ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್ ನಾಯ್ಕ..ಶಿರಸಿ ತಾಲೂಕಿನ ಬೆಂಗಳೆಯವರು..!

ಒಲಿಂಪಿಕ್ಸ್ ( Olympics) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಆದರೆ ಭಾರತ ವೈಯುಕ್ತಿಕ ವಿಭಾಗದಲ್ಲಿ ಇದುವೆರೆಗೆ ಭಾರತ ಗೆದ್ದ ಚಿನ್ನದ ಪದಕ ಸಂಖ್ಯೆ ಕೇವಲ ಒಂದು ಆಗಿತ್ತು.ಅಥ್ಲಟಿಕ್ಸ್‌ನಲ್ಲಿ ಈವರೆಗೂ ಒಂದೇ ಒಂದು ಚಿನ್ನಗೆದ್ದಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಹಾಗೂ ಆ ಮೂಲಕ 124 ವರ್ಷಗಳ ಒಲಿಂಪಿಕ್ಸ್ಇತಿಹಾಸದಲ್ಲಿ ಭಾರತದ ಕಾಯುವಿಕೆಗೆ ಅಂತ್ಯ ಹಾಡಿದ್ದಾರೆ.

.

ನೀರಜ್ ಚೋಪ್ರಾ ಅವರ ಈ ಸಾಧನೆಯಲ್ಲಿ ಕನ್ನಡಿಗ ಪಾಲು ಇದೆ ಎಂಬುದು ಒಂದು ವಿಶೇಷ ಹಾಗೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸೈನ್ಯದಲ್ಲಿ ಸುಭೇದಾರ್ ಆಗಿ ಹಾಗೂ ಜಾವಲಿನ್​ ಥ್ರೋ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ಕಾಶೀನಾಥ ನಾಯ್ಕ ಅವರು ಮೊದಲಿಗೆ ನೀರಜ್‌ ಚೋಪ್ರಾ ಅವರಿಗೆ ತರಬೇತಿ ನೀಡಿದವರು. ಕಾಶೀನಾಥ ಅವರು ವರೆಗೆ ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದರು. ಕಾಶೀನಾಥ ಅವರು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು. ಜಾವೆಲಿನ್‌ ಎಸೆತದ ಕೌಶಲ್ಯಗಳನ್ನು ಹೇಳಿಕೊಟ್ಟಿದ್ದರು. 2015ನಲ್ಲಿ ಕಾಶೀನಾಥ್ ನಾಯ್ಕ್ ಅಡಿಯಲ್ಲಿ ತರಬೇತಿಗೆ ನೀರಜ್​ ಚೋಪ್ರಾ ಸೇರಿಕೊಂಡಿದ್ದರು
ನೀರಜ್ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಾಶೀನಾಥ್ ನಾಯ್ಕ್, ಆರಂಭದಲ್ಲಿ ನೀರಜ್ 70 ಮೀಟರ್​ ಥ್ರೋ ಮಾಡುತ್ತಿದ್ದರು. ಒಳ್ಳೆಯ ಹೈಟ್​ ಇದ್ದರು ಮತ್ತು ಒಳ್ಳೆಯ ಪ್ರತಿಭಾವಂತ ಹುಡುಗ. ಮಂಗಳೂರಲ್ಲಿ ನ್ಯಾಷಿನಲ್​ ಕಾಂಪಿಟೇಷನಲ್ಲಿ ನನ್ನ ಹತ್ತಿರ ದೇವೆಂದ್ರ ಸಿಂಗ್​, ನೀರಜ್​ ತರಬೇತಿ ಪಡೆದಿದ್ರು. ಪೊಲ್ಯಾಂಡ್​ನಲ್ಲಿ ಜ್ಯೂನಿಯರ್​​ ವಿಶ್ವ ಚಾಂಪಿಯನ್​ ಸ್ಪರ್ಧೆ ಇತ್ತು. ಅದರಲ್ಲಿ ನೀರಜ್ 86.48 ಥ್ರೋ ಮಾಡಿ ಜ್ಯೂನಿಯರ್​ ವಿಶ್ವ ದಾಖಲೆ ಮಾಡಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ಯಾರು ಈ ಕಾಶೀನಾಥ ನಾಯ್ಕ..?

ಕಾಶೀನಾಥ ಸಹ ಸ್ವತಃ ಜಾವೆಲಿನ್‌ನಲ್ಲಿ ಅಂತಾರಾಷ್ಟ್ರೀಯವಾಗಿ ಸಾಧನೆ ಮಾಡಿದವರು. ಕಾಶೀನಾಥ ಅವರು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು. ಇದು ಶಿರಸಿ ಹಾಗೂ ಬನವಾಸಿ ರಸ್ತೆಯಲ್ಲಿ ಹೋಗುವಾಗ ಸಿಗುವ ಊರು. ಶಿರಸಿ- ಬನವಾಸಿ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಗೆ ಇರುವ ಪುಟ್ಟ ಹಳ್ಳಿ.
ಕನ್ನಡಿಗ ಕಾಶೀನಾಥ್ ನಾಯ್ಕ್ ಅವರು 2010 ಕಾಮನ್​ವೆಲ್ತ್​ ಗೇಮ್ಸ್​ಕಂಚಿನ ಪದಕ ವಿಜೇತರು ಮತ್ತು ಏಷಿಯನ್​ ಚಾಂಪಿಯನ್​ ಮೆಡಲಿಸ್ಟ್ ಆಗಿದ್ದಾರೆ.
ಕಾಶಿನಾಥ್ ನಾಯಕ್ (ಜನನ 12 ಮೇ 1983) ಒಬ್ಬ ಭಾರತೀಯ ವೃತ್ತಿಪರ ಜಾವೆಲಿನ್ ಎಸೆತಗಾರ. ಅವರು 2010 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 74.29 ಮೀಟರ್ ಎಸೆದು ಕಂಚಿನ ಪದಕ ಗೆದ್ದಿದ್ದರು. ಅವರು ಭಾರತೀಯ ಸೇನೆಯಲ್ಲಿ ನಾಯಕ್ ಸುಬೇದಾರ್ ಹುದ್ದೆಯಲ್ಲಿದ್ದಾರೆ. 2013 ರಿಂದ 2019 ರವೆಗೆ ಇಂಡಿಯನ್ ಟೀಂ ಜಾವೆಲಿನ್‌ ತರಬೇತಿದಾರರಾಗಿದ್ದರು. 2015ರಿಂದ 2017ರ ವರೆಗೆ ನೀರಜ್‌ ಚೋಪ್ರಾ ಅವರಿಗೆ ಜಾವೆಲಿನ್‌ ತರಬೇತಿ ನೀಡಿದ್ದರು. ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿದ್ದಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement