40 ದಿನದ ಶಿಶುವಿನ ಹೊಟ್ಟೆಯೊಳಗೆ ಭ್ರೂಣ ಪತ್ತೆ…! ಇದು ವೈದ್ಯಕೀಯ ಅಚ್ಚರಿ ಎಂದ ವೈದ್ಯರು

ಮೋತಿಹರಿ (ಬಿಹಾರ): ಅಚ್ಚರಿಯ ವಿದ್ಯಮಾನವೊಂದರಲ್ಲಿ ಬಿಹಾರದ ಮೀತಿಹರಿಯ ರಹ್ಮಾನಿಯಾ ಆಸ್ಪತ್ರೆಯಲ್ಲಿ 40 ದಿನಗಳ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದ್ದು, ಎಲ್ಲರನ್ನೂ ಬೆರಗಾಗಿಸಿದೆ..!. ಈ ವಿಶೇಷ ಪ್ರಕರಣವನ್ನು ಭ್ರೂಣದಲ್ಲಿಯೇ ಭ್ರೂಣ (fetus in fetu) ಎಂದು ವೈದ್ಯರು ಕರೆದಿದ್ದಾರೆ,
ಕೆಲ ದಿನಗಳಿಂದ 40 ದಿನದ ಶಿಶುವಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಮೂತ್ರ ಮಾಡದ ಕಾರಣ ಮಗುವಿನ ಹೊಟ್ಟೆ ಉಬ್ಬಿಕೊಂಡಿತ್ತು. ಪೋಷಕರು ಗಾಬರಿಯಿಂದ ಬಿಹಾರದ ಮೋತಿಹರಿಯ ರಹ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಗುವಿನ ತಪಾಸಣೆ ಬಳಿಕ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಇರುವುದು ಗೊತ್ತಾಗಿದೆ. ಇದರಿಂದಾಗಿ ಹೀಗಾಗುತ್ತಿದೆ ಎಂದು ಹೇಳಿ ಅವರು ಹೇಳಿದ್ದಾರೆ.

ತಾಯಿಯ ಗರ್ಭದಲ್ಲಿ ಮಗುವಿನ ಬೆಳವಣಿಗೆ ಆಗುತ್ತಿದ್ದಂತೆ, ಅದೇ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣದ ಬೆಳವಣಿಗೆ ಆಗಿದೆ. ಇದು ನಿಜಕ್ಕೂ ವೈದ್ಯಕೀಯ ಅಚ್ಚರಿ. ಈ ಅಪರೂಪದ ಸ್ಥಿತಿಗೆ ‘ಭ್ರೂಣದಲ್ಲಿಯೇ ಭ್ರೂಣ (fetus in fetu) ಎಂದು ಕರೆಯಲಾಗುತ್ತದೆ ಎಂದು ಆಸ್ಪತ್ರೆ ವೈದರು ಹೇಳಿದ್ದಾರೆ. ಅಂದರೆ ಅಲ್ಲಿ ತಾಯಿಯ ಗರ್ಭದೊಳಗೆ ಮಗುವಿನ ಬೆಳವಣಿಗೆಯ ಸಮಯದಲ್ಲಿ, ಮಗುವಿನೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತದೆ

ಪ್ರಮುಖ ಸುದ್ದಿ :-   ವೀಡಿಯೊ...| ದುರಂತವಾಗಿ ಮಾರ್ಪಟ್ಟ ರೀಲಿಗಾಗಿ ಮಾಡಿದ ಸಾಹಸ ; 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು...!

10 ಲಕ್ಷದಲ್ಲಿ ಐದು ಪ್ರಕರಣ
ಈ ರೀತಿಯ ಪ್ರಕರಣಗಳು ತುಂಬ ವಿರಳಾತಿವಿರಳ ಎನ್ನುವ ವೈದ್ಯರು ಪ್ರತಿ 10 ಲಕ್ಷ ರೋಗಿಗಳಲ್ಲಿ 5 ಜನರಲ್ಲಿ ಮಾತ್ರ ಕಂಡುಬರುತ್ತದೆ. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಮಗುವಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಅವರು ಹೇಳುತ್ತಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರೆಹ್ಮಾನಿಯಾ ಆಸ್ಪತ್ರೆ ವೈದ್ಯರು, ಮಗುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರತೆಗೆದಿದ್ದಾರೆ. ಅನನ್ಯ ಎಂಬ ಹೆಸರಿನ ಮಗು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ತಜ್ಞರ ಪ್ರಕಾರ, ಭ್ರೂಣದ ಸಂದರ್ಭದಲ್ಲಿ ಭ್ರೂಣದಲ್ಲಿಯೇ ಭ್ರೂಣ ಯಾರಿಗಾದರೂ ಸಂಭವಿಸಬಹುದು ಮತ್ತು ಸಂಪೂರ್ಣವಾಗಿ ಯಾದೃಚ್ಛಿಕವಾಗಿರುತ್ತದೆ. ಇದು ವಿರೂಪಗೊಂಡ ಮತ್ತು ಪರಾವಲಂಬಿ ಭ್ರೂಣವು ಅದರ ಅವಳಿ ದೇಹದಲ್ಲಿ ನೆಲೆಗೊಂಡಿರುವ ಸ್ಥಿತಿಯಾಗಿದೆ. ಅಸಂಗತತೆಯನ್ನು ಮೊದಲು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಮೆಕೆಲ್ ವ್ಯಾಖ್ಯಾನಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement