕ್ಕಾಗಿಯೇ ನಾನು ಚರಂಡಿಯನ್ನು ಸ್ವಚ್ಛಗೊಳಿಸಲು ಬೀದಿಗೆ ಬಂದಿದ್ದೇನೆ. ಗುತ್ತಿಗೆದಾರನನ್ನು ತನ್ನ ಕೆಲಸ ಮಾಡದ ಕಾರಣ ನಾವು ಇಲ್ಲಿಗೆ ಆತನನ್ನು ಕರೆತಂದಿದ್ದೇವೆ” ಎಂದು ಶಾಸಕರು ಹೇಳಿದರು.
ವಿಶೇಷವೆಂದರೆ, ಶಿವಸೇನೆ ಕಳೆದ 25 ವರ್ಷಗಳಿಂದ ಬೃಹನ್ಮುಂಬೈ ಮಹಾನಗರ ಪಾಲಿಕೆಯನ್ನು ನಿಯಂತ್ರಿಸುತ್ತಿದೆ.

ಪ್ರಮುಖ ಸುದ್ದಿ :-   ಬಾಲಕ ಚಲಾಯಿಸುತ್ತಿದ್ದ ಐಷಾರಾಮಿ ʼಪೋಷೆʼ ಕಾರು ಅಪಘಾತದಲ್ಲಿ ಇಬ್ಬರು ಸಾವು : ತಂದೆಯ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement