ಹೊನ್ನಾವರ: ಮಹಿಳೆಯ ಮೊಬೈಲ್ ಹ್ಯಾಕ್‌ ಮಾಡಿ ಅಶ್ಲೀಲವಾಗಿ ಫೋಟೋ ಎಡಿಟ್‌ ಮಾಡಿದ ಪ್ರಕರಣ, ಚಂದಾವರ ವ್ಯಕ್ತಿ ಬಂಧಿಸಿದ ಹರ್ಯಾಣ ಪೊಲೀಸರು

ಹೊನ್ನಾವರ: ಹರ್ಯಾಣದ ಮಹಿಳೆಯೊಬ್ಬಳ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಅವಳ ಫೋಟೋಗಳನ್ನು ಎಡಿಟ್ ಮಾಡಿ ಅವಳ ಮೊಬೈಲ್ ಸಂಖ್ಯೆಯಿಂದಲೇ ಆಕೆಯ ಸ್ನೇಹಿತರಿಗೆ ಕಳುಹಿಸಿ ಮಾನಹಾನಿ ಮಾಡುತ್ತಿದ್ದ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣಾ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಇಮಾದ್‌ (ಇಮ್ದಾದ್‌)  ಸಾಬ್ ಮುಲ್ಲಾ ಎಂಬ ವ್ಯಕ್ತಿಯನ್ನು ಹರ್ಯಾಣದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಆತನಿಂದ ಮೊಬೈಲ್, ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹರ್ಯಾಣದ ಮಹಿಳೆಯೊಬ್ಬಳ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಅವಳ ಫೋಟೋಗಳನ್ನು ತನಗೆ ಬೇಕಾದಂತೆ ಎಡಿಟ್ ಮಾಡಿ ಆ ಮಹಿಳೆಯ ಮೊಬೈಲ್ ಸಂಖ್ಯೆಯಿಂದಲೇ ಅವಳ ಸ್ನೇಹಿತರಿಗೆ ಕಳುಹಿಸಿ ಮಾನಹಾನಿ ಮಾಡುತ್ತಿದ್ದ ಈ ಹ್ಯಾಕಿಂಗ್ ಪ್ರಕರಣವನ್ನು ಭೇದಿಸಿರುವ ಹರ್ಯಾಣದ ಪೊಲೀಸರು ಅದರ ಮೂಲವನ್ನು ಪತ್ತೆಹಚ್ಚಿ ಹೊನ್ನಾವರ ಪೊಲೀಸರ ಜೊತೆ ಸೇರಿ ಈತನನ್ನು ಬಂಧಿಸಿದ್ದಾರೆ.

ಹರ್ಯಾಣ ಮೂಲದ ಅಮೆರಿಕದ ಮಹಿಳೆಯೊಬ್ಬಳು ಹಾಗೂ ಹರ್ಯಾಣದ ಮಹಿಳೆಯೊಬ್ಬಳ ನಡುವೆ ವೈಯಕ್ತಿಕ ದ್ವೇಷವಿತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ಅಮೆರಿಕದ ಮಹಿಳೆಯು ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿರುವ ಚಂದಾವರದ ಇಮಾದ್ ಸಾಬ್ ಮುಲ್ಲಾನನ್ನು ಪರಿಚಯ ಮಾಡಿಕೊಂಡು ಹರ್ಯಾಣದ ಮಹಿಳೆಯ ಚಾರಿತ್ರ್ಯ ಹರಣ ಮಾಡಲು ಈತನಿಗೆ ಸುಫಾರಿ ಕೊಟ್ಟಿದ್ದಳು. ಈತ ಹರ್ಯಾಣದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಅವಳ ಫೋಟೋ, ವಿಡಿಯೋಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್‌ ಮಾಡಿ ಇತರ ಸ್ನೇಹಿತರಿಗೆ ಅವಳ ನಂಬರಿನಿಂದಲೇ ಕಳುಹಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ತನ್ನ ಮೊಬೈಲಿನಿಂದಲೇ ತನ್ನ ಫೋಟೋಗಳು ಕಳುಹಿಸುವುದು ಗಮನಕ್ಕೆ ಬಂದ ಕೂಡಲೇ ಗಾಬರಿಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ತನಿಖೆ ಆರಂಭಿಸಿದ ಪೊಲೀಸರು ಮೊಬೈಲ್ ಸಂಖ್ಯೆ ಹ್ಯಾಕ್ ಆಗುತ್ತಿರುವುದನ್ನು ಗಮನಿಸಿ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಚಂದಾವರ ಮೂಲದ ಈ ವ್ಯಕ್ತಿಯ ಕೈವಾಡವನ್ನು ಪತ್ತೆಯಾಯಿತು. ಬಳಿಕ ಹರ್ಯಾಣ ಪೊಲೀಸರು ಹೊನ್ನಾವರಕ್ಕೆ ಬಂದಿದ್ದಾರೆ.
ಹೊನ್ನಾವರದ ಸಿಪಿಐ ಶ್ರೀಧರ್ ಅವರಿಗೆ ಹರ್ಯಾಣದ ಪೊಲೀಸರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಸಿಪಿಐ ಶ್ರೀಧರ ಅವರು ಆರೋಪಿಯನ್ನು ವಶಕ್ಕೆ ಪಡೆಯಲು ಹರ್ಯಾಣ ಪೊಲೀಸರಿಗೆ ನೆರವು ನೀಡಿದ್ದಾರೆ. ಆತ ತಪ್ಪಿಸಿಕೊಳ್ಳದಂತೆ ಹಾಗೂ ಮೊಬೈಲ್, ಲ್ಯಾಪ್ ಟಾಪ್‌ನ ಡಾಟಾಗಳನ್ನು ಡಿಲೀಟ್ ಮಾಡದಂತೆ ಗೌಪ್ಯ ಕಾರ್ಯತಂತ್ರವನ್ನು ಸಿಪಿಐ ಶ್ರೀಧರ ಅವರ ನೇತೃತ್ವದಲ್ಲಿ ರೂಪಿಸಿದ ನಂತರ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಯಾಣದಲ್ಲಿ ಇಬ್ಬರು ಮಹಿಳೆಯರ ನಡುವೆ ದ್ವೇಷ ಇತ್ತು. ಇಮಾದ್ ಸಾಬ್ ಮುಲ್ಲಾ ಒಬ್ಬಳು ಮಹಿಳೆಯ ಪರವಾಗಿ ಇನ್ನೊಬ್ಬ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿ ಫೋಟೋಗಳನ್ನು ಪಡೆದು ಮಾನ ಹನನವಾಗುವ ರೀತಿಯಲ್ಲಿ ಎಡಿಟ್ ಮಾಡಿ ಅವಳ ನಂಬರ್‌ನಿಂದಲೇ ಇತರರಿಗೆ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಕುರಿತು ಹರ್ಯಾಣದಲ್ಲಿ ಪೊಲೀಸ್ ದೂರು ದಾಖಲಾಗಿತ್ತು. ಹೊನ್ನಾವರ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ.
-ಶ್ರೀಧರ ಎಸ್.ಆರ್. ಸಿಪಿಐ ಹೊನ್ನಾವರ

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

3.8 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement