ವಿಡಿಯೋ | ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ಗಳಗಳನೆ ಅತ್ತ ನಟಿ ರಮ್ಯಾ..

ಬೆಂಗಳೂರು: ನಗರದ ಕಗ್ಗದಾಸಪುರದಲ್ಲಿ ಬೀದಿನಾಯಿಗಳ ನಾಪತ್ತೆ ಕುರಿತಂತೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಗರದ ಕಗ್ಗದಾಸಪುರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳನ್ನು ಚೀಲದಲ್ಲಿ ಕಟ್ಟಿ ಅಮಾನವೀಯಾಗಿ ಸಾಗಿಸಿದ್ದ ಘಟನೆ (Brutality on street dogs) ನಡೆದಿತ್ತು. ಈ ಕ್ರಮವನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರಾಣಿಪ್ರಿಯರಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆದಿದ್ದು, ಈ ವೇಳೆ ಶ್ವಾನಗಳ ಮೇಲೆ ದೌರ್ಜನ್ಯವನ್ನು ನೆನೆದು ಕನ್ನಡ ನಟಿ ರಮ್ಯಾ (Actress Ramya) ಕಣ್ಣೀರು ಹಾಕಿದ್ದಾರೆ.
ನಾಯಿಗಳ ಮೇಲಿನ ಕ್ರೌರ್ಯವನ್ನು ನೆನೆದು ಪ್ರತಿಭಟನೆಯಲ್ಲಿ ನಟಿ ರಮ್ಯಾ  ಭಾವುಕರಾಗಿದ್ದಾರೆ. ಅವರು ದುಃಖಿಸುತ್ತ ಮಾತನಾಡಿದ  ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.
ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇಂತಹ ಘಟನೆ ನಡೆದಿದೆ ಎಂದು ತಿಳಿದಾಗ  ತೀವ್ರ ಆಘಾತವಾಯಿತು ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ಅವರು ತೀವ್ರ ವ್ಯಕ್ತಪಡಿಸಿದ್ದಾರೆ. ಸಂಸ್ಥೆಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಾಪತ್ತೆಯಾಗಿರುವ 20ಕ್ಕೂ ಹೆಚ್ಚು ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಈಗಾಗಲೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವು ಸದ್ಯ ಹೈಕೋರ್ಟ್‌ನಲ್ಲಿದೆ. ಏಪ್ರಿಲ್ 16 ರಂದು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement