ಶಿರಸಿ: ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡು, ನಗರದ ಹೊರವಲಯದಲ್ಲಿ, ಫೆಂಟಾಸಿಯಾ, ಗೋಕುಲ್, ಮಾರಿಗೋಲ್ಡ್, ಮತ್ತು ಮ್ಯಾಗ್ನೋಲಿಯಾ ಬಹುಮಹಡಿ ಕಟ್ಟಡ ಸಮುಚ್ಚಯಗಳು, ಹಿರಿಯ ನಾಗರಿಕರಿಗಾಗಿನ ವಾತ್ಸಲ್ಯಮನೆ, ನಿಸರ್ಗ ಚಿಕಿತ್ಸಾಲಯ ಮತ್ತು ಅನೇಕ ಖಾಸಗಿ ಮನೆ ಮತ್ತು ನಿವೇಶನಗಳನ್ನು ಹೊಂದಿರುವ ಡ್ರೀಮ್ ಪಾರ್ಕಿನ ನಿವಾಸಿಗಳ ಸಂಘದವರು ನ. 29ರಂದು ಏರ್ಪಡಿಸಿದ್ದ ದ್ವಿತೀಯ ವಾರ್ಷಿಕೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಇಸಳೂರು ಗ್ರಾಮ ಪಂಚಾಯತ ಸದಸ್ಯರಾದ ನವೀನ ಶೆಟ್ಟಿ ಮಾತನಾಡಿ, ನಿವಾಸಿಗಳ ಒಗ್ಗಟ್ಟು ಹಾಗೂ ಸಂಘಟನೆಯನ್ನು ಶ್ಲಾಘಿಸಿದರು. ವಾರ್ಡಿನ ಅಭಿವೃದ್ಧಿಗೆ ಸದಾ ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಮ್.ಪಿ. ಹೆಗಡೆ ಬಪ್ಪನಳ್ಳಿ ಅವರು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಪಶು ಸಂಗೋಪನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಮಂಜುನಾಥ ಮಾತನಾಡಿ ಹಿರಿಕಿರಿಯರೆಲ್ಲರನ್ನೂ ಸೇರಿ ನಡೆಸಿದ ಆಟೋಟ ಚಟುವಟಿಕೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದ್ದು ಇದನ್ನು ನಿರಂತರ ಮುಂದುವರೆಸಿಕೊಂಡು ಹೋಗಲು ಕರೆ ನೀಡಿದರು.ಅತಿಥಿಗಳಾಗಿ ಅಗಮಿಸಿದ್ದ ಯಕ್ಷಗಾನ-ಭರತನಾಟ್ಯ ಕಲಾವಿದೆ ವಿದುಷಿ ಸೌಮ್ಯ ಪ್ರದೀಪ ಹೆಗಡೆ ಮಾತನಾಡಿ ಜನಪದಕಲೆಯು ನಮ್ಮೆಲ್ಲರ ಬದುಕಿನಲ್ಲಿ ಸದಾ ಪ್ರಭಾವ ಬೀರುವುದಾಗಿ ತಿಳಿಸಿದರು.
ವಿಜಯಲಕ್ಷ್ಮಿ ಸ್ವಾಗತಿಸಿದರು. ಮಂಜುಳಾ ಪಟಗಾರ ವರದಿ ವಾಚಿಸಿದರು. ಗೀತಾ ದಿನೇಶ ಹೆಗಡೆ ವಂದಿಸಿದರು. ನಿವೃತ್ತ ಶಿಕ್ಷಕಿ ಗೌರಿ ಹೆಗಡೆ ನಿರೂಪಿಸಿದರು. ಮಹಿಳೆಯರ “ಕೋಟಿ ಚನ್ನಯ್ಯ“ ನೃತ್ಯರೂಪಕ ಮತ್ತು ಕೋಲಾಟ ಅಂತೆಯೇ ಮಕ್ಕಳ ನೃತ್ಯಗಳು ನಡೆದವು. ಗೌರಿ ಹೆಗಡೆ, ಸುಮಾ ಭಟ್ಟ, ಸುಮಂಗಲಾ ಹೆಗಡೆ, ಸುನಂದಾ ಹೆಗಡೆ, ಗಿರಿಜಾ ಹೆಗಡೆ, ಶ್ರೀದೇವಿ ಹೆಗಡೆ, ಪುಷ್ಪಾ ಭಟ್ಟ, ಲಲಿತಾ ಶರ್ಮಾ, ಗೀತಾ, ಕಲಾ, ಕು. ಲಾವಣ್ಯ, ಕು. ಭಕ್ತಿ ಮುಂತಾದವರು ಪಾಲ್ಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ